ಡಾ.ಪ್ರಭು,ಬ, ಅಂಗಡಿ ಅವರ ಕವಿತೆ- ಜೀವ

ಜೀವ
ಜೀವನ….
ಯಾರದೊ ಹೆಸರಲ್ಲಿ
ಬರೊದಕ್ಕೆ ದೊರಕಿತ್ತು

ಆದರೆ…
ವೇಳೆ ಕಳೆಯುತ್ತಿದೆ
ಹಾಳೆಯ ತುಂಡನ್ನು ಸಂಗ್ರಹಿಸುವದಕ್ಕೆ
ಏನ್ಮಾಡ್ತಿಯಾ ಇಷ್ಟೊಂದು ಗಳಿಕೆ ಮಾಡಿ?
ಶವ ವಸ್ತ್ರದಲ್ಲಿ ಬೊಕ್ಕಣವಿಲ್ಲ ಕುಣಿಯಲ್ಲಿ ಪೆಟ್ಟಿಗೆಯಿಲ್ಲ
ಮತ್ತೀ…
 ಮರಣದ ದೇವತೆಗಳು
   ಲಂಚಾನೂ ತಗೊಳ್ಳೊದಿಲ್ಲ
ಸ್ವಂತದ ಅನುಕರಣಕ್ಕೆ ಆಶ್ರಯ
ಯಾರು ಕೊಡುತ್ತಾರೆ


ಸಕಲರೂ ಸತ್ಯವಂತರಾದರೆ…
ತಪ್ಪನ್ನು ಯಾರು ಮಾಡಬೇಕು?
ಹೇ… ‘ಪರಮಾತ್ಮ’
ನನ್ನ ಈ ಮಿತ್ರರನ್ನು ಸರಿಯಾಗಿಯಿಡು
ಇಲ್ಲಾಂದ್ರೆ ನಾನು ಸರಿಯಾಗಿರುವಂತೆ
ಯಾರು ಬೇಡಿಕೊಳ್ಳುತ್ತಾರೆ


‘ಪರಮಾತ್ಮ’…
ನನಗೆ ಹೇಳಿದ
ಇಷ್ಟೊಂದು ಮಿತ್ರರನ್ನು ಮಾಡಬೇಡೆಂದು
ಹುಷಾರು… ಮೋಸ ಹೋಗಿಬಿಡುತ್ತಿಯಾ
ನಾ ಹೇಳಿದೆ…
ಏ ‘ಪರಮಾತ್ಮ’
ನೀ ಈ ಮ್ಯಾಸೆಜ್ ಓದುವವರನ್ನೊಮ್ಮೆ
ಬೇಟಿಯಾಗು
ನೀ ಸಹ ಮೋಹದಿಂದ ಮಿತ್ರನಾಗಿ ಬಿಡುತ್ತಿಯಾ
ಮೂರ್ತಿ ಚಿಕ್ಕದು ಆದರೆ ಕೀರ್ತಿ ಅತಿ ದೊಡ್ಡದು
ಹಣದಿಂದ ಅಷ್ಟೊಂದು ಐಸಿರಿ ಹೊಂದಿಲ್ಲ
ಆದರೆ…
ನನ್ನ ಮಿತ್ರರ ದುಃಖವನ್ನು
ಕೊಳ್ಳುವ ಕುವತ್ತು ಮಾತ್ರ ನನ್ನಲ್ಲಿದೆ
ನಾನು ‘ಆಜ್ಞೆ’ ಹೊರಡಿಸುವ….
‘ಯಕ್ಕಾ’ ಆಗುವ
ಇಲ್ಲ ಅರಸಿಯ ಅರಸನಾಗುವ ಬಯಕೆ ನನ್ನದಲ್ಲ
ಯಾರ ಹಣೆ ಬರಹದಲ್ಲಿ
ಬರುತ್ತೇನೊ ಆಟ ಗೆಲ್ಲುತ್ತಾರೆ ಅವರು
ನಾನು… ಜೋಕರ್ ಆಗುತ್ತೇನೆ
ಅವರ ಆಟವನ್ನು ಗೆಲ್ಲಿಸುತ್ತೇನೆ.

————————

Leave a Reply

Back To Top