ಪ್ರೀತಿ ಒಂದು ಟಿಪ್ಪಣಿ- ಮಾಧುರಿ ದೇಶಪಾಂಡೆ

ನಮ್ಮ ಕನ್ನಡ ಭಾಷೆ ಬಹಳ ವಿಶಾಲವಾದದ್ದು, ಒಂದೇ ಪದಕ್ಕೆ ಹತ್ತಾರು ಭಾವನೆಗಳನ್ನು ಬಳಸಬೇಕು ಅಂತಿಲ್ಲ.  ಅದಕ್ಕೆ ಉತ್ತಮ ಉದಾಹರಣೆ ಈ ಪ್ರೀತಿ ಎನ್ನುವ ಪದ. ಆಂಗ್ಲದಲ್ಲಿ ಲವ್‌ ಅಂದರೆ ಪ್ರೀತಿ, ಪ್ರೇಮ, ಪ್ರಣಯ ಹೀಗೆ ಬಹಳಷ್ಟು ಪದಗಳ ಸಮಾನಾರ್ಥಕ ಪದವಾಗುತ್ತದೆ.  ನಮ್ಮಲ್ಲಿ ತಾಯಿ ಮಕ್ಕಳ ಪ್ರೀತಿಗೆ ವಾತ್ಸಲ್ಯ ಎನ್ನುತ್ತೇವೆ, ಹುಡುಗ-ಹುಡುಗಿ ಪ್ರೀತಿಗೆ ಪ್ರಣಯ ಅನ್ನುತ್ತೇವೆ.  ನಮ್ಮಲ್ಲಿ ಒಂದೇ ಭಾವಕ್ಕೆ ಹಲವಾರು ಪದಗಳು.  ಪ್ರೀತಿಯ ಅರ್ಥ ಖಚಿತವಾಗಿ ಹೇಳಲು ಕಷ್ಟು ಸಾಮಾನ್ಯವಾಗಿ ನಮಗೆ ಯಾರಾದರೂ ಒಬ್ಬರನ್ನೋ ಅಥವಾ ಯಾವುದೇ ವಸ್ತುವನ್ನು ಬಿಟ್ಟಿರಲಾರದಷ್ಟು ಮೋಹ ಬಂದರೆ ಅದನ್ನು ಪ್ರೀತಿ ಎಂದು ಅರ್ಥ ಮಾಡಿಕೊಳ್ಳುತ್ತೇವೆ.

ಪ್ರಪಂಚ ನಡೆಯುವುದೇ ಈ ಪ್ರೀತಿಯ ಆಧಾರದ ಮೇಲೆ, ಮಗು ಮೊದಲು ಕಾಣುವುದೇ ತಾಯಿಯ ಪ್ರೀತಿಯನ್ನು, ನಂತರ ತಂದೆ, ಸಹೋದರ, ಸಹೋದರಿಯರು, ಬಂಧು ಬಾಂಧವರು,  ನಂತರ ಶಿಕ್ಷಕರು, ಸ್ನೇಹಿತರು ಹೀಗೆ ಪ್ರೀತಿ ತೋರುವ ಜನರ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ.  ಸಣ್ಣ ಮಕ್ಕಳಿದ್ದಾಗ ಈ ಪ್ರೀತಿ ಎಂದರೆ ಏನು ನಾವು ಯಾರನ್ನು ಪ್ರೀತಿಸುತ್ತೇವೆ ನಮ್ಮ ಜೀವನದಲ್ಲಿ ಪ್ರೀತಿ ಪಾತ್ರರು ಯಾರು ಎಂಬ ಅರಿವೇ ಇರುವುದಿಲ್ಲ. ದಿನಗಳೆದಂತೆ ತಿಳುವಳಿಕೆ ಬಂದಂತೆ ಪ್ರೀತಿಯ ಭಾವ ಮನಸ್ಸಿನಲ್ಲಿ ಜಾಗೃತವಾಗುತ್ತದೆ ಮತ್ತು ನಮ್ಮನ್ನು ಯಾರಾದರೂ ಪ್ರೀತಿ ಮಾಡಲಿ ಎಂದು ಭಾವನೆ ಸಹಜವಾಗಿ ಹುಟ್ಟುತ್ತದೆ. ಆಗ ಪ್ರೀತಿಯ ಹುಡುಕಾಟ ಆರಂಭವಾಗುತ್ತದೆ.

ಪ್ರೀತಿಯ ಬಗೆಗೆ ಎಲ್ಲ ಭಾಷೆಗಳಲ್ಲೂ ಕವಿತೆಗಳನ್ನು ಎಷ್ಟೋ ಜನ ಕವಿಗಳು ಬರೆದಿದ್ದಾರೆ. ನನಗೆ ಮನಸ್ಸಿಗೆ ಹಿಡಿಸಿದ್ದು ಜಯಶಂಕರ ಪ್ರಸಾದರ “ಮುಝೆ ಪ್ಯಾರರ್‌ ನ ಮಿಲಾ” ಎಂಬ ಕವಿತೆ ಆ ಕವಿತೆಯ ಆಶಯ ಕವಿ ಒಮ್ಮೆ ಪ್ರೀತಿಯನ್ನು ಹುಡುಕಲು ಹೊರಡುತ್ತಾರೆ ಅವರಿಗೆ ಎಲ್ಲ ಪ್ರೀತಿ ಸಿಗುತ್ತಿಲ್ಲ ಎಂಬ ಭಾವನೆ ಬರುತ್ತದೆ ಅದೇ ನಿಟ್ಟಿನಲ್ಲಿ ಅವರು ಯೋಚಿಸುತ್ತಿರುವಾಗ  ಅವರಿಗೆ ಅನಿಸುತ್ತದೆ, ಇಷ್ಟು ದಿನ ನನ್ನನ್ನೇ ಪ್ರೀತಿ ಮಾಡಲಿ ಎಂದು ಹೊರಟಿದ್ದೆ ಆದ್ದರಿಂದ ಸಿಗುತ್ತಿಲ್ಲ, ನಾನು ಬೇರೆಯವರನ್ನು ಪ್ರೀತಿಸಿದಾಗ ಸಿಗಬಹುದೇನೋ ಎನ್ನುತ್ತಾರೆ.

ಬನ್ನಿ ಪ್ರೀತಿ ಹಂಚೋಣ. ನಿಸ್ವಾರ್ಥ ಪ್ರೀತಿಗೆ ಕಳೆದು ಕೊಳ್ಳೋದು ಏನು ಇಲ್ಲ, ಮಾನವೀಯತೆ, ಸೌಹಾರ್ದತೆ ಎಂಬ ದೊಡ್ಡ ದೊಡ್ಡ ಶಬ್ದ ಎಲ್ಲಾ ಬೇಡ. ಜೀವನಕ್ಕೆ ಸರಳ ದಾರಿ  ಜೀವನದಲ್ಲಿ ಬರುವ ಎಲ್ಲ ವ್ಯಕ್ತಿಗಳನ್ನು ಪ್ರೀತಿಸಿ ನಮಗೆ ಅಂತ ದೊರೆತ ವಸ್ತುಗಳನ್ನು ಪ್ರೀತಿಸಿ ಯಾರಾದರೂ ಪ್ರೀತಿ ತೋರಿಸುತ್ತಾರೆ. ಪ್ರೀತಿ ಜೀವನದ ಸಾರ. ಜೀವನವನ್ನು ಪ್ರೀತಿಸೋಣ, ಜೀವಿಗಳನ್ನು ಪ್ರೀತಿಸೋಣ.


Leave a Reply

Back To Top