ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಪರಿಧಿಯೊಳಗೆ
ಒಂದು ಮನಸಿನ ಪರಿಧಿಯೊಳಗೆ
ಸುಪ್ತ ಸಾಗರದಲೆಗಳು
ಒಂದು ಕನಸಿನ ನೋಟದೊಳು
ಸುತ್ತಿಕೊಳ್ಳುವ ಕತೆಗಳು
ಒಂದು ಗೂಡಿನ ಮೂಲೆಯೊಳಗೆ
ಹಕ್ಕಿ ಹಾಡಿನ ಪುಟ್ಟ ಮರಿ
ಒಂದು ಚಿತ್ರದ ಬಣ್ಣದೊಳಗೆ
ನಗುತಲಿರುವ ಬಣ್ಣದ ಗರಿ
ಮುದ್ದು ನಗುವ ಮೊಗದೊಳಗೆ
ಮೋಹ ಮನದ ಬಿಂದು
ಹೆಜ್ಜೆ ಗೆಜ್ಜೆ ಒಲವಿನೊಳಗೆ
ಪ್ರೀತಿ ಹಂಚುವ ಎಂದು
ಚೆಂದ ಭೂಮಿ ಅಂದ ಬಾನು
ಚಿಗುರು ಹೂ ಸುತ್ತಲೂ
ಮಣ್ಣಿನಂದ ಜೀವ ಭಾವ
ಸುತ್ತ ಚೆಲುವು ಎತ್ತಲೂ
ಹಲವು ರಾಗ ಹೊಸತು ಯೋಗ
ತುಂಬಿ ತುಳುಕಿದ ಇಳೆ
ಸಗ್ಗದಂತ ಸುಗ್ಗಿ ಹಾಡು
ಹಿಗ್ಗಿ ನಿಂತ ಜೀವಿತದ ಎಳೆ
ನಾಗರಾಜ ಬಿ.ನಾಯ್ಕ
ಮಸ್ತ್ ಆಗಿದೆ.
ಧನ್ಯವಾದಗಳು ತಮ್ಮ ಓದಿಗೆ……
ಬದುಕು ಭಾವನೆಗಳ ಸಂಗಮ. ಭಾವನೆಗಳು ಬದುಕಿನ ಜೀವಂತಿಕೆಗೆ ಸಾಕ್ಷಿ… ದಿನನಿತ್ಯ ಬದುಕಿನಲ್ಲಿ ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಕಂಡುಬರುವ ನಿತ್ಯ ನೂತನ ಸುಂದರ ಚಿತ್ರಣ, ಸುಂದರವಾದ ಕವಿತೆ. ಕವಿತೆ ಮನದ ತುಂಬಾ ಸುಂದರ ಚಿತ್ರಣವನ್ನು ಮೂಡಿಸುತ್ತದೆ.
ನಾನಾ
ಧನ್ಯವಾದಗಳು ತಮ್ಮ ಓದಿಗೆ…… ಆಪ್ತ ಪ್ರತಿಕ್ರಿಯೆಗೂ