ಎ ಎಸ್ ಮಕಾನದಾರ ಕವಿತೆ-ಹನಿಗಳು

ರಾತ್ರಿ ಮಡಚಿ
ಬೇಗಲಿ ಆಕಳಿಸಿ
ಜಡ ಕೊಡಮಿ
*
ಮಾರವ್ವ ಅತ್ತೆ
ಫಕೀರರ ಓಣ್ಯಾ ಗ
ಫಿಕ್ರ್ ಬಿಡವ್ವ
*
ಮೀನಖಂಡವ
ಮುದ್ದಿಸಿದ ಮೀನಿಗೆ
ಹನಿಮೂನ್


ಕವಿತೆ : ಯೋನಿ
ಭೂಮಿ, ಆಕಾಶ, ನದಿ
ಹುಟ್ಟುವುದೆಲ್ಲಿ?

*
ನನ್ನ ಶರೀರ
ಕೆಂಡದ ಕಣ್ಣು ಉರಿ
ಅಜ್ಜಿಯೂ ಲಜ್ಜೆ

*
ಬೇಡ ನೆರಳು
ಬೇಡಲಾರೆ ದೀವಿಗೆ
ನನ್ನದೇ ನಡೆ

*
ದಾಸಾನು ದಾಸ
ತುಸು ಕಾವ್ಯನ ದಾಸ
ಕಾಳಿಯ ದಾಸ
*
ತಿಂದೆ, ಜಗಿದೆ
ತಿಂಡಿ ಪೋಕರೆಂದರು
ಮಬ್ಬು ಮಧ್ಯಾಹ್ನ


Leave a Reply

Back To Top