“ಪ್ರೀತಿ, ಪ್ರೇಮ, ಅರಿವು” ಸಾಕ್ಷಿ ಶ್ರೀಕಾಂತ ತಿಕೋಟಿಕರ.

ಮೊನ್ನೆ ನಡೆದ ನೇಹಾ ಕೇಸ ಎಲ್ಲರಿಗೂ ಗೊತ್ತು!!
ಯಾಕೆ ಈ ತರಹ ಆಗುತ್ತಿದೆ. ಮಕ್ಕಳು ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿ ಆಗಬೇಕು ಎಂಬುದು ಶಿಕ್ಷಣದ ಮುಖ್ಯ ಉದ್ದೇಶ ಅಲ್ಲವೇ! ಆದರೆ ಮಕ್ಕಳು ಮಾಡುವುದು ಏನು!? ಪ್ರೀತಿ, ಪ್ರೇಮ, ಸ್ನೇಹ, ಮತ್ತೊಂದು, ಮಗದೊಂದು!!
ಎಲ್ಲಿ ಲೋಪವಾಗುತ್ತಿದೆ, ಮೊದಲು ಮನೆಯಲ್ಲಿ ಒಂದೇ ಟಿ. ವಿ, ಎಲ್ಲರೂ ಒಟ್ಟಿಗೆ ನೋಡುತ್ತಿದ್ದರು. ಈಗ ಹಾಗಲ್ಲ!! ಎಲ್ಲರ ಕೈಯಲ್ಲೂ ಪ್ರತ್ಯೇಕ ಮೋಬೈಲ್ ಅದರಲ್ಲಿ ಸರಾಗವಾಗಿ ಬರುವ ಅಸಹ್ಯ ವಿಡಿಯೋ, ರೀಲ್ಸಗಳು.

ಹಲವು ಮಕ್ಕಳಂತೂ  ಐದನೇ, ಆರನೇ ತರಗತಿಯಿಂದ ಲೇ ಪ್ರೀತಿ ಮಾಡಲು ಶುರು ಮಾಡುತ್ತಾರೆ, ಸಿನಿಮಾ ನೋಡಿ ಆತ ನನ್ನ ಕ್ರಶ,ಇವಳು ನನ್ನ ಕ್ರಶ!! ಎಂದು ಸಿನಿಮಾ ತಾರೆಯರು ಇವರಿಗೆ ನಿಜ ಜೀವನದಲ್ಲಿ ,ಸಿನಿ ನಾಯಕರು ಆದರ್ಶ ಪ್ರಾಯರು!
ಇದು ಎಷ್ಟು ಸರಿ!? ದೇಶದ ಯಾವ ನಾಯಕ, ನಾಯಕಿಯರ, ಸ್ವತಂತ್ರ ವಿಚಾರ, ಪ್ರಗತಿಪರ ಆಲೋಚನೆಯ , ನಿಜವಾದ ಸಾಧಕರ ಪರಿಚಯವಾದರೂ ಮಕ್ಕಳಿಗೆ ಇದೆಯಾ!? ಪಾಲಕರಾದವರೂ ಮಕ್ಕಳಲ್ಲಿ ಇದರ ಬಗ್ಗೆ ಎಷ್ಟು ಅರಿವು ಮೂಡಿಸುತ್ತಿದ್ದೇವೆ!?. ಸದಾ ಸ್ವತಂತ್ರ ವಾಗಿ ಇರಬೇಕು ಎನ್ನುವ ಭಾವನೆ!! ಆದರೆ ಮಮತೆ, ಅಂತಃಕರಣ ಮತ್ತು ಆಕರ್ಷಣೆಯ ಪ್ರೀತಿಯ ವ್ಯತ್ಯಾಸ ದ ಅರಿವು ಕೂಡ ಮಕ್ಕಳಲ್ಲಿ ಉಳಿದಿಲ್ಲ, ಒಂದು ರೀಲ್ಸ ಆಗಲಿ, ರಿಯಾಲಿಟಿ ಶೋ ನೋಡಿ ಬರೀ ದ್ವಂದ್ವ ಅರ್ಥ ನೀಡುವ ಹಾಸ್ಯಗಳೇ! ಅದು ಬಿಟ್ಟರೆ ಗಂಡ ಹೆಂಡತಿ ಜಗಳ!!! ಸಿನಿಮಾ ಕೂಡ ಅತೀ ಹೊಡದಾಟ ಮತ್ತು ಸರಸ, ಸಲ್ಲಾಪ, ದೈಹಿಕ ದೃಶ್ಯಗಳು. ಮೊದಲು ಮನೆಯಲ್ಲಿ ಅಜ್ಜಿ ಮತ್ತು ಅಜ್ಜ,ಮೊಮ್ಮಕ್ಕಳಿಗೆ ಪೌರಾಣಿಕ ಕತೆ ಹೇಳುತ್ತಿದ್ದರು. ಆದರೆ ಅವರೂ ಈಗ ಧಾರಾವಾಹಿಗಳಲ್ಲಿ ಬಿಝಿ!!ಇನ್ನೂ ಹಿರಿಯರು ನೋಡುವ ಧಾರಾವಾಹಿಗಳೋ… ಮದುವೆಯಾದ ಹುಡುಗನಿಗೆ ಆಫೀಸಿನಲ್ಲಿ ಇನ್ನೊಬ್ಬಳು ಪ್ರೀತಿಸುತ್ತಿರುತ್ತಾಳೆ, ಒಬ್ಬಳು ಗೌರಮ್ಮನಂತೆ ಅತೀ ಮುಗ್ಧ, ಅತೀ ಸೌಮ್ಯ ( ಅತೀ ಮೂರ್ಖಳು ಎನ್ನಿ) ಸೊಸೆ. ಇನ್ನೊಬ್ಬಳು ತುಂಬಾ ಚಾಲಾಕಿ, ಗುಂಡಾಗಳ ಕಾಂಟ್ಯಾಕ್ಟ್ ನಂಬರ ಇಟ್ಟುಕೊಂಡು ಗನ್ ಇಟ್ಟುಕೊಂಡು ಇರುವ ಭಯಂಕರ ಹೆಂಗಸು, ಎರಡೂ ವಾಸ್ತವದಿಂದ ತುಂಬ ದೂರ… ತೀರ ಕಾಲ್ಪನಿಕ ಪ್ರೀತಿಯ ಚಿತ್ರಣ!! ಏನು ಹೇಳಲು ಹೊರಟಿವೆ ಇವು!

ಮನೋ ವಿಕಾಸದ ಹಂತದಲ್ಲಿ ಇರುವ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿದೆಯಾ!? ಹದಿ ವಯಸ್ಸಿನಲ್ಲಿ, ಉಂಟಾಗುವ ಆಕರ್ಷಣೆ ಮತ್ತು ಚಂಚಲತೆ ನಿವಾರಿಸಲು, ನಮ್ಮ ಸಂಸ್ಕೃತಿಯಲ್ಲಿ ಇರುವ ಯೋಗ ಮತ್ತು ಧ್ಯಾನ ಮಕ್ಕಳಿಗೆ ಕಲಿಸುವ ಯೋಜನೆಗಳು ಯಾಕೆ ಇಲ್ಲ!? ಮಾನಸಿಕ ದುರ್ಬಲತೆ, ಸ್ವಭಾವದಲ್ಲಿ ಚಂಚಲತೆ, ಅಂದುಕೊಂಡಂತೆ ಆಗಲಿಲ್ಲ ಎಂದರೆ ಆತ್ಮಹತ್ಯೆ!! ಮಕ್ಕಳ ಪರಿಸ್ಥಿತಿ ಎಷ್ಟು ಹೀನಾಯ!! ಕ್ರಿಕೇಟ್ ನೋಡಲು ದುಂಬಾಲು ಬೀಳುವ ಯುವಕರು, ದೇಶ ಕಟ್ಟುವ ರಾಜಕೀಯ, ಸಾಮಾಜಿಕ ನ್ಯಾಯದ ಅರಿವು ಎಷ್ಟು ಇದೆ!?  ಕ್ರಿಕೆಟ್ ಮೇಲೆ ಇರುವ ಆಸಕ್ತಿಯ ಒಂದು ಗುಂಜಿ ಭಾಗದಷ್ಟು ಅಭಿಮಾನ, ಪ್ರೀತಿ ದೇಶದ ಬಗ್ಗೆ ಇದೆಯಾ!?  ಮಕ್ಕಳಲ್ಲಿ ಚಿಂತನಾಲಹರಿಯೇ ಮುಗಿದು ಹೋಗುತ್ತಿದೆ! ಸದಾ ಸಿನೆಮಾ, ಹಾಡು, ಫ್ಯಾಷನ್, ರೀಲ್ಸ…. ಯೂಟ್ಯೂಬ್ ಚಾನೆಲ್ ಸ್ಟಾರ್ ಆಗಬೇಕು. ಇದು ಜೀವನದ ಉದ್ದೇಶ!!
ಸಾವು ನೋವುಗಳಿಗೆ ಯಾರು ಹೊಣೆ!?


2 thoughts on ““ಪ್ರೀತಿ, ಪ್ರೇಮ, ಅರಿವು” ಸಾಕ್ಷಿ ಶ್ರೀಕಾಂತ ತಿಕೋಟಿಕರ.

Leave a Reply

Back To Top