ಸವಿತಾ ದೇಶಮುಖ ಅವರ ಕವಿತೆ ಚಿತ್ ಜ್ಯೋತಿ

ಇಂದಿಗೆಂತು ನಾಳೆಗೆಂತೆಂದು ಚಿಂತಿಸದೇ
ಅಂತರ ಜಾತಿಯ ಶುಭವಾದ್ಯ ಸಂಸ್ಕರಣಿಸಿದೆ
ಎಲ್ಲವೂ ಜಂಗಮ ಲಿಂಗಮಯ ಮಾಡಿದಿ ಬಸವ
ಕಾಯಕದಿ ಕೈಲಾಸ ಧರೆಗಿಳಿಸಿದೆ
ನನ್ನಲ್ಲೇ ಬ್ರಹ್ಮಾಂಡವ ತೆರೆದು ತೋರಿದಿ
ಆಚಾರದಿ ಸ್ವರ್ಗವ ಮೆರೆಸಿದಿ
ಅನಾಚಾರದಿ ನರಕ ತೋರಿದಿ
ಅಷಾಟವಣಕ್ಕೆನಾಂದಿ ಹಾಡಿದಿ
ನುಡಿಯೊಳಗಾಗಿ ನಡೆಯದಿದ್ದರೆ
ಜವನವ ತೋರಿದಿ
ಬೆಳೆಸಿದೆ ಸಮತೆಯ ಸಂಸ್ಕೃತಿಯನ್ನು
ತೋರಿದೆ ಬಾಳಿಗೆ
ಹೊಂಗುರಿಯನು……
ಬಸವ ನೀನಾದೆ ಜಗದ
ಜ್ಞಾನಜ್ಯೋತಿ – ಚಿತ್ ಜ್ಯೋತಿ


Leave a Reply

Back To Top