ಜಾನ್ ಮಿಲ್ಟನ್ ರವರ ಇಂಗ್ಲೀಷ್ ಕವಿತೆಯ ಅನುವಾದ ಪಿ.ವೆಂಕಟಾಚಲಯ್ಯ

Empty Studio Room for Shoot

ನನ್ನ ಜೀವನ ಗತವ  ನೋಡಿದನು ಹಿಂತಿರುಗಿ
ಅರೆ ಶತಮಾನದಾಚೆ    ಕಾರ್ಗತ್ತಲಿನ ಜಗದಿ,


ನನ್ನ ಯೋಚನೆಯೊಂದು,ಪ್ರಭುವಿನ  ಸೇವೆಗೆಂದು,
ತುಂಬಿದ ಹೃದಯದಲಿ, ಹಂಬಲಿ ಸಿದನು  ಅಂದು,
 ನನ್ನ ಮನದಾಳದಿಂ, ಅರ್ಪಿಸಲಾದ ಮನವಿಯನು,
ಮನವಿಯನಾಲಿಸದೆ, ಹಳಿದು  ದಿಕ್ಕರಿಸಿದನು.

ಹಂಬಲವು  ನಿಶ್ಪಲವು, ಹುದಗಿರಲು ಎನ್ನಲೇ,
ಕೇಳಲುಪಕ್ರಮಿಸಿದೆ,  ಕೇಳದೆ  ಸು ಮ್ಮನಾದೆ.
ಕುರುಡನಾಗಿಸಿ  ನನ್ನ, ಸೇವಕ ನಾ ಗೆಂದನೆ?

ಎನ್ನ ಮನದ ನೋವಿಗೆ, ಅಂತರಂಗ ನುಡಿಯಿತು;
“ಪ್ರಭುವೇನು  ಬೇಡನೈ. ಸಹಸ್ರಾರು ಹೆಗಲುಗಳು ,
ಪ್ರಭುವಿನ ಕಟ್ಟಾಜ್ಞೆಯ,ವಿನಮ್ರತೆ ಯಿಂದ  ಹೊತ್ತು,
ಭುವಿ ಸಾಗರದಾದ್ಯಂತ, ಸೇವಿಸು ವರದ್ಭುತದಿ,
ನಮಗುಂಟು ಅದರ ಫಲ, ಕಾಯು ತಿರೆ  ಸಂಯಮದಿ. “


Leave a Reply

Back To Top