ರಾಧಾಮಣಿ ಎಮ್ ಕೋಲಾರ ಅವರ ಕವಿತೆ-ವನಸಿರಿ ನಮ್ಮಯ ಐಸಿರಿ

ಪರಿಸರ ಮಾಲಿನ್ಯ ಮಾಡದಿರಿ ಕಾಪಾಡಿ ಗಿಡಮರಗಳ
ಜೀವ ಜಾಲದ ಸಂರಕ್ಷಕ ತರುಲತೆಗಳ
ಜತನದಿ ಉಳಿಸಿರಿ ಪ್ರಕೃತಿ ಸಂಪನ್ಮೂಲಗಳ
ನಿಸರ್ಗದ ಸೊಬಗಿನ ಅಮೂಲ್ಯ ಸಂಪತ್ತುಗಳ

ವನಸಿರಿ ನಮ್ಮಯ ಐಸಿರಿ
ತಲೆಗೊಂದು ಗಿಡವ ಬೆಳೆಸಿರಿ
ಜೀವಸಂಕುಲದ ಉಳಿವಿಗಾಗಿ
ಪರಿಸರ ಸಂರಕ್ಷಣೆಗೆ ಬದ್ಧರಾಗಿ ll ಈ ll

ನದಿಕಾಲುವೆ ಕೊಳ ಸಾಗರಕೆ
ಬಿಟ್ಟುಕೊಳೆ ನೀರ ವಿಷ ನೊರೆ ಅದಕೆ
ಜಲಚರಗಳ ಉಸಿರ ಕಟ್ಟಿಸಿ
ಕೊಲ್ಲುತಿಹರು ವಿಷಾನಿಲನೀರು ಆಹಾರ ಉಣಿಸಿ
ಸಾಕು ಇನ್ನೂ ಸಾಕು
ಶುದ್ಧ ಜಲ ಅಂತರ್ಜಲ ಕಾಪಾಡಬೇಕು ll ಈ ll

ಎಚ್ಚರ ಗೊಳ್ಳಬೇಕು ನಾವು
ಅರಿಯಬೇಕು ಪರಿಸರದ ನೋವು
ನಾಳಿನ ಪೀಳಿಗೆಗಾಗಿ
ಶುದ್ಧ ಗಾಳಿ ನೀರು ಆಹಾರಕಾಗಿ
ಬನ್ನಿರಿ ಎಲ್ಲರು ಕಂಕಣ ಕಟ್ಟಿರಿ
ನೆಲಜಲ ಪರಿಸರವ ಸಂರಕ್ಷಿಸಿರಿ ll ಈ ll


Leave a Reply

Back To Top