ಡಾ.ಡೋ.ನಾ.ವೆಂಕಟೇಶ ಕವಿತೆ-ಶೂನ್ಯ ಲೆಕ್ಖ

ಹೋಗು ನಿನ್ನಿಷ್ಟದಂತೆ
ಅಷ್ಟಕ್ಕೂ ಬಂದಿದ್ದೂ ನೀ ನಿನ್ನಿಷ್ಟದಂತೆಯೇ

ಹಸಿಯಾದ ವಯಸ್ಸು
ಗುರುತ್ವಾಕರ್ಷಣೆಯೋ
ಆಯಸ್ಕಾಂತೀಯ ಮನಸ್ಸೋ
ಶತಮಾನದ ಲೆಕ್ಕದಲ್ಲಿ ಅರ್ಧಕ್ಕೂ
ಹಿಂದೆ-

ನೀನಲ್ಲಿ ಈಗ ನಿನ್ನದೇ ಸೂಜಿಗಲ್ಲಿನಲ್ಲಿ
ಸನ್ನೆ ರಾತ್ರಿಗಳಲ್ಲಿ ಬಾಂದುಗಲ್ಲುಗಳ ಗಾಢಾಂಧಕಾರಗಳಲ್ಲಿ
ಸದೃಶ್ಯ ಈ ಅದೃಶ್ಯ-
ವಿಚಿತ್ರ ಆದರೂ ನಿಜ!

ನಿನ್ನ
ಶಕ್ತಿ ಮೀರಿದ ಪ್ರಯತ್ನ
ಈ ಚಿತ್ರ ಅಳಿಸುವ ಯತ್ನ
ವಿಫಲ ಹಾಗೂ ವಿಮುಖ!

ಅಹೋರಾತ್ರಿ ಕಣ್ಣುಮುಚ್ಚಿದರೆ
ಕಣ್ತೆರೆದು ನೋಡಿದರೆ
ಹಗಲು!
ಧುತ್ತೆಂದು ಎದುರಾದ ಗಟ್ಟಿ ಜಾತ್ರೆ
ಜೀವನದ ಖಾಲಿ ಪಾತ್ರೆ

ಅಂತಿಮ ಅಧ್ಯಾಯದ ಆರಂಭ
ನೋಟ ನನಸಾಗಲಿಲ್ಲ
ಆಡಿದ್ದ ಆಟ ಕನಸೂ ಆಗಲಿಲ್ಲ

ಕಣ್ಮುಚ್ಚಿ ಧ್ಯಾನಿಸಿ ಕೇಂದ್ರೀಕರಿಸಿದ್ದು
ಶೂನ್ಯವನ್ನ
ಕಂಡಿದ್ದೂ ಶೂನ್ಯವನ್ನೆ,!
ಹೋಗುವುದೂ ಶೂನ್ಯಕ್ಕೇ!!

ಆದರೆ
ನ್ಯೂ ಟನ್ನನ ಮೂರನೇ ನಿಯಮದಂತೆ
ಕ್ರಿಯೆ ಪ್ರತಿಕ್ರಿಯೆಗಳು
ಸಮಾನ ಮತ್ತು ವಿರುದ್ಧ

ವೈರುಧ್ಯವೋ ವೈರಾಗ್ಯವೋ
ಸುಮ್ಮನೇ ವಿಮನಸ್ಕರೋ
ವಿಮರ್ಶಕರು ಯಾರೋ!

ಶತ ಶತಮಾನಗಳ ಲೆಕ್ಖವಿಟ್ಟವರು
ಮತ್ಯಾರೋ!!

8 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ಶೂನ್ಯ ಲೆಕ್ಖ

  1. ಗಣಿತ, ವಿಜ್ಞಾನ ಮತ್ತು ಸಮಯದ ಸಂಯೋಜನೆಯೊಂದಿಗೆ ಬಹಳ ಆಸಕ್ತಿದಾಯಕ ಕವಿತೆ.
    ಬಹಳ ಚೆನ್ನಾಗಿ ಸಂಕಲಿಸಲಾಗಿದೆ.

    1. Thanq ಮಂಜುನಾಥ್. ಜೀವನ ವಿಜ್ಞಾನವೆ ಒಂದು ತುಡಿತ ಮತ್ತು ವಿಜ್ಞಾನ

Leave a Reply

Back To Top