ನಾಗರಾಜ ಬಿ.ನಾಯ್ಕ ಕವಿತೆ-ಬದುಕೆಂಬ ವಿನ್ಯಾಸ

ಮನದಿ ನಗುವ ಹೊತ್ತು
ದಿನವೂ ಸಾಗುವ ಬದುಕಿಗೆ
ನೂರು ಎಳೆಗಳು ನಡುವೆ
ಚಿಕ್ಕ ದೊಡ್ಡ ತರಾವರಿ
ಸುತ್ತಿರುವ ಸುತ್ತುಗಳು
ಸುತ್ತುತ್ತಲೇ ಬದುಕು
ಇಷ್ಟೇ ಎಂದರೂ ಮುಗಿಯದ
ಮಾತು ಮೌನ ಮುನಿಸು
ಸಾಗಿ ಕರಗಿ ಒರಗಿ ನಿಂತು
ನೋಡಿದ ಸಾಲಿಗೆ ಸೇರುವ
ಪುಟ್ಟ ಹೃದಯದ ಬಡಿತ
ಎಷ್ಟೋ ಕಷ್ಟ ಎಷ್ಟೋ ದುಡಿತ
ಜೀವಕೊಂದು ಪ್ರೀತಿ ಒರತೆ
ಓಡುತಾ ನಿಲ್ಲುತಾ ಮತ್ತೆ ಮತ್ತೆ
ಬೆಳೆಯುತಾ ಭವಕೆ ಭಾವಕೆ
ಶೋಧನೆ ನಿತ್ಯ ನಿರಂತರ
ನಮ್ಮದೇ ವಿನ್ಯಾಸ ನೆಮ್ಮದಿಗೆ
ನಾಳೆ ನಗುವ ಮುನ್ನುಡಿಗೆ

3 thoughts on “ನಾಗರಾಜ ಬಿ.ನಾಯ್ಕ ಕವಿತೆ-ಬದುಕೆಂಬ ವಿನ್ಯಾಸ

  1. ಜೀವಸೆಲೆ ಉಕ್ಕುವ ಪರಿ ಒರತೆಯಷ್ಟೇ ಸಹಜ..!
    ರಾಮಮೂರ್ತಿ ನಾಯಕ.

  2. ಬದುಕು ದಾರದ ಉಂಡೆಯಂತೆ.. ನೋಡುವುದಕ್ಕೆ ಸರಳ ಸಲೀಸು… ಸ್ವಲ್ಪ ಹೆಚ್ಚು ಕಡಿಮೆಯಾದರೂ , ಸಿಕ್ಕು ಸಿಕ್ಕಾಗಿ, ಗಂಟು ಗಂಟಾಗಿ, ಬಿಡುತ್ತದೆ… ಅದನ್ನು ಬಿಡಿಸಿಕೊಳ್ಳುವುದು ಕಷ್ಟವಾಗುತ್ತದೆ. ನಿತ್ಯ ನಿರಂತರ ದುಡಿತ ಈ ಹೃದಯದ ಬಡಿತ. ಭಾವನೆಗಳ ಜೊತೆ ಸಾಗುವ ಜೀವನ… ಜೀವನ್ಮುಖಿ ಚಿಂತನೆ.. ❤

    ನಾನಾ

Leave a Reply

Back To Top