ಬಿರು ಬೇಸಗೆಯೇಕೆ ದೇವಾ
ನಮ್ಮ
ತನು ತಲ್ಲಣಸುವಿ ಏಕೆ ದೇವ!

ಬೇಡಿತ್ತು ಮನ ಅಂತಸ್ತುಗಳ ಮಜಲು ಮಹಲುಗಳ
ಮೋಜಿನ  ಅರವಟ್ಟಿಗೆಗಳ
ಅದಕ್ಕವಚಿದ ಥಳುಕು ಬಳುಕಿನ
ಗಾಜು ಗವಸುಗಳ
ಡಾಂಬರು ರಸ್ತೆಗಳ
ರೊಯ್ಯನೊಯ್ಯುವ ಕಾರುಗಳ,

ಮತ್ತು ಪ್ರಕೃತಿ ಸಿರಿಯ
ಮಾರಣಹೋಮದ ನಡೆ ನುಡಿಗಳ
ವಿದ್ಯುದ್ದೀಪದ ಝಗಮಗಿಸುವ
ದೀಪಗಳ ಧೂಪಗಳ

ಮರೆತು  ದೇವಾ ನೀನಿತ್ತ
ಸುಂದರ ಬನಗಳ ಅತಿ ಸುಂದರ
ಮರಗಳ ಅಲ್ಲಿ ಜೀವಿಸುವ  
ಚಿಲಿ ಪಿಲಿಗಳ ,ಅವರ ಮಕ್ಕಳು
ಮೊಮ್ಮಕ್ಕಳು ಎಲ್ಲಾ
ಕಥೆಯಾಗಿ ಮಾಡಿ
ಕನಸಾಗೇ ಹೋದರಲ್ಲ!
ಜೀವ ಸಂಸ್ಕೃತಿಯ
ಹೊಸಕಿ ಹಾಕಿ ಬಿಟ್ಟೆವಲ್ಲ!

ರವಿ ನೀ ಮಾತ್ರ ಇಲ್ಲಿ
ಹೊಳೆಯುತ್ತಿದ್ದೀಯೆ ಹಾಗೇ
ನಾ ಹುಟ್ಟಿದಾಗ ಹೇಗಿದ್ದೆಯೋ
ಈಗಲೂ ಹಾಗೇ!

ಪ್ರಕೃತಿಸಿರಿ ಕಳೆದು ಕೊಂಡು ನಾ ಮಾತ್ರ
ನವನಾವೀನ್ಯತೆಯ  ಆಧುನಿಕತೆಯ ಭ್ರಮಾಧೀನನಾಗಿ
ಕೃತಕ ಉಸಿರಾಟ ನಡೆಸುತ್ತ ನರಸತ್ತು
ಜೀವ ಚೈತನ್ಯದಲ್ಲಿ
ಆರ್ದ್ರತೆ ಕಳೆದು ಕೊಂಡವನಾಗಿ
ದರಿದ್ರ!

ಉಟ್ಟ ಹಸಿರು ಕಳಕೊಂಡು
ಕೊಟ್ಟ ಉಸಿರು ಸಿಕ್ಕಿಸಿಕೊಂಡು
ಆರ್ದ್ರತೆಯ ಮೂರ್ತಿಯಾಗಿ ನಾ,
ಕೇಳು ಸೂರ್ಯದೇವ-

ಅತಿರೇಕದ ಹುಚ್ಚಾಟಗಳ
ತಿಕ್ಕಲುತನಗಳ ಹತ್ತಿಕ್ಕದೇ-
ಹೇಳುತ್ತೇವೆ ಇದಕ್ಕೆ-
ಗ್ಲೋಬಲ್ ವಾರ್ಮಿಂಗ್

ಭೂಮಿಯ ಮೇಲೆ ಬದುಕಲು
ವಾರ್ನಿಂಗ್


6 thoughts on “

  1. ನಿಮ್ಮ ಆರ್ದ್ರ ಕವನ ಮತ್ತೊಂದು ಪ್ರಕೃತಿ ಮೇಲಿನ ಉತ್ತಮ ರಚನೆ. “ಗ್ಲೋಬಲ್ ವಾರ್ಮಿಂಗ್ ಭೂಮಿ ಮೇಲೆ ಬದುಕಲು ವಾರ್ನಿಂಗ್”

  2. ಪರಿಸರದ ಮೇಲೆ ಜಾಗತಿಕ ತಾಪಮಾನದ ಪರಿಣಾಮವನ್ನು ನಿಮ್ಮ ಕವಿತೆಯಲ್ಲಿ ಚೆನ್ನಾಗಿ ಪ್ರಸ್ತುತಪಡಿಸಲಾಗಿದೆ.m

Leave a Reply

Back To Top