ಕಾವ್ಯ ಸಂಗಾತಿ
ಸವಿತಾ ದೇಶಮುಖ
ತುಂಬಿ ಬಂದಿದೆ
ತುಂಬಿ ತುಳುಕುತ್ತಿದೆ
ಎನ್ನ ಮನ
ನಿನ್ನ ವಿರಾಟ
ಅಗಮ್ಯ ಸೃಷ್ಟಿ ನೋಡಿ
ಬ್ರಹ್ಮಾಂಡದ ಮೋಡಿ
ಸತ್ಯ ಶೋಧಿಸುವ ಪದ್ಮಪಾಣಿ
ಕಣ್ತುಂಬಿ ಬಂದಿದೆ
ನಿನ್ನ ಸೃಷ್ಟಿಯ ವಿಕಲ್ಪ ನೋಡಿ
ತಲೆಯೆತ್ತಿ ಎತ್ತರಕ್ಕೆ ನಿಂತ
ವೃಕ್ಷಗಳ ಸಾಲುಗಳು
ಬಾನ ಚಾಚಿ ಹಬ್ಬಿ ಹೆಣೆದ ಬಳ್ಳಿ
ಹಚ್ಚ ಹಸಿರು ಬನವು
ಎತ್ತಿ ಸ್ವಾಭಿಮಾನದ ಸಿರಿಯು
ಕಿವಿಯು ತುಂಬಿ ಬಂದಿದೆನ್ನ
ಝರಿ ಹಳ್ಳಗಳ ಕಲವರಹವ
ಹಕ್ಕಿ ಪಕ್ಷಿಗಳ ಇಂಚರಧ್ವನಿ
ಪ್ರಕೃತಿಯ ತಿರುಳು
ನಿತ್ಯ ಸುಖಕೆ ಪಥವ
ತೋರುವ ತಾಣವು
ಕುಳಿತಿರಲು ಧ್ಯಾನದಿ
ನಿನ್ನ ಸಿರಿಯ ಮಧ್ಯದಿ
ಎದೆ ತುಂಬಿ ತುಳುಕಿತು
ಅರಳಿತು ಮಂದಾರ
ಎಂಟನೆಯ ಎಳೆತನದ ದಾರಿ
ನೀ ಯಾರು ಯಾಕೆ ಇಲ್ಲಿಗೆ
ಮೂಡಿ ಬಂದೆಡೆ ಪ್ರಶ್ನೆ
ಹೊಸ ಹುಮ್ಮಸ್ಸಿಗೆ
ಎಸೆದಿಹುದು ದಾರಿ
ಬ್ರಹ್ಮಾಂಡವೇ ನೀನು
ನೀನೇ ಬ್ರಹ್ಮಾಂಡ
ಮನವು ಹಳವಂತೆ ಹರಿದು
ನೆಲೆಸಿತ್ತು ಶಾಂತಿಯು
ತುಂಬಿ ಬಂದಿತು ಭಾವ ಉಕ್ಕಿ
ಶಕ್ತಿ ಭಕ್ತಿಯಲಿ ಒಂದಾಗಲು
ಸತ್ಯ ಧರ್ಮಕ್ಕೆ ಒಂದೇ ದಾರಿ
ಪರಿಶುದ್ಧ ಪ್ರೇಮ ಪ್ರೀತಿ
ಮಧುರ ಸತ್ಯಕ್ಕೆ
ಅನಾವರಣವು.
ಸವಿತಾ ದೇಶಮುಖ
Thanku so much
ಪ್ರಕೃತಿಯ ನಡುವೆ ವಿಸ್ಮಯದ ಸೃಷ್ಟಿ ಸುಂದರ ಕವನ
Thank you