ಕಾವ್ಯ ಸಂಗಾತಿ
ಸಂಧ್ಯಾ ರಾಯ್ಕರ
ಕಲಾವಿದ
ಅವನೋ ಮಾಯಾವಿ
ಬಿಳಿ ಹಾಳೆಗಳ ಮೇಲೆ
ಅದೇನೋ ಗೀಚಿದ ….
ಬಣ್ಣಗಳ ಸವರಿದ …
ಕುಂಚಗಳ ಆಡಿಸಿದ
ಆಚೆ ಈಚೆ ಮೇಲೆ ಕೆಳಗೆ
ಅದೆಷ್ಟೋಸಲ ಲೆಕ್ಕವಿಲ್ಲದಂತೆ…..
ಬಿಳಿ ಹಾಳೆಯಲಿ ಮೂಡಿದ ಬಿಂಬವ ಕಂಡು ಕುಂಚವನಿರಿಸಿದ…
ಅದೆಷ್ಟು ಮೋಹಕ ಚಿತ್ರವದು…
ಅದುಮಿಟ್ಟ ಭಾವನೆಗಳ ಹೊರ
ಚೆಲ್ಲಿದಂತೆ…..
ದೀರ್ಘ ತಪಸ್ಸಿನ ಫಲದಂತೆ…..
ಮೌನವು ನಿಧಾನವಾಗಿ ಮಾತಾದಂತೆ…..
ಕಲ್ಪನೆಯ ಜೀವ ….ಕೂಸಾದಂತೆ….
ತಾಕಲಾಟಗಳಿಗೆ ಎರಕವ ಹೊಯ್ದಂತೆ……
ಕನಸೊಂದು ಕಣ್ತೆರೆದು ನನಸಾದಂತೆ….
ಭಾವನೆಗೆ ಜೀವ ತುಂಬಿದಂತೆ…..
ಮುಗುಳ್ನಕ್ಕ ಮಾಯಾವಿ…
ಮತ್ತೆ ಹೊರಟ ಹೊಸ ಕಥೆಯ ಹುಡುಕಿ
- ಮುಖಪುಟ ಚಿತ್ರ ಸಂಧ್ಯಾರಾಯ್ಕರ್
ಸಂಧ್ಯಾ ರಾಯ್ಕರ
Nice one madum
Suuuper sandya
Soooooper mam