ಸವಿತಾ ದೇಶಮುಖ ಅವರ ಕವಿತೆ-ಗೆದ್ದವರು

ದೂರ ಬಲು ದೂರ
ಹರಿದಾಡುವ ನಿನಗೆ
ಯಾರು ಕಡಿವಾಣ  
ಹಾಕರು


ಭಾವನೆಗಳ ಅತ್ತತ್ತ
ತನಗೆನಿಸಿದ ದಾಟಿಯಲ್ಲಿ
ಹಾಡುವ ನಲಿಯುವ

ಕುಣಿದಾಡುವ ರೋಧಿಸುವ
ಶಪಿಸುವ ನಿಂದಿಸುವ
ವರ್ಣಿಸುವ  ಸೂಖಿಸುವ
ಮನವೇ.  

    
ನದಿ ಸಾಗರಗಳ ಆಚೆ
ಹಾರುವೆ.        
ಗಿಡಮರ ಅರಣ್ಯಗಳಲ್ಲಿ
ಹಾರುವೆ ಮುಗಿಲೆತ್ತರಕ್ಕೆ
ಪಾತಾಳಕ್ಕೆ ಇಳಿದು
ನೋಡುವೆ.      
 ಎಲ್ಲದರಲ್ಲೂ ನಿನ್ನ
 ಹಿಡಿದವರಾರು.    
 ನಿಂತಲ್ಲೇ  ನಿಲಲಾರದ
 ಹರಿದಾಡುವ  ಮಾಯೆ  
 ಸ್ಥಿರವಲ್ಲದ ತಾಣ.    
 ನಿನ್ನ ಸ್ಥಿತಗೊಳಿಸಿ
 ಗೆದ್ದವರು
ಬುದ್ಧ ಬಸವ  ಮಹಾವೀರರಾದರು.
_______————————————————–

Leave a Reply

Back To Top