ಕಾವ್ಯ ಸಂಗಾತಿ
ಸವಿತಾ ದೇಶಮುಖ
ಋತುವೇ ನಿನಗೆ ನಮನ
ಬಂತು ವಿಷುವತ್ಸಂ
ಕ್ರಾಂತಿ ಋತು
ದಿನ ದಿನವೂ ಹೆಚ್ಚಿತು
ಝಳ ಝುಳಿಸುವ
ಕಿರಣಗಳ ಶಾಖವು
ತಾಪದ ಅತ್ಯುನ್ನತ
ಬಿಂದು ಸ್ಪರ್ಶ
ವರ್ಷದ ಕೆಂಡಮಂಡಲಾದ ಋತುವೇ
ದೀರ್ಘ ದಿನವೂ ರಾತ್ರಿ ಕಡಿತ
ಹಗಲು ಸೂರ್ಯನ ತಾಪವು
ರಭಸದಿ ಇಳಿದು ಸುಧೆಗೆ
ತೊರೆ ಬಾವಿ ಕೊಳಗಳು
ಬತ್ತಿಶುಷ್ಕ ನೆಲಜಲ
ನಿನಗಾಗಿ ಪರೆದಾಟ ಹೊಡೆದಾಟ
ಜೀವ ಇಂಗಿ ಎಲ್ಲೆಲ್ಲೋ
ಬರಡು ಬೆಳೆ
ರೈತ ದನಕರಗಳು
ನಡು ಹಗಲಲಿ ಬಿರಿಬಿಸಿಲು
ನಿನ್ನ ಶಾಕದ ಹೊಡೆತಕ್ಕೆ
ನಿರ್ಜಲೀಕರಣ
ಬರಿದೋ ಬರಿದು
ಅತಿ ಸಾರ ಕಾಲರಾ ಬಲಿಯಾದರು ನರಪ್ರಾಣಿಗಳು
ಈ ಸ್ಥಿತಿಗೆ ಕಾರಣ ಯಾರು ?
ನೀನೇ ಅಲ್ಲವೇ ಮನುಜ ? ಮರಗಳಗಿಡಗಳನ್ನು
ಕಡಿಯದಿರಿ
ದುಸ್ಥಿತಿಗೆ ಬಾರದಿರಿ ಅಂತ
ಹೇಳಿದ ಋತುವೇ
ನಿನಗೆ ನಮನ
ಕಾಡು ಬೆಳೆಸಿ ಕಾಡು
ಉಳಿಸಿ ಸಾರಿದೆ
ಸುವಿವೇಕ ಕಿರಣ ಶ್ರೇಣಿ
ತೀಡಲ ಅಮರವಾಣಿ
ಸವಿತಾ ದೇಶಮುಖ
ಕವಿತೆ ಚೆನ್ನಾಗಿದೆ