ಭಾರತದ ಪುಟ್ಬಾಲ್ ಚರಿತ್ರೆ ಬರೆದ ಚೆಟ್ರಿ(ಛೇತ್ರಿ).ವಿಶೇಷ ಲೇಖನ-ಸುರೇಶ ತಂಗೋಡ

     “ನಾನು ನನ್ನನ್ನು ಸುಧಾರಿಸಿಕೊಳ್ಳುತ್ತಲೇ ಇರಬೇಕು ಮತ್ತು ನನ್ನನ್ನೇ ಸವಾಲು ಮಾಡಿಕೊಳ್ಳಬೇಕು” ಎಂದು ಹೇಳಿ ಹಾಗೆಯೇ ಬದುಕಿದ ಆದರ್ಶ ವ್ಯಕ್ತಿ.ಕ್ರಿಕೆಟ್ ಹೊರತಾಗಿ ಉಳಿದ ಆಟಗಳು ಗೌಣವಾದ ಸ್ಥಿತಿಯಲ್ಲಿದ್ದ ಕಾಲದಲ್ಲಿ ಭಾರತೀಯರನ್ನು ಪುಟ್ಬಾಲ್ ಬಗ್ಗೆ ಅಭಿಮಾನ ಮೂಡಿಸುವಂತೆ ಮಾಡಿ, ಭಾರತೀಯ ಪುಟ್ಬಾಲ್ ರಂಗದಲ್ಲಿ ಚರಿತ್ರೆಯನ್ನೇ  ಬರೆದವರು ಸುನಿಲ್ ಚೆಟ್ರಿ(ಛೇತ್ರಿ).ಚಿಕ್ಕದಾದ ದೇಹ ಮತ್ತು ಅಷ್ಟೇ ಕರಾರುವಕ್ಕಾದ  ಮತ್ತು ನಿರ್ದಿಷ್ಟವಾದ ಗೋಲು ಗಳಿಸುವ “ಗೋಲ್ ಮಿಷನ್”.ಬದುಕಿದರೆ ಆತನಂತೆ ಬದುಕಬೇಕೆಂಬ ಮಾದರಿ ಜೀವನ ನಡೆಸಿದ ಭಾರತದ ಶ್ರೇಷ್ಠ ಕ್ರೀಡಾಪಟು.ಇಲ್ಲಿಯವರೆಗೂ ತನ್ನ ವೃತ್ತಿ ಜೀವನದಲ್ಲಿ ನಕರಾತ್ಮಕ ಸಂಗತಿಗಳಿಲ್ಲದೇ ಬದುಕಿದ ಉತ್ಕ್ರುಷ್ಟ ವ್ಯಕ್ತಿತ್ವ ಸುನಿಲ್ ಚೆಟ್ರಿಯವರದು.ನಿಜಕ್ಕೂ ಭಾರತೀಯರಿಗೆ ಪುಟ್ಬಾಲ್ ಎಂದ ತಕ್ಷಣ ನೆನಪಾಗುವ ಮೊದಲ ಹೆಸರು ಇವರದೇ .ಅದಕ್ಕಾಗಿಯೇ ಇವರನ್ನು ಭಾರತೀಯ ಪುಟ್ಬಾಲ್ ನ ದಂತಕಥೆಯೆಂದರೆ ಅತಿಶಯೋಕ್ತಿಯನಲ್ಲ‌.ಅಂತಹ ಸಾಧಕನನ್ನು ಸಂಭ್ರಮಿಸುವುದು ಈ ಹೊತ್ತಿನ ವಿಶೇಷ.

                                                              ನೇಪಾಳಿ ಹಿನ್ನೆಲೆಯ ಕುಟುಂಬದಲ್ಲಿ ಅಗಷ್ಟ್ ೦3,1984ರಲ್ಲಿ ಈಗಿನ ಸಿಕಿಂದರಾಬಾದನಲ್ಲಿ ಚೆಟ್ರಿಯವರು .ತಂದೆ ಕೆ.ಬಿ.ಚೆಟ್ರಿ  ಭಾರತೀಯ ಸೇನಾ ಅಧಿಕಾರಿಯಾಗಿದ್ದುಕೊಂಡು ಸೇನಾ ಪುಟ್ಬಾಲ್ ತಂಡದಲ್ಲಿ ಆಟಗಾರರಾಗಿದ್ದರು‌.ಇವರ ತಾಯಿ ಸುಶೀಲಾ ಚೆಟ್ರಿ ನೇಪಾಳದ ರಾಷ್ಟೀಯ ಮಹಿಳಾ ಪುಟ್ಬಾಲ್ ತಂಡದ ಆಟಗಾರ್ತಿಯಾಗಿದ್ದರು.ಇವರ ಸಹೋದರಿಯರಾದ ಸಶಾ ಮತ್ತು ಸುನಂದಾರವರು ಪುಟ್ಬಾಲ್ ಆಟಗಾರರು. ‌ಹೀಗೆ ಪುಟ್ಬಾಲ್ ಮನೆಯಿಂದ ಬಂದ ಪುಟ್ಬಾಲ್ ಕುಡಿ ,ಇಂದು ಇಡೀ ವಿಶ್ವವೇ ಬೆರಗುಗೊಳಿಸುವಂತಹ ಪುಟ್ಬಾಲ ಆಟಗಾರನಾಗಿ ಬೆಳೆದಿದ್ದು ಸಾಧನೆಯೇ ಸರಿ.

                               ಜೂನ್ 2005ರಲ್ಲಿ ತಮ್ಮ ಕ್ರೀಡಾ ವೃತ್ತಿ ಜೀವನವನ್ನು ಪ್ರಾರಂಭಿಸಿದ ಚೆಟ್ರಿ ಅಲ್ಲಿಂದ ಇಲ್ಲಿಯವರೆಗೂ  ಹಿಂದುರಿಗಿ ನೋಡಲೇ ಇಲ್ಲ‌.ಆತ ಹೊಡೆದ  ಪ್ರತಿಯೊಂದು ಹೊಡೆತವು ಗೋಲ್ ಗಳಾಗಿ ಭಾರತ ಪುಟ್ಬಾಲ್ ತಂಡಕ್ಕೆ ಹೊಸ ಭಾಷ್ಯ ಬರೆದವು.ಅವರು ಆಡಿದ ಮೊದಲ ಅಂತರಾಷ್ಟ್ರೀಯ ಕಪ್(ನೆಹರು ಕಪ್೨೦೦೭)ನಲ್ಲಿ ತಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದರು ಹಾಗೂ ಹಿರಿಯರಾದ ಬೈಚಿಂಗ್ ಭೂಟಿಯಾರಂತಹ ಅತಿರತರಿಂದ ಮೆಚ್ಚಿಗೆ ಪಡೆದರು.೨೦೧೧ರಲ್ಲಿ ಅರ್ಜುನ್ ಪ್ರಶಸ್ತಿ,ನಾಲ್ಕು ಬಾರಿ SAFF championship titlesವಿಜೇತರಾಗಿದ್ದಾರೆ.ಏಳು ಬಾರಿ  AIFF(All India Football federation)ನ ವರ್ಷದ ಆಟಗಾರ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ  ಚೆಟ್ರಿಯವರು.ಇಷ್ಟೇ ಅಲ್ಲದೇ ಭಾರತೀಯ ಪುಟ್ಬಾಲ್  ಇತಿಹಾಸದಲ್ಲಿ ಮೊದಲ ಬಾರಿಗೆ ೨೦೨೧ರಲ್ಲಿ  ಧ್ಯಾನ್ ಚೆಂದ ಕೇಲ್ ರತ್ನ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದು.ಸಾಧನೆಯಂದರೆ  ಇದು ಅಲ್ವೇ?.

                                          ವಿಶ್ವ ಕಂಡ ಶ್ರೇಷ್ಠ ಪುಟ್ಬಾಲ್ ಆಟಗಾರರಲ್ಲಿ ಕ್ರಿಶ್ಚಿಯಾನೋ ರೋನಾಲ್ಡೊ,ಲಿಯೋನಲ್ ಮೆಸ್ಸಿ ನಂತರದ ಸ್ಥಾನವನ್ನು ನಮ್ಮ ಭಾರತದ ಕುವರ ಸುನಿಲ್ ಚೆಟ್ರಿ ಪಡೆದಿರುವುದು ಇವರ ಸಾಧನೆಗೆ ಹಿಡಿದಿರುವ ಕೈಗನ್ನಡಿ.ಇವರು ಇಲ್ಲಿಯವರಿಗೆ ೧೫೦ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ೯೪ ಗೋಲುಗಳನ್ನು ಪಡೆದು ತಮ್ಮ ಹಿರಿಮೆಯನ್ನು ಮೆರೆದಿದ್ದಾರೆ.ಮುಂಬರುವ ಜೂನ್ ತಿಂಗಳ ೬ನೇ ತಾರೀಖೀನ ಪಂದ್ಯ ಇವರಿಗೆ ಕೊನೆ ಪಂದ್ಯವಾಗಲಿದೆ.ಈ ಸಂದರ್ಭದಲ್ಲಿ ಚೆಟ್ರಿಯವರಿಗೆ ನಾವು ಹೆಮ್ಮೆಯ ನಿವೃತ್ತಿ  ವಿದಾಯವನ್ನು ಹೇಳೊಣ.ಭಾರತದಲ್ಲಿ ಪುಟ್ಬಾಲ್  ಆಡುವ ಕೊನೆಯವರೆಗೂ ನಿಮ್ಮ ಹೆಸರು ಅಜರಾಮರವಾಗಿ ಉಳಿಯುವುದು.ಚೆಟ್ರಿ ಸೃಷ್ಟಿಸಿದ ಚರಿತ್ರೆ ಶಾಶ್ವತವಾಗಿರಲಿ,ಯುವಪೀಳಿಗೆಗೆ ಆದರ್ಶವಾಗಿರಲಿ.ಚೆಟ್ರಿ ಎಂಬ ಭಾರತದ ಸುಪುತ್ರನಿಗೆ ಒಳಿತಾಗಲಿ.


Leave a Reply

Back To Top