ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಅಜ್ಜ ನೆನಪಿಸಿದ
ಹರೆಯದ ನುಣುಪು,
ನುಡಿದಳಾ~ ಅಜ್ಜಿಯು
ಯಾಕೀ~ ಒಣ ನೆನಪು.
**
ವರವಾದ ಕಿವುಡು
ಕೇಳದು ಬೈಯುವದು,
ಕಿವಿ ಸನಿಹ ಮಾತು
ಮುತ್ತಂತೆ ಕಾಣುವುದು.
**
ಇಬ್ಬರೂ ಪರಸ್ಪರ
ಕಣ್ಣು, ಊರುಗೋಲಾಗಿ
ವೃದ್ಧಜೋಡಿ ಆದರ್ಶ
ನೀತಿಯು ನಮಗಾಗಿ.
**
ಕೇಳದ ಮುದಿಕಿವಿ
ಜೋರಾದ ಮಾತುಗಳು
ಗೌಪ್ಯತೆಯು ಇಲ್ಲದೆ
ಆಯ್ತು ಢಣಾ ಡಂಗುರ.
ಖಾಲಿ ಹೊಟ್ಟೆಯಲ್ಲೊಂದು
ಊಟವಾದ ಮೇಲೊಂದು,
ಬೇಕು ನಿದ್ರೆಗೂ ರಾತ್ರಿ
ಬಣ್ಣ ಬಣ್ಣದ ಮಾತ್ರೆ.
ವ್ಯಾಸ ಜೋಶಿ.
ಸುಂದರವಾದ ತನಗಗಳು ಸರ್
Sripad Algudkar ✍️