ಕಾವ್ಯ ಸಂಗಾತಿ
ಡಾ.ಶಿವಕುಮಾರ್ ಮಾಲಿಪಾಟೀಲ
ನೀ ಇರಿದ ಚೂರಿ
ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ಮಗಳನ್ನು ರಾಜಕುಮಾರಿ ಎಂದು ಬೆಳೆಸುತ್ತಿರುವ ಅಸಂಖ್ಯಾತ ಹೆತ್ತವರಿಗೆ
ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ಲಕ್ಷಾಂತರ ನಿಜ ಪ್ರೇಮಿಗಳಿಗೆ
ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ಜಗತ್ತನ್ನು ಪ್ರೀತಿಸುತ್ತಿರುವ
ಕೋಟ್ಯಂತರ ಮುಗ್ದ ಮನಸ್ಸುಗಳಿಗೆ
ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ಮಾನವೀಯತೆಯ ಆದರ್ಶ ಸಮಾಜಕ್ಕೆ
ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ದೇಶದ ಅತ್ಯಮೂಲ್ಯ ಭಾವೈಕ್ಯತೆಗೆ ,ಸಾಮರಸ್ಯಕ್ಕೆ
ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ನಾಡಿನ ಶಾಂತಿ ,ಸಮೃದ್ಧಿ ,ಪ್ರಗತಿಗೆ
ನೀನು ಇರಿದಿರುವ ಚೂರಿ ಅವಳಿಗಷ್ಟೆ ಅಲ್ಲ
ನಿನ್ನ ಕುಟುಂಬ , ನಿನ್ನ ಸಮಾಜ ,ನಿನ್ನ
ಪವಿತ್ರ ಧರ್ಮಕ್ಕೆ ….
ತ್ಯಾಗ ಮಾಡಿದ್ದರೆ ಅಮರ ಪ್ರೇಮಿ ಆಗುತ್ತಿದ್ದೆ , ಆದರೆ ಕ್ರೂರಿಯಾದೆ ,
ದೇಶ ದ್ರೋಹಿಯಾದೆ…
————————
ಡಾ.ಶಿವಕುಮಾರ್ ಮಾಲಿಪಾಟೀಲ
ಇ ಕವಿತೆ ಓದಿದ ನಂತರ ಎಲ್ಲರ ಮನಸ್ಸು ಬದಲಗುತ್ತೆ ಎಂದು ಆಶಿಸುವೆ
Wonderfull