ಸವಿತಾ ದೇಶಮುಖ ಅವರ ಕವಿತೆ- ಯುದ್ದ

ಎತ್ತ ನೋಡಿದರತ್ತ
ಹಿಂಸೆ ಆಕ್ರಂದ
ಕಿತ್ತಾಟ ಜಂಜಾಟ
ಒಬ್ಬರಿಂದ ಇನ್ನೊಬ್ರ
ಆಕ್ರಮಿಸುವ
ಹೊಯ್ದಾಟ
ಅಖಂಡ ಕಿಚ್ಚಿನ
ಪ್ರವಾಹ ವೈಮನಸ್ಸು
ಯುದ್ಧ ವೇಗದ ಓಟ
ಆಸ್ತಿ-ಪಾಸ್ತಿಗಳ
ಹಾನಿ ಲೂಟಿ
ಹೊತ್ತಿ ಉರಿಯುವ
ಮನೆ ಮನಗಳು
ದ್ವೇಷ ಸೇಡಿನ
ಕರಾಳ ಕ್ಷಣಗಳು
ಸಾವಿರಾರು ಬಲಿ
ನಿಲ್ಲಿಸುವರಾರು?
ಜೀವ ಹುಳಗಂತೆ
ನಾಶವಾಗುತ್ತಿವೆ
ದ್ವೇಷ ಸೇಡು
ಭುಗಿಲೆದ್ದು
ಕುಣಿಯುತ್ತಿವೆ
ವಿಲಕ್ಷಣ ನಶ್ವರ
ದೇಶದ ನೆಲ
ಉಳಿಸಲು
ಅಂಧಕರು ಕಟ್ಟಿ
ಸಾವಿನ ಅಂಗಡಿ
ದೇಶಭಕ್ತಿಯ
ಮೆರೆಯುವ ಜಾಡಿ
ಎಲ್ಲವೂ
ನಿರ್ಗಮನಯುತ
ಎಡ ಬಲ ಹಲವು
ಕೂಡಿ ಬಾಳಿ
ಸೌಹಾರ್ದತೆ ಶಾಂತಿಯ ಉದಕದ
ಬಾಯಾರಿಕೆ ನೀಗಿಸಿಲು
ಕೈಗೂಡಿಸಿ
ಶಾಂತಿ ಅಹಿಂಸೆ
ದಿವ್ಯ ಭಾವವೆ
ಸತ್ಯ-ನಿತ್ಯ

—————-

Leave a Reply

Back To Top