ವಿಶೇಷ ಲೇಖನ
ಲಲಿತಾ ಪ್ರಭು ಅಂಗಡಿ
ಬಿಸಿಲಿನ ಬವಣೆ (ಹಾಹಾಕಾರ)
ಬಿಸಿಲು,ಬಿಸಿಲು ಉರಿಬಿಸಿಲು, ಶಿವಾ ಶಿವಾ ಇದೆಂತಹ ಸೆಕಿರಿಯಪ್ಪಾ, ಯಾರಬಾಯಗರಿ ಕೇಳ್ರಿ ಮೊದಲ ಬರುದೇ ಇವೆ ನುಡಿಗಳು, ನಮ್ಮ ಕಡೆ 40ಡಿಗ್ರಿ ,ನಿಮ್ಮ ಕಡೆ ಎಷ್ಟರಿ, ಅಯ್ಯೋ ಶಿವನೆ ಇಲ್ಲಂತ್ರೂ 45,42ಡಿಗ್ರಿ ರಿ ಮನೆ ಬಿಟ್ಟು ಹೊರಗಡೆ ಬರೊದೆ ಅಸಾಧ್ಯ ಅಂತಹ ಬಿಸಿಲರಿ,,ಇದೆಂತಹ ಸೆಕಿರಿ ಯಪ್ಪಾ,ಕುಂತ್ರ ಸಮಾಧಾನ ಇಲ್ಲ,ನಿಂತ್ರು ಸಮಾಧಾನ ಇಲ್ರಿ, ಬೆವತು ಬೆವತು ಮೈಯಾಗ ನೀರು ಇಳಿಕತ್ತಾವ ನೋಡ್ರಿ, ಏಲ್ಲೆರ್ ತಣ್ಣೀರಗ ಕುಂದ್ರಗಾಗೈತಿ ನೋಡ್ರಿ,
ಹೆಣ್ಮಕ್ಕಳ ಪಜೀತಿಯಂತೂ ದೇವರಿಗೆ ಗೊತ್ತು ಅವರಿಗೆ ಗೊತ್ತು ನೋಡ್ರಿ,
ಅಡಿಗೆ ಮನೆಗ ಹೋಗಕ ಮನಸು ಒಲ್ಲೆ ಅಂತೈತಿ ನೋಡ್ರಿ, ನಾಕ್ ರೊಟ್ಟಿ ಮಾಡದ್ರೊಳಗ ಮೈಯಾಗ ನೀರು ದಳದಳ ಅಂತ ಇಳಿತಾವರಿ
ಶಿವ ಶಿವಾ ಈಸಲರ ಎಂತಾ ಬಿಸಿಲು ದೇವರೆ ಯಾವಾಗರ ಮಳೆ ಬಂದು ಭೂಮಿ ತಣ್ಣಗಾಗತ್ತಪ್ಪ, ದೇವರೆ ಕೊಡೊ ಯಪ್ಪಾ ಮಳೆ ಸುರಿಸೋ ಯಪ್ಪಾ ಮಳೆ, ಜನರೆಲ್ಲ ಕುದ್ದು ಕುದ್ದು ಹಣ್ಣಾಗಿಹೋಗ್ಯಾರ ಶಿವನೆ, ಇಷ್ಟೊಂದು ಕೋಪ ಯಾಕಪ ದೇವರೆ ಅಂತಾ ಅನ್ನೋದು,
ಹಿಂಗ ನೋಡ್ರಿ ಮನುಷನ ಬುದ್ದಿ ಎದಕರ ಸುಮ್ನೆ ಇರ್ತಾನೆ,ಯಾವುದಕ್ಕರ್ ಸಮಾಧಾನ ಐತೆ ನೋಡ್ರಿ ಅವ್ರಿಗೆ, ಮಾಡೋದು ಮಾಡಿಬಿಟ್ಟು, ಹೊಲ ಕೊಟ್ಟು ಬಿಲ್ಡಿಂಗ್ ಕಟ್ಟಿ,ಮಣ್ಣಿನ ದಾರಿ ಎಲ್ಲಾ ಕಾಂಕ್ರೀಟ್ ಮಾಡಿ,ಮರ ಕಡಿದು ಅರಣ್ಯ ನಾಶ ಮಾಡಿ, ಮಳೆ ಕೇಳ್ತಾರೆ ಏಲ್ಲಿಂದ ಬರಬೇಕು ಮಳೆ,?
ಯಾವುದಕ್ಕೂ ಸಮಾಧಾನ ಇಲ್ರಿ ಮನುಷಾಗ, ಕವಿ ಕೆ,ಎಸ್, ನರಸಿಂಹಸ್ವಾಮಿ ಅವರ ಹೇಳಿದಂತೆ
ಚಳಿಗಾಲ ಬಂದಾಗ ಎಷ್ಟೆಲ್ಲ ಚಳಿ ಎಂದರು
ಬಂತಲ್ಲ ಬೇಸಿಗೆ ಕೆಟ್ಟಬಿಸಿಲೆಂದರು
ಮಳೆಗಾಲ ಬಂದಾಗ ಬಿಡದಲ್ಲ ಶನಿ ಎಂದರು.ಹೀಗೆ ಎಲ್ಲದಕ್ಕೂ ಹೆಸರಿಟ್ಟು ನಿಸರ್ಗವ ಹಾಳು ಮಾಡುವ ಮನುಷ್ಯನ ಸಹಜ ಗುಣ,ತನ್ನಿಂದ ಏನ್ ತಪ್ಪಾಗಿದೆ ಅಂತ ನೋಡಿಕೊಳ್ಳೊದಿಲ್ಲ ,
ಇದ ಸುದ್ದಿ ಇದ ಸುದ್ದಿ, ನಿಮ್ಮ ಕಡೆ ಹ್ಯಾಂಗ್ ಇಲ್ಲಿ ಅಂತ್ರೂ ಬಿಸಿಲ ಮುಟ್ಟಿ ನೋಡಿಕೆಣ್ಣಂಗ ಐತೆ ನೋಡ್ರಿ, ಎಂತಹ ಬಿಸಿಲ್ರಿ ಬರಿ ನೀರು ಕುಡಿದು ಕುಡಿದು ಹೊಟ್ಟೆ ಉಬ್ಬಿ ಹೋಗೈತಿ ನೋಡ್ರಿ, ಯಾವಾಗರ ಮಳೆರಾಯ ಕಣ್ ತೆರಿತಾನ ನೋಡ್ರಿ, ಅಲ್ಲಾ ನಾವು ಹ್ಯಾಂಗರ ಮಾಡೆವು ,ಬಾಯಿ ಇಲ್ಲದ ದನಕರುಗಳು, ಪ್ರಾಣಿಪಕ್ಷಿಗಳು ಎನ್ ಮಾಡಬೇಕ್ರಿ? ಅವುಗಳ ಸಂಕಟರ ಅರ್ಥ ಮಾಡಿಕೊಂಡು ಮಳೆ ಕೊಡಬೇಕು ದೇವರು ಅನ್ನೊದು,
ಬಿಸಿಲಿನ ಬೇಗೆ,ಬಿಸಿಲಿನ ಝಳಕ್ಕೆ ಅಲ್ಲಿ ಸತ್ರೂ,ಇಲ್ಲಿ ಸತ್ರೂ ಅನ್ನೊದು ಕೇಳಿ ಯಪ್ಪಾ ಬಿಸಿಲಿನ ಬವಣೆ ಬಿಸಿಲಿನ ತಾಪ ಸೂರ್ಯನ ಪ್ರಕೋಪ, ಸೂರ್ಯನ ಮುನಿದ ಶಕ್ತಿ ಎಂತಹ ಪ್ರಕಾಂಡವಾಗಿದೆ ನೋಡಿ,
ಆದರೂ ಇಂತಹ ಬಿಸಲಾಗ ಮಕ್ಕಳು ಕೇಳಾಂಗಿಲ್ಲ ನೋಡಿ,ರಜೆ ಬಿಟ್ಟಿತು ಶಾಲೆ ಅಂದ್ರೆ ಆಟ ಆಡೋಕೆ, ಕ್ರಿಕೆಟ್ ಅಂತಾ ಬೇರೆ ಬೇರೆ ಆಟಂತಾ ಬಿಸಲಾಗ ಹೋಗ್ತಾವ್ರಿ ಆಡೋಕೆ,ತಂದೆ ತಾಯಿ ಪೋಷಕರಿಗಂತೂ, ಬೇಸಿಗೆ ರಜೆ ಯಾಕರ ಕೊಟ್ಟಾರಪ್ಪ ಮಕ್ಕಳಿಗೆ ಅಂತಾ ಅನಿಸುತ್ತೆ ನೋಡ್ರಿ,
,ನೀರ್ ಇಲ್ಲ, ಊಟ ಇಲ್ಲದೆ ಹಿಂಗ ಗಣ ಗಣ ತಿರಗತಾವ ನೋಡ್ರಿ
ಬಿಸಿಲಂಬೊದು ಬೆಂಕಿ ಬೆಂಕಿ ಇದ್ದಂಗೆ ಐತ್ರಿ ಹಿಂಗ ತಿರಗತಾವ ನೋಡ್ರಿ, ಮಾತ ಕೇಳವಲ್ಲವು, ಫೋನ್ ಮಾಡಿದರ ಫೋನ್ ಎತ್ತವಲ್ಲವು ಅನ್ನೊದು ಕೇಳಿ ಪೋಷಕರು ಪಡುವ ಕಾಳಜಿ ಗೊತ್ತಾಗುತ್ತೆ,
ಅದರಾಗ ಈ ವರ್ಷದ ಬಿಸಿಲಿನ ತಾಪ ಝಳಕ್ಕೆ ಎಲ್ಲರೂ ಸೂರ್ಯಪ್ಪನ ಬೈಯೋದೆ ಬೈಯೋದೆ ಏನ್ ಇಷ್ಟ್ ಸಿಟ್ಟಾಗಿ ವಕ್ರದೃಷ್ಟಿ ಬಿಟ್ರೆ ಹ್ಯಾಂಗ್ ಸಹಿಸೋದು ದೇವರೆ ಸ್ವಲ್ಪ ಸಮಾಧಾನ ಇರಲಿ ಅನ್ನುವ ಮಾತು,
ಹೂಂ ಆತರ ಯಾಕೆ ಕೇಳ್ತಾನ್ರಿ, ಮಾಡಿದ್ದುಣ್ಣೋ ಮಾರಾಯ,ಅನ್ನುವ ಹಾಗೆ,ನೀವು ಮಾಡಿರಿ ಅನುಭವಸ್ರಿ ಅಂತಾನೆ ಆತ್ನು.
ಮುಂಜಾನೆ ಎಂಟ್ ಗಂಟೆಗೆ ಬಿಸಿಲಿನ ತಾಪ ಶುರುವಾಗಿ ರಾತ್ರಿ ಎಳರವರೆಗೆ ಬಿಸಿಬಿಸಿ ಎಂತಾ ಕುದಿ,ಎಂತಾ ಉಮ್ರ್,ಕಿತನಾ ಗರಮಿ ಹೈ ,ಅಂತಾ ಹರೇ ಶಿವನೇ ಪ್ಯಾನ್ ಗಾಳಿ ಕೂಡ ಬಿಸಿ ಬಿಸಿ ಒಟ್ಟ್ ಸಮಾಧಾನ ಇಲ್ನೊಡ್ರಿ ಅನ್ನೋದು ಎಲ್ಲರೂ,
ಯವ್ವಾ ಚಳಿಗಾಲ ಬಂದ್ರೆ ಹೆಂಗರ ಮುಚ್ಚಿಕೊಂಡು ಮಲಗಬಹುದು ,ಈ ಬ್ಯಾಸಿಗಂದ್ರ ತಡಕೊಳ್ಳೋಕೆ ಆಗೊದಿಲ್ಲ ನೋಡಿ ಅನ್ನೊ ಅಂಬೋಣ,
ತಂಡ್ಯಾಗ ಮೈತುಂಬ ಬಟ್ಟೆ ಉಟಕೊಂಡ್ರ,
ಬ್ಯಾಸಿಗಾಗ್ ಬಟ್ಟೆರ್ ಬಿಚ್ಚಿ ಹೊಗಿಬೇಕು ಅಂತ ಅನಿಸೈತೆ ನೋಡ್ರಿ ಅಂತಾರ,ಅದಕ ನಮ್ಮ ಹಳ್ಳಿ ಕಡೆ ಹಿರಿಯರು ಹಿಂಗ್ ಅಂತಿದ್ರು.
ಚಳಿಗಾಲ ಪತಿವ್ರತೆ
ಬ್ಯಾಸಿಗಿ ಹಾದರಗಿತ್ತಿ ಅಂತಾ, ,(ಇದು ಕಾಲಮಾನಕ್ಕೆ ಧರಿಸುವ ಬಟ್ಟೆ ಕುರಿತು)
ಕೆಲವೊಂದು ಜಾತಿಯ ಪ್ರಾಣಿಗಳು ಪಕ್ಷಿಗಳು ಜೀವಜಂತುಗಳು ಬಿಸಿಲಿನ ತಾಪಕ್ಕೆ ಹೊರಗಡೆ ಬಂದು ಆಕ್ರಂದನ ಮಾಡುವುದನು ಕಾಣುತ್ತೇವೆ,
ಹವಾಮಾನ ವರದಿ ತಜ್ಞರು ಸೂಚನೆ ಹಾಕ್ತಾ ಇರೋದು ಕೇಳ್ತಾ ಇದ್ದೆವೆ, ಬಿಸಿಲಿನ ತಾಪಮಾನ ಏರಿಕೆಯಾಗಿದೆ ಮದ್ಯಾಹ್ನ ಹನ್ನೆರಡರಿಂದ ಐದು ಗಂಟೆಯವರೆಗೆ ಹೊರಗಡೆ ಬರದೇ ಇರುವುದು ಸುರಕ್ಷಿತ ಅಂತಾ ಅಲ್ಲವೇ
ಬಿಸಿಲಿನಿಂದ ಚರ್ಮ ರೋಗ, ಮೂರ್ಛೆ ಬರುವುದು, ನಿರ್ಜಲೀಕರಣ ಆಗುವುದಲ್ಲದೆ,ಆಯಾಸ ಆಗುವುದನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು,ಮೊಸರು ಮಜ್ಜಿಗೆ, ಸೇವನೆ, ಶರಬತ್, ಎಳೆನೀರು,ಹಣ್ಣು ಹಂಪಲು,ಹಸಿರು ತರಕಾರಿಗಳ ಬಳಕೆ,ಮ್ರದು ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಗಮನಹರಿಸಿಬೇಕಾಗಿದೆ.
ಇಂತಹ ಬಿಸಿಲಿನಲ್ಲಿ ,ರೈತರು, ಕಾರ್ಮಿಕರು,ಸೈನಿಕರು, ತರಕಾರಿ ಮಾರುವವರು ,,,,,ತಮ್ಮ ನಿತ್ಯ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಬಿಸಿಲಿನ ಬೇಗೆ ಸಹಿಸಿಕೊಂಡು ಉದರ ಪೋಷಣೆಗಾಗಿ ದುಡಿದು ಇನ್ನೂಬ್ಬರ ಉದರ ತುಂಬಿಸುವ ಅವರಿಗೆ ಒಂದು ಸೆಲ್ಯೂಟ್ ಹೇಳಲೆಬೇಕು ನೋಡಿ,
ಕೆಲವೊಂದು ಜಾತಿಯ ಹಣ್ಣುಗಳು ಬೇಸಿಗೆಯಲ್ಲಿ ಫಲ ಕೊಡುತ್ತವೆ,
ಅಷ್ಟೆ ರೈತನು ಬೆಳೆದ ಕಾಳು ಕಡಿಗಳನು ಒಣಗಿಸಿಲು ಬಿಸಿಲು ಅವಶ್ಯಕತೆ ಇದೆ,
ಮತ್ತೆ ಗ್ರಾಮೀಣ ಪ್ರದೇಶದ ಮಹಿಳೆಯರು ಹಪ್ಪಳ ,ಸಂಡಿಗೆ,ಶೇವಿಗೆಯನ್ನು, ಬೇಸಿಗೆ ಕಾಲದಲ್ಲಿ ಮಾಡಿ ಸಂಗ್ರಹಿಸಿಡುವ ಕಾಲ ,
ಈಗ ಎಲ್ಲವೂ ಮಶೀನ್ ಬಂದು ಮಾಡುವವರೆ ಕಡಿಮೆಯಾಗಿದೆ,.
ಪ್ರಕ್ರೃತಿಯ ಕೊಡುಗೆ ಅಪಾರವಾಗಿದೆ ನೋಡಿ,ಅದನು ವಿಕ್ರೃತಿ ಗೊಳಿಸುವ ಮಾನವನ ಮುಂದುವರಿದ ಅತೀಯಾದ ಬುದ್ದಿವಂತಿಕೆಯಿಂದ ಮಾನವರೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ,ಅತೀಯಾದರೆ ತೊಂದರೆ ಆಗುವುದು ಸಹಜ ಅದನರಿತು ಎಚ್ಚರಿಸುವ ಕಾಲ,ಬಂದದ್ದನು ಎದುರಿಸುವ ಮನೋಬಲ ನಮ್ಮದಾಗಲಿ ಏನಂತಿರಾ?
ಲಲಿತಾ ಪ್ರಭು ಅಂಗಡಿ