ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೇ ಸರಯು ನಾನು ರಾಮ
ಸರ್ವತನದಲಿ ಮೆರೆದಂತ
ಅಯೋಧ್ಯಾಧಿಪತಿ
ಈಗ ಸೀತೆಯಿಲ್ಲದ ಪತಿ

ಹೆ ಸರಯು ಸೆಳದುಕೊ ನನ್ನನ್ನು
ಒಡಲಾಳದೊಳಗೆ ಆಳಕೆ
ಆಳದಾಳದ ಆಳಕೆ
ಸೃಷ್ಠಿಯ ದೃಶ್ಯವೂ ಕಾಣದಂತೆ

ಪರಿತಪಿಸುತಿಹೆನು ಅವಳಿಲ್ಲದ ಕ್ಷಣಕೆ
ಒಡನಾಡಿಯ ಅಗಲಿಕೆಗೆ
ಕಂಡೂ ಉಳಿಸಿಕೊಳ್ಳದ ಕ್ಷಣಕೆ
ಒಳಒಳಗೆ ನಾ ಕುಸಿಯುತಿಹೆನು

ಅಪಾರ ಪ್ರೀತಿಯ ಮಡದಿಯ
ನಂಬಿಕೆ ಹುಸಿಗೊಳಿಸಿದವನು
ಎಲ್ಲ ಅರಿತ ಸುಗುಣನಾದರೂ
ಅರಿಯದಾದೆ ಏನನ್ನೂ

ನೋಡುತ್ತ ನಿಂತೆ ಮೌನದಲಿ
ಭೂಮಿಯಲಿ ಸೀತೆ ಇಳಿಯುವದನು
ತಪ್ಪಿಸದಂತಾಗಿತ್ತೆ ಮನ ಕಠಿಣ
ಕಳೆದುಕೊಂಡುಬಿಟ್ಟೆ ಅವಳನ್ನ

ಏನಿದೆ ನನಗೆ ಈಗ ಇಲ್ಲಿ
ಅವಳೇ ಇಲ್ಲಾ ಬಳಿಯಲಿ
ಜೀವಕ್ಕೆ ಜೀವವಾದವಳು
ಈಗ ಬರಿ ಉಸಿರಿದೆ ಜೀವವಿಲ್ಲಾ

ಅಪಾರ ನಂಬಿಕೆಯ ಆಗರಕ್ಕೆ
ಧಕ್ಕೆ ಬಂದಿತೆಂದು
ಇಳಿದುಬಿಟ್ಟಳು ಭುವಿಯೊಳಗೆ
ನನ್ನ ಸಣ್ಣವ ಮಾಡುತ

ಪ್ರಜೆಯೊಬ್ಬನ ಮಾತಿಗೆ ಬೆಲೆಕೊಟ್ಟು
ಸಾವಿರಾರು ಪ್ರಜೆಗಳ ಬಿಟ್ಟು
ರಾಜನೀತಿಯ ಅಳುಕಿಗೆ
ಮಡದಿಯನ್ನೆ ಬಲಿ ಕೊಟ್ಟೆ

ಏನಿದೆ ಈಗ ನನಗಿಲ್ಲಿ
ದೈವ ಶಕ್ತಿಯಿಂದ ಗೆಲ್ಲಿಸಿದ್ದರೂ
ಮನುಷತ್ವದಲಿ ಸೋತೆ
ಬರುವಳೇ ಮತ್ತೆ ಸೀತೆ

ಹೇ ಸರಯೂ ಎಲ್ಲ ಇದ್ದರೂ ಇಲ್ಲದವ ನಾ
ಅವಳಿಲ್ಲದೆ ಹೇಗಿರಲಿ ಸೆಳೆದುಕೊ ನನ್ನನ್ನೂ
ನಿನ್ನೊಡಲದಾಳದಾಳದ ಆಳಕೆ
ಸೃಷ್ಠಿಯಿಂದ ದೂರಕೆ ಎಲ್ಲರಿಂದ ದೂರಕೆ


About The Author

8 thoughts on “ಪ್ರಮೋದ ಜೋಶಿ ಕವಿತೆ-ಮತ್ತೆ ಬರುವಳೆ ಸೀತೆ”

    1. ಅಗ್ನಪರೀಕ್ಷೆಗೊಳಪಟ್ಟ ಸೀತಾಮಾತೆ ಶ್ರೀರಾಮನಿಗೂ ಒಂಟಿತನದ ಭಾವದಲ್ಲಿ ಬೇಯುವಂತೆ ಮಾಡಿರುವದು ಕವನದಲ್ಲಿ ಸ್ಪಷ್ಟವಾಗಿದೆ

  1. Beautiful.

    Throuout the Ramayana Lord Rama is shown as though man who rarely shows out emotions.

    Nice to see Rama’s emotions coming out in the form of a poem

  2. ಕಿಷ್ಕಿಂಧೆಯನ್ನ ತಲುಪಿ ಸೀತೆಯನ್ನ ನೆನೆದು ಶ್ರೀರಾಮ ಕಣ್ಣೀರಾಗುತ್ತಾನೆ… ಆದರೆ ಅವಳನ್ನ ಹುಡುಕಿ,ರಾವಣನನ್ನು ಸೋಲಿಸಿ ಅಯೋಧ್ಯೆಗೆ ಮರಳಿ ಬಂದ ಮೇಲೂ ಮತ್ತೆ ಹೀಗೆ ರಾಮ ಕಣ್ಣೀರಾಗುವ ಹಿಂದೆ ಮಾನವ ಸಹಜ ಅಪೂರ್ಣತೆಯೇ ಇದೆ.ಅದನ್ನ ಈ ಕವಿತೆ ಚನ್ನಾಗಿ ಎತ್ತಿಹಿಡಿದಿದೆ.

Leave a Reply

You cannot copy content of this page

Scroll to Top