ಅನುರಾಧಾ ರಾಜೀವ್ ಸುರತ್ಕಲ್-ಭೂತಾಯಿ

ಇಳೆಯು ನಲಿದಳು ಹಸಿರ ಸಿರಿಯಲಿ
ಕೊಳೆಯ ಕಳೆದು ಮನದಲಿ
ಮಳೆಯ ಹನಿಯಲಿ ತೊಳೆದು ತನುವ
ಹೊಳೆದು ಪಳಪಳ ಬೆಳಕಲಿ

ಹಲವು ಬಗೆಯ ಪ್ರಾಣಿ ಪಕ್ಷಿಗಳ
ಬಿಲವು ತನ್ನ ಮಡಿಲಲಿ
ನೆಲದ ಆಗರ ಶಾಂತ ಸಾಗರ
ಒಲವ ಸುರಿಸುತ ಒಡಲಲಿ

ಭೂಮಿ ದುಂಡಗೆ ಮತ್ತೆ ತಿರುಗಿ
ಕೊನೆಗೆ ಸೇರುವುದು ಒಂದೆಡೆ
ಸೌಮ್ಯ ಸುಂದರಿ ಸರಳ ನಡೆಯಲಿ
ಹೆಜ್ಜೆಯ ನೋಡುತ ಮುನ್ನಡೆ

ವಿಕೃತಿ ಮೆರೆವ ದುರುಳ ಮನಗಳು
ಹೆತ್ತ ತಾಯಿಯ ಮರೆವರು
ಋಣವ ತೀರದೆ ಹಣದ ಆಸೆಗೆ
ಭೂತಾಯಿಯ ತುಳಿವರು

Leave a Reply

Back To Top