ಪ್ರಮೋದ ಜೋಶಿ ಕವಿತೆ ನಿಶಬ್ದವಾಗಿದೆ

ಮೌನದ ಗುಡಿಯೊಳಗೆ
ಶಾಂತಿಯ ದೇವರು
ನಿಶಬ್ದತೆಯ ನೀರವತೆಯೇ
ಅಲ್ಲಿನ ಮಂತ್ರ

ವಾಸ್ತವೀಕತೆಯ ಕುತುಹಲಕೆ
ಕೆದಕಿ ಅವಲೋಕಿಸಿದಾಗ
ದೊರೆತ ನಿಕ್ಷೇಪ
ಉತ್ತರವಿಲ್ಲದ ಪ್ರಶ್ನೆಗಳು

ಅರಿತ ಜ್ನಾನಿಗಳಿಂದಾದ
ದುರಾಸೆಯ ಅವಘಡಕೆ
ಸರ್ವಸಂಗ ಪರಿತ್ಯಾಗಿಗಳ
ನಾಟಕೀಯ ವೇಷಕೆ

ರೋಸಿಹೋದ ಸಾಮಾನ್ಯನ
ಪರಿಪಾಟಲಿನ ಬದುಕಿಗೆ
ಸಹಾನುಭೂತಿಯೂ ಕೂಡಾ
ಮರೀಚಿಕೆಯಾಗಿದೆ ನಿಸ್ಸಹಾಯದಿ

ಸ್ವಾರ್ಥದ ಸಿಡಿಮದ್ದಿಗೆ
ದುರಾಸೆಯ ಬೆಂಕಿ
ಹೊತ್ತಿ ಉರಿದರೂ
ಬೆಳಕಲ್ಲಿ ಕುಣಿವರೇ ಹೆಚ್ಚು

ತನ್ನ ಬೆಳವಣಿಗೆ ಖುಷಿಯೊಳಗೆ
ಇನ್ನೊಂದು ಜೀವದ ಅನ್ನ ಉಂಡು
ವಂಶಕ್ಕೆ ಸಿರಿತನ ಬೆಳೆಸುತ
ಮಾನವೀಯತೆ ಮರೆತಿರಲು

ರೋಷಿಹೋದ ಮನ
ಮೌನದ ಗುಡಿ ಕಟ್ಟಿ
ಶಾಂತಿಯ ದೇವರಿಟ್ಟು
ಕಂಡೂಕಾಣದಂತೆ ನಿಶಬ್ದವಾಗಿದೆ

4 thoughts on “ಪ್ರಮೋದ ಜೋಶಿ ಕವಿತೆ ನಿಶಬ್ದವಾಗಿದೆ

Leave a Reply

Back To Top