ವಿಜಯಪ್ರಕಾಶ್ ಕಣಕ್ಕೂರು-ಗಜಲ್

ನಿರ್ಲಿಪ್ತ ಎದೆಯೊಳಗೆ ಮಿಡಿದ ಮನದ ನೆನಪು ಬದುಕೆಷ್ಟು ಭಯಾನಕ
ನಿಕ್ಷಿಪ್ತ ಭಾವದೊಳಗೆ ಮಡಿದ ಕನಸುಗಳ ಛಾಪು ಬದುಕೆಷ್ಟು ಭಯಾನಕ

ಅಭ್ಯಂತರದಲ್ಲಿ ಅಳಿದುಳಿದ ಅಪೇಕ್ಷೆಗಳಿಗೆ ನಿರಂತರ ಕಣ್ಣೀರಿನ ಮಜ್ಜನ
ಕಣ್ಗಳು ತುಂಬಲು ಮಬ್ಬಾಯ್ತು ನಾಳೆಯ ಒನಪು ಬದುಕೆಷ್ಟು ಭಯಾನಕ

ಸ್ವಪ್ನದಲ್ಲೂ ಸ್ವಪ್ನದಂತೆ ಕಾಡುತ್ತಿದೆ ಕೈಜಾರಿ ಹೋದ ಸವಿ ಸಮಯಗಳು
ಅತಿಶಯ ಪ್ರೇಮದ ಕಡಲಲ್ಲಿ ಒಲವಿನ ಅರಪು ಬದುಕೆಷ್ಟು ಭಯಾನಕ

ತುಟಿಯಂಚಿನ ನಗುವೂ ಮರೆಯಾಯ್ತು ಭಗ್ನವಾದ ಬಯಕೆಗಳಿಂದ
ಉಡುಗಿತು ಸ್ಥೈರ್ಯ ಕಾರಣ ಪ್ರೀತಿಯ ಅಳಿಪು ಬದುಕೆಷ್ಟು ಭಯಾನಕ

ಅರ್ಥವೆಲ್ಲಿದೆ ವ್ಯರ್ಥವಾದ ಕಾಯುವಿಕೆಗೆ ಮುಚ್ಚಿದ ಬಾಗಿಲಿನ ಬಳಿಯಲಿ
ಕಲ್ಪಿಸಲಾಗದು ಇಲ್ಲದಿರೆ ಆತ್ಮೀಯತೆಯ ಅಡಪು ಬದುಕೆಷ್ಟು ಭಯಾನಕ

3 thoughts on “ವಿಜಯಪ್ರಕಾಶ್ ಕಣಕ್ಕೂರು-ಗಜಲ್

  1. ಬದುಕೆಷ್ಟು ಭಯಾನಕ !?

    ವಿಚಿತ್ರವೂ, ವಿಪರ್ಯಾಸವೂ,‌ ವಿಸ್ಮಯವೂ, ವಿಶೇಷವೂ, ತನ್ನ ಸಕಾರಾತ್ಮಕ ಮನೋಕಾಮನೆಗಳಿಗೆ ವಿಮುಖವಾಗಿಯೂ ಕೆಲವೊಮ್ಮೆ ಕಾಣಿಸಿಕೊಳ್ಳುವ ಬದುಕಿನ ಏರಿಳಿತಗಳನ್ನು ಮತ್ತು ಅವು ತರಬಹುದಾದ ಕಟುತ್ವಗಳನ್ನು ಅದೆಷ್ಟು ಒಪ್ಪವಾಗಿ ಪೋಣಿಸಿ ಬಿಟ್ರಿ ತಾವು.

    ಮತ್ತೆ ಮಾತಿಲ್ಲ ! ಮೌನದಲ್ಲೇ ಭಾವಗಳನ್ನು ಮೆಲುಕು ಹಾಕಿ‌ ಅವುಗಳಲ್ಲೇ ಕಳೆದು ಹೋಗುವಂತೆ..

    ಕನಸುಗಳು, ಭಾವನೆಗಳು, ಬಯಕೆಗಳು, ನಲುಮೆಯ ನಂಟುಗಳು ಬದುಕಿಗೆ ಅನಿವಾರ್ಯವೂ, ಅವಶ್ಯವೂ ಆಗಿದ್ದು, ಅಂತಹುದೇ ಅಂಶಗಳು ಬತ್ತಿಯೋ ಅಥವಾ ದಿಕ್ತಪ್ಪಿಯೋ ಕುಳಿತಾಗ ನಿಜಕ್ಕೂ ಬದುಕು ಭಯಾನಕ ಆಗುವುದರಲ್ಲಿ ಎರಡು ಮಾತಿಲ್ಲ !

    ಮನದಲ್ಲಿ ಮಿಡಿದ ನೆನಪುಗಳು, ಅಕಾಲದಲ್ಲಿ ಅಸು ಚೆಲ್ಲಿದ ಕನಸುಗಳು, ದೊರೆತರೂ ಪರಿಪೂರ್ಣಗೊಳ್ಳದ ಇಚ್ಛೆಗಳು, ತುಂಬಿದ ಕಂಗಳ ವ್ಯಥೆಯ ಹನಿಗಳು ಬತ್ತದೇ ಮತ್ತೆ ಮತ್ತೆ ಸುರಿದ ಬಗೆಯಿಂದಾಗಿ ಮಸುಕಾಗಿ ಗೋಚರಿಸುವ ನಾಳೆಗಳು, ಘಟಿಸಿದ್ದೆಲ್ಲವೂ ಸ್ವಪ್ನವಾದಂತೆ ಅನಿಸಿದಾಗ ನೆಲಕಚ್ಚುವ ದಿಟ್ಟತನಗಳು, ಕಣ್ಣ ಮುಂದೆ ಬೃಹದಾಕಾರವಾಗಿ ಬಿಚ್ಚಿಕೊಳ್ಳುವ ನಾಳೆಗಳು ತನ್ನ ನಿರೀಕ್ಷೆಗಳಿಗೆ ವಿಮುಖಗೊಂಡು ಕಲ್ಪನೆಗಳೇ ಉಳಿದಾಗ ಸಂಭವಿಸುವ ಮನೋ ತುಮುಲಗಳು ತಮ್ಮ ಗಜಲ್ ಬರಹದಲ್ಲಿ ಅತ್ಯಂತ ಮಾರ್ಮಿಕವಾಗಿ ಅನಾವರಣಗೊಂಡಿದೆ ವಿಜಯ್ ಅವರೇ..

    ಭಯಾನಕ ಬದುಕನ್ನು ನಿಮ್ಮದೇ ಯೋಚನೆಗಳಲ್ಲಿ ಕಂಡುಕೊಂಡು ಅದನ್ನು ಹೀಗೊಂದು ಯೋಜನೆಗೆ ತರುವ ಮೂಲಕ ಮೂಡಿಬಂದ ಬರಹದಲ್ಲಿ ಕಂಡದ್ದು ಮನದ ಹೊಯ್ದಾಟ, ಆಂತರ್ಯದ ಬೇಗುದಿ, ನಾಳೆಗಳೆಡೆಗಿನ ಅನಿಶ್ಚಿತತೆಯೊಂದೇ ! ನನಗೆ ಅನ್ನಿಸಿದ್ದು, ಇಂತಹ ಭಾವುಕತೆ ಮೈವೆತ್ತ ಬರಹ ಮೂಡಿಬರಬೇಕಾದರೆ ಅದನ್ನು ಕಲ್ಪನೆಯಲ್ಲಾದರೂ ಸರಿಯೇ, ಅನುಭವಿಸಿಯೇ ಬರೆಯಬೇಕು ಎಂದು !

    ಅಂತೂ ಗಜಲ್ ಬರಹಕ್ಕೆ ನ್ಯಾಯ ಒದಗಿಸಿದಿರಿ ತಾವು. ಪ್ರತಿಯೊಂದು ಸಾಲುಗಳನ್ನೂ, ಒಟ್ಟಾರೆ ಬರಹವನ್ನೂ ಗಮನಿಸಿದಾಗ ಇದೊಂದು ಪರಿಪೂರ್ಣ ಗಜಲ್ ಎಂದು ನೀಡುವ ನನ್ನ ಆಂತರ್ಯದ ತೀರ್ಪು ನಿಮ್ಮ ಗಜಲ್ ನ ಆಳವನ್ನು ಹೊಕ್ಕು, ಭಾವಗಳ ಸಖ್ಯದಿ ವಿಹರಿಸಿದೆ ಎಂದರೆ ಸೂಕ್ತವಾಗುತ್ತದೆ ತಮ್ಮ ಬರಹಕ್ಕೆ ಮತ್ತು ಅದನ್ನು ಪ್ರಸ್ತುತಪಡಿಸಿದ ತಮ್ಮ ಪ್ರಾಮಾಣಿಕ ಪರಿಶ್ರಮಕ್ಕೆ..

    ತಾವು ಪೋಣಿಸಿದ ಪದ ಪದಗಳು ಕೂಡ ತನ್ನ ತೀವ್ರತೆಯನ್ನು ದಕ್ಷ ಓದುಗರ ಮನದಾಳದಲ್ಲಿ ಮೂಡಿಸದೇ ಇರಲಾರದು ಎಂದು..

    ( ಹಿನ್ನೆಲೆ ಚಿತ್ರವನ್ನು ಗಮನಿಸುವುದಾದರೆ ಯಾಕೋ ಬರಹದ ಭಾವಕ್ಕೆ ಹೊಂದುತ್ತಿಲ್ಲ ಅಂತ ಅನ್ನಿಸುತ್ತದೆ. ಬರಹದ ಪೂರ್ಣ ಭಾವಗಳನ್ನು ಗಮನಿಸಿದರೆ ಅದು ವ್ಯಕ್ತಿಯ ಬದುಕಿನ ಏರಿಳಿತಗಳನ್ನು ಧ್ವನಿಸಿ, ಸಂಭವಿಸುವ ನೋವು, ನಿರಾಸೆಗಳಿಂದ ಜರ್ಜರಿತಗೊಂಡ ಬಾಳಿನ ಪಯಣದ ಚರ್ಯೆಯನ್ನು ಸೂಕ್ಷ್ಮವಾಗಿ ವಿವರಿಸಿದೆಯೇ ಹೊರತು ಕೇವಲ ಪ್ರೀತಿ, ಪ್ರೇಮದ ನೆಲೆಯಿಂದ ಅಲ್ಲ ಎಂಬುದು ನನ್ನ ಅಭಿಪ್ರಾಯ )

  2. ಬದುಕೆಷ್ಟು ಭಯಾನಕ !?

    – ನಯನ. ಜಿ. ಎಸ್

  3. ಬರಹದ ಭಾವವನ್ನು ಅರ್ಥೈಸಿ ನೀಡಿದ ಪ್ರತಿಕ್ರಿಯೆಗೆ ಧನ್ಯವಾದಗಳು ನಯನ ಅವರೇ

Leave a Reply

Back To Top