ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ಅಂಧಕಾರವ ತೊಡೆಯಲು ಬೆಳಗುವ ಕಿರುಜ್ಯೋತಿ ಸಾಕಲ್ಲವೇ
ಅಹಂಕಾರವ ಹೊಡೆದೋಡಿಸಲು ಅರಿವಿನ ಜ್ಯೋತಿ ಸಾಕಲ್ಲವೇ
ದ್ವೇಷ ಅಸೂಯೆಯ ಮರೆಯಲು ಪ್ರೀತಿಯ ಜ್ಯೋತಿ ಸಾಕಲ್ಲವೇ
ಸ್ವಾರ್ಥ ದುರಾಸೆಯ ತೊರೆಯಲು ನಿಸ್ವಾರ್ಥದಜ್ಯೋತಿ ಸಾಕಲ್ಲವೇ
ಅರಿವು ಆಚಾರ ಬೆಳಗಲು ಗುರುಕರುಣಾ ಜ್ಯೋತಿ ಸಾಕಲ್ಲವೇ
ವಿದ್ಯಾ ಬುದ್ಧಿಯದು ವಿಕಸಿಸಲು ಜ್ಞಾನದಾ ಜ್ಯೋತಿ ಸಾಕಲ್ಲವೇ
ಶಾಂತಿ ಸಹನೆಯು ಪ್ರಕಾಶಿಸಲು ತೃಪ್ತಿಯಾ ಜ್ಯೋತಿ ಸಾಕಲ್ಲವೇ
ಎಲ್ಲರಂದೆಂಬ ಭಾವ ಚಿಗುರಲು ಏಕತೆಯಾ ಜ್ಯೋತಿ ಸಾಕಲ್ಲವೇ
ಸ್ವೆಚ್ಚೆಯ ಸೆರಗು ಅಳಿಯಲು ಜವಾಬ್ದಾರಿಯ ಜ್ಯೋತಿ ಸಾಕಲ್ಲವೇ
ಭ್ರಮೆಯ ಪಿಡುಗು ತೊಳೆಯಲು ತಿಳುಹಿನ ಜ್ಯೋತಿ ಸಾಕಲ್ಲವೇ
ಆಸೆಯ ಭೂತ ಹೊಡೆದೊಡಿಸಲು ಉರಿವ ಜ್ಯೋತಿ ಸಾಕಲ್ಲವೇ
ನಸೆಯ ತೃಷೆಯನು ತೀರಿಸಲು ಸಂತೃಪ್ತಿಯ ಜ್ಯೋತಿ ಸಾಕಲ್ಲವೇ
ಅನುವಿನಂತರಾಳ ಅರಳಲು ಶಿವ ಕರುಣೆಯಾ ಜ್ಯೋತಿ ಸಾಕಲ್ಲವೇ
ಜೀವನ ಸಾರ್ಥಕವಾಗಲ ನಿಷ್ಟ ಸೇವಾಪರತೆಯಾ ಜ್ಯೋತಿ ಸಾಕಲ್ಲವೇ
ಡಾ ಅನ್ನಪೂರ್ಣ ಹಿರೇಮಠ
ಜೀವನದ ಸಾರ್ಥಕ ಭಾವದ ಅತ್ಯುತ್ತಮ ಗಝಲ್
Nice madum