ಕಾವ್ಯ ಸಂಗಾತಿ
ಶೃತಿ ರುದ್ರಾಗ್ನಿ
ಎರಡು ಕವಿತೆಗಳು
ಕವಿತೆ-ಒಂದು
ನೀನಿರದ
ಜಗದಲ್ಲಿ
ಅರ್ಥವಿಲ್ಲದ
ಜಾಗವೇತಕೆ…?
ಹುಡುಕಾಟದ
ಹಮ್ಮಿನಲ್ಲಿ
ಹಾದಿ
ಮರೆತು
ನೀ ಬರೆದ
ಹಾಡಿನ
ಸಾಲಿನಲ್ಲೇ
ಹುಟ್ಟುವೆ…
ಒಲವಿನ
ಜನನಕ್ಕೆ
ಮತ್ತೊಮ್ಮೆ
ಪ್ರೀತಿ
ಶ್ವಾಸ
ಕೊಟ್ಟ
ಶಿವ ನೀನಲ್ಲವೇ…
ಗೀಚುವ
ಹಾಳೆಯಲ್ಲೆಲ್ಲಾ
ನಿನ್ನದೇ
ಹೆಸರಿನ
ಹುಚ್ಚು
ಕವಿತೆಗಳು
ನಿನಗಾಗಿ
ಮತ್ತೊಮ್ಮೆ
ಹುಟ್ಟಿಕೊಂಡು
ಹರನ
ಒಲಿಸಿಕೊಳ್ಳಲು
ಹೊಂಚು ಹಾಕಿದೆ…
ನಿನ್ನ
ಕಾಲಡಿಯ
ಮಣ್ಣನ್ನು
ಭದ್ರವಾಗಿ
ಭಸ್ಮ
ಮಾಡಿಕೊಂಡಿರುವೆನ್ನಲ್ಲಾ…?
ಹೆಚ್ಚು
ಹೊತ್ತು
ಮಾಡದೆ
ರುದ್ರಾಗ್ನಿಯ
ರುದ್ರನಾಗಿ
ಈ
ರುಧಿರ
ಗರ್ಭಗುಡಿಯಲ್ಲಿ
ಸೇರಿಬಿಡು…
ಸದಾ ಪೂಜೆ ನಿನ್ನ ಹೆಸರಲ್ಲೇ….
ಕವಿತೆ-ಎರಡು
ಹೃದಯದಲ್ಲಿನ
ಒಂದಷ್ಟು
ಅಕ್ಕರೆಯ
ಅಕ್ಷರ
ಆಸೆಗಳ
ಭಾರ ಹೊತ್ತು
ನಿಂತಿದ್ದೇನೆ…
ಮತ್ತಷ್ಟು
ಕಾಯಿಸುವ
ಅವನ
ಕವನಗಳು
ನನ್ನ
ಎದೆಯೊಳಗಿರುವ
ತಾಪಮಾನಕ್ಕೆ
ತತ್ವ ನುಡಿದು
ಸುಮ್ಮನಾಗಿದೆ.
ಒಂಚೂರು
ಅರ್ಥಮಾಡಿಕೋ!
ಎನ್ನುವ
ಮನಸಿನ
ಮಾತುಗಳು
ಮೌನದ
ಊರಿನ
ಪ್ರಯಾಣಿಕರಂತೆ
ನನ್ನ ನೋಡಿ ಅಣುಗಿಸಿದೆ.
ಒಮ್ಮೆ
ಬಂದುಬಿಡು
ಸನಿಹಕೆ
ಸತ್ವ ಕವಿತೆಗೆ
ಸಾರಾಂಶದ
ಸಾರದಂತೆ…
ಸಿಹಿ
ಅಧರಗಳ
ಬೆಲ್ಲದ ಅಂಚನು
ಸವಿದು
ನುಡಿಯುವ
ನಲ್ಮೆಗೆ…
ಈ ನನ್ನ
ಮನದಾಳದ
ಕೋರಿಕೆ…
ಶೃತಿ ರುದ್ರಾಗ್ನಿ
ಚೆಂದದ ಸಾಲುಗಳು