ಕಾವ್ಯ ಸಂಗಾತಿ
![](https://sangaati.in/wp-content/uploads/2023/08/mansurumulki-576x1024.jpg)
ಮನ್ಸೂರ್ ಮೂಲ್ಕಿ
ಸೊಗಸು
![](https://sangaati.in/wp-content/uploads/2024/06/istockphoto-1900755676-612x612-1.jpg)
ಕಣ್ಣು ತೆರೆದು ನಗುವ ಬರಿಸಿ
ಮುತ್ತ ಚೆಲ್ಲಿದೆ
ಮಾತು ಬರಲು ಪ್ರೀತಿ ಮೂಡಿ
ಹೃದಯ ಅರಳಿದೆ
ಅತಿಯಾದರು ಸಾಕಾಗದು ನಿನ್ನ ಪ್ರೀತಿಯು
ನಿನ್ನ ಹೆಸರೇ ನನಗೆ ಮೈಲಿಗಲ್ಲು
ದಿನವೂ ಅರಳೋ ಹೂವಿನಂತೆ
ದಿನವು ನೀನು ಹೂವ ಸೊಗಸು
ನಿನ್ನ ತುಟಿಯು ಹೂವ ಎಸಳು
ನಿನ್ನ ನಗುವೇ ನನ್ನ ಕಂಗಳು
ಒಂದೇ ಸವನೆ ಹರಿಯೋ ನದಿಯು
ನಮ್ಮ ಪ್ರೀತಿಯು ಪ್ರಕೃತಿಯ ಕೊಡುಗೆಯು
ತುಂತುರು ಮಳೆಗೆ ನಿನ್ನ ಕನಸು
ಮೂಡಿಬರಲು ನನಗೆ ಸೊಗಸು
ನಿಲ್ದಾಣವೇ ಬೇಡೆಂದಿದೆ ನಿನ್ನ ಪ್ರೀತಿಯು
ಕೊನೆಯವರೆಗೂ ನೀನೇ ಸಾರಥಿಯು
ಮನ್ಸೂರ್ ಮೂಲ್ಕಿ