ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸೂರ್ಯ ಉದಯಿಸುತ್ತಾನೆ
ಈಗ ಕೋಳಿ ಕೂಗುವದಿಲ್ಲ.
ಓಡುತ್ತಿದ್ದಾರೆ ಬದುಕಿನ ಬೆನ್ನ ಹತ್ತಿ
ರೈಲು ಬಸ್ ಆಟೋದಲ್ಲಿ ಪಯಣ
ಕಾರ್ಖಾನೆಗೆ ಜನರ ಜಂಗುಳಿ.
ಕೈಯಲ್ಲಿ ಮೊಬೈಲ್ ವಾಟ್ಸ್ ಆಪ್
ಜನರು ಮುಖ ಕೆಳಗಿಟ್ಟು ಬದುಕುತ್ತಾರೆ.
ನಗುವುದೇ ಕಡಿಮೆ .
ದುಗುಡು ತಳಮಳ ಆತಂಕ .
ದೇಶದಲ್ಲಿ ಬರ ಬಡತನ ‘
ಸುದ್ಧಿ ಮಾಧ್ಯಮಗಳ ಅಬ್ಬರ .
ದಿನಸಿ ಅಂಗಡಿಯ ಮುಂದೆ ಸಾಲು.
ಗುಡಿ ಮಸೀದೆ ಚರ್ಚು ಭಿಕ್ಷುಕರು.
ಜಾತ್ರೆ ಹಬ್ಬ ಮೊಹರಮ್ಮಿನ ಕುಣಿತ.
ಕಳೆದುಕೊಂಡಿದ್ದೇವೆ ಜೀವ ಜಾಲವ
ಕಾಣುತ್ತಿಲ್ಲ ಸಂತಸ ನೆಮ್ಮದಿ ದಿನಗಳು.
ಹುಡುಕುತ್ತಿರುವೆ ನನ್ನ ನಾನು
ಹೊಲದ ಗದ್ದೆಯ ಮಧ್ಯೆ
ಅಚ್ಚ ಹಸುರಿನ ಪೈರು
ಕೆರೆ ತುಂಬಿದ ನೀರು .
ಪಕ್ಷಿ ಇಂಚರ ಧ್ವನಿಯ ಕೊರಳು .

ಹುಡುಕುತ್ತಿರುವೆ ಹುಡುಕುತ್ತಲೇ ಇರುವೆ


About The Author

6 thoughts on “ಡಾ.ಶಶಿಕಾಂತ.ಪಟ್ಟಣ ಪುಣೆ ಕವಿತೆ-ಹುಡುಕುತ್ತಿರುವೆ”

  1. ಹುಡುಕುತ್ತಿರುವೆ…ಈ ಜನಜಂಗುಳಿಯಲ್ಲಿ ಎನ್ನುತ್ತಾ
    ಹುಡುಕುತ್ತಲೇ ಇರುವೆ… ಪಕ್ಷಿಯ ಇಂಚರದಲ್ಲಿ
    ಹಚ್ಚ ಹಸಿರಿನ ಪೈರಿನಲ್ಲಿ… ಒಟ್ಟಾರೆ ಪ್ರಕೃತಿಯ
    ಮಡಿಲಲ್ಲಿ ಎನ್ನುವ ನವಿರಾದ ಭಾವ ಎಲ್ಲರ ಮನ ತಟ್ಟುತ್ತದೆ.

    ಸುಶಿ

  2. ಜೀವನವೇ ಒಂದು ಹುಡುಕಾಟ!
    ಸುಂದರ ಕವನ.

    Angelina Gregory
    Akshara Foundation

  3. ನನ್ನವರೂಂದಿಗಿನಿನ ಹುಡುಕಾಟ .ದೇಶಿಯತೆ.ಪರಿಸರ ಪಕ್ಷಿ ಸಂಕುಲ ಮತ್ತು ಮಾನವ್ಯ ಮೌಲ್ಯ ಗಳನ್ನು
    ದಿಕ್ಕು ತಪ್ಪಿ ಹುಡುಕುವ ಹಂಬಲ.ಕವಿಯ ತೀವ್ರ ರತೆ.
    ಡಾ .ಕಸ್ತೂರಿ ದಳವಾಯಿ. ಗದಗ

  4. ಡಾ ವೀಣಾ ಯಲಿಗಾರ

    ತುಂಬಾ ಭಾವ ಪೂರ್ಣ ಸುಂದರ ಕವನ ಸರ್

  5. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಆಧುನಿಕ ಬದುಕಿನ ಓಟದಲ್ಲಿ ಹಚ್ಚ ಹಸುರಿನ ನಿತ್ಯ ಬದುಕಿನ ಆನಂದವನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವ ವಿಷಾದ ಭಾವ. ಅತ್ಯಂತ ಆಪ್ತ ಭಾವದ ಕವನ ಧನ್ಯವಾದಗಳು ಸರ್

Leave a Reply

You cannot copy content of this page

Scroll to Top