ಕಾವ್ಯ ಸಂಗಾತಿ
ಎನ್.ಜಯಚಂದ್ರನ್ ಕವಿತೆ-ಕನಸಿನ ಬೇಲಿ
ಎನ್.ಜಯಚಂದ್ರನ್
ಕನಸಿನ ಬೇಲಿ
ಭೂಮಿ ಬರಡಾಗಿ ಗಿಡ ಮರ ಒಣಗಿ
ಮರೆಯಾದರೂ,
ಕೆಂಡವಾಗಿ ಕಾಯುತ್ತಿದೆ ನೆಲ.
ದುಡಿದುಡಿದು ಸವ್ಹೆದೋದ
ನನ್ನ ಜನ ಬೇಲಿ ಮೇಳೆಯ
ಮರೆಯಲ್ಲಿ ನಿಂತು,
ಒಡಲಲ್ಲಿ ಜೀವ ಹಿಡಿದಿಟ್ಟು
ಅನ್ನಕ್ಕಾಗಿ ಉಸಿರ ಬಿಗಿದಿಟ್ಟು
ಕಾಯುತ —-
ಬಾಳೆಲ್ಲ ಹಿಂಗಾಯ್ತು,
ಗೋಳಿನ ಪದವಾಯ್ತು
ಮುಂದೊಂದು ದಿನ
ಉರಿವ ಧರೆಗೆ ಭೋರ್ಗರೆದು
ಮಳೆ ಸುರಿವುದು,
ನೆಲ ತಂಪಾಗುವ ಭರವಸೆಯಲಿ
ಬರುವ ನಾಳೆಗಳ ನೆನೆದು
ಮೌನವೇ ಧ್ವನಿಯಾಗಿ
ಕನಸುಗಳ ನಂಟು ಹೊತ್ತು,
ಕತ್ತಲೆ ಸರಿದೆ ಸರಿಯುವದು ಎಂದು
ಕರಗಿ ಹೋದ ಕನಸಿಗೆ
ಬೇಲಿಯ ಕಟ್ಟುತಿಹರು.
————————
ಎನ್.ಜಯಚಂದ್ರನ್
Super anna
Super mama
ಒಳ್ಳೆಯ ಕವಿತೆ. ಧ್ವನಿಪೂರ್ಣ