ಕಥಾ ಸಂಗಾತಿ
‘ಮೌನಗೀತೆ’
ಡಾ ಅನ್ನಪೂರ್ಣ ಹಿರೇಮಠ
ಜೀವನದಾಗ ಬಂದದ್ದನ್ನು ಮೂಕಲೆ, ಮೌನದಿಂದ ದುಃಖ ಅವಿಚಿಟ್ಟುಕೊಂಡ ಬಂದಂತ ಬಾಳ ನೂಕಿದಾಕಿ ಗೌತಮಿ. ಅವಳ ಕಣ್ಣಾಗ ಸದಾ ಕಣ್ಣೀರ ಕಾಲುವೆ ಹರಿತಿತ್ತು. ಇಬ್ಬನಿ ಬಿದ್ದಂಗ ಕಣ್ಣಾಗ ನೀರ ತುಂಬಿ ತುಳಕದಂಗ ಹಿಡಕೊಂಡ,ಅವಳ ಗಮನ ಎಲ್ಲ ಕೆಲಸ ಯಾವುದಾದರೂ ಆಗ್ಲಿ ,ಬಟ್ಟೆ ಹೊಲೋದು, ರೊಟ್ಟಿ ಮಾಡುದು, ಚಟ್ನಿ ಮಾಡುದು, ಮನೆ ಕೆಲಸ ,ಎಮ್ಮಿ ಕಾಯೋದು, ಸಗಣಿ ಹಿಡಿಯೋದು, ಹೊಲಗದ್ದೆ ಕೆಲಸ ಎಲ್ಲಾ ಮಾಡಕ್ಕೆ ಮಾಡಕ್ಕೆ .ಜಗತ್ತ ಎಂತಾದ ಅಂತ ತಿಳ್ಕೋ ಪ್ರಯತ್ನ ಮಾಡಿದವಳ ಅಲ್ಲ, ಕಣ್ಣ ತಗದು ಪ್ರಪಂಚ ನೋಡಿದವಳಲ್ಲ .ಕಂಡದ್ದೆಲ್ಲ ಹಾಲು ಅನ್ನುವಕಿ .ಸಣ್ಣ ವಯಸ್ಸಿನಾಗ ಮದುವಿ,ಮದವಿ ಅಂದ್ರ ಏನ್ ಅಂತ ಗೊತ್ತಾಗದ ವಯಸ್ಸಿನಾಗ ಎರಡು ಮೂರು ಮಕ್ಕಳ ಆಗಿ ಬಿಟ್ಟಿದ್ವು. ಮಕ್ಕಳ ಜೊತೆಗೆ ಅಕಿ ಕಲಿಯೋದ ಗಿಲಿಯೋದ ಎಲ್ಲಾ ಸಾಗಿತ್ತು. ಕಾಡೋ ಗಂಡ, ಪ್ರೀತಿ ,ಪ್ರೇಮ ಅಂದ್ರ ಗೊತ್ತಿಲ್ಲ ಅವನ ಚಟಕ್ಕ ಮಕ್ಕಳು ಮರಿ ಆಗಿದ್ವ ಆಕಿಗೆ ಮಕ್ಕಳ ಅಂದ್ರ ಪ್ರಾಣ. ಕಲೋದಂದ್ರ ಜೀವ ಹಿಂಗಾಗಿತ್ತು ಅಕಿ ಬಾಳೆ. ಕೆಲಸಾನೂ, ಮಕ್ಕಳನೂ ಎರಡೂ ಸಂಭಾಳಿಸಿಕೊಂಡ ಹೆಂಗೋ ಜೀವನ ಕಲಿತಿದ್ಲು ಆದ್ರೆ ಅಕಿ ಗಂಡ ಅನ್ನೋ ಪ್ರಾಣಿ ಎಲ್ಲಾ ಜವಾಬ್ದಾರಿ ಅಕ್ಕಿ ಹೆಗಲಿಗೆ ಹಾಕಿ ಬಾರದೂರಿಗೆ ಹೋಗ್ಬಿಟ್ಟ.
ಹಿಂಗ ಒಂದಿನ ಅಕಿ ಸಾಲಿಯೊಳಗ ಏನೊ ಕೆಲಸಕ್ಕಂತ ಒಬ್ಬ ಸಾಹೇಬ ಬಂದಿದ್ದ. ಗೌತಮಿ ತನ್ನ ಕೆಲಸ ತನ್ನ ಪಾಡಿಗೆ ಮಾಡತಿದ್ಲು ,ಹೊರಗಡೆಯಿಂದ ಕಟ್ಟು ಮಸ್ತ್ ಶರೀರದ ಮನುಷ್ಯ ನೀಟ್ ಆಗಿ ಡ್ರೆಸ್ ಮಾಡ್ಕೊಂಡು ಒಳಗಡೆ ಬರ್ಕೊಂತ ನೀ ಇಲ್ಲೇ? ಅಂದ. ಯಾರನ್ನ ಕೇಳಿದ್ರು ಅಂತ ಗೊತ್ತಿಲ್ಲ, ನಮಸ್ತೆ ರೀ ಸರ್ ಅಂತ ಗೌತಮಿ ನಮಸ್ಕಾರ ಹೇಳಿ ಮತ್ತೆ ತನ್ನ ಪಾಡಿಗೆ ತನ್ನ ಕೆಲಸ ಮಾಡಕತ್ಳು. ಮತ್ತ ಆ ಸಾಹೇಬ ನಿಮ್ಮನ್ನ ರೀ ಗೌತಮಿ ಇಲ್ಲೇ? ಅಂದ್ರು. ನನ್ನ ಕೇಳಿದ್ರು ಹಾರಿ ಸರ್ ನನ್ನ ಕೇಳಿದ್ರಾ ಸರ್? ಹಂಗರಿ ಸರ ಏನೇನೋ ಕಥಿಯಾತು ಎರಡು ಮೂರು ವರ್ಷ ಆತ್ರಿ ಇಲ್ಲೇ ಕೆಲಸ ಮಾಡತನ್ರಿ ಅಂದ್ಲು. ಅಲ್ಲೇ ಹೆಡ್ ಮಾಷ್ಟ್ರ ಕೇಳ್ದ ಗೊತ್ತೇನ್ರೀ ಗೌತಮಿ ಇವರ ನಿಮಗ ಅಂತ ?ಗೌತಮಿ ಹೇಳಿದ್ಲು ಹೌದ್ರಿ ಸರ್ ಬಾಳ ವರ್ಷದಿಂದ ನನಗ ಪರಿಚಯಿರಿ. ನಾ ಪ್ರಾವೆಟ್ ಸ್ಕೂಲ್ ಹೆಡ್ ಮಾಸ್ಟರ್ ಇದ್ದಾಗ ನನ್ನ ಸಾಲಿಗೆ ಬೆಟ್ಟಿ ಕೊಟ್ಟಿದ್ರು, ಇವರ ಮತ್ತ ಹಂಗ ಆಫೀಸ್ ಕೆಲಸಕ್ಕೆ ಅಂತ ತಿರುಗಾಡುವಾಗ ಬಹಳ ಸಲ ಇವರ ನನಗೆ ಗೊತ್ತು ಅಂತ ಅಂದ್ಲು ಗೌತಮಿ .ಆಗ ಹೆಡ್ ಮಾಸ್ಟರ್ ಹೌದೇನ್ರೀ ಗೊತ್ತೇನ್ರೀ ಅಂತ ಅಂದ್ರು .ಗೌತಮಿ ಸಾಹೇಬ್ರು ಕಡೆ ನೋಡಿ ನೀವು ಬೇರೆ ಕಡೆ ಇದ್ರಲ್ಲ? ಯಾವಾಗ ಬಂದ್ರಿ ಅಂದ್ಲು .ಆಗ ಸಾಹೇಬ ಆರು ತಿಂಗಳಾತು ಈ ಕಡೆ ಬಂದ ಅಂದ್ರು .ಹಂಗ ಕುಶಲೊಪರಿ ಮಾತ ನಡೆದ್ವು. ಅಂದ ಸಂಜೆ ನಾಲ್ಕ ಗಂಟೆಗೆ ಗೌತಮಿಗೆ ಕರೆ ಬಂತು. ಯಾರು? ಯಾರು? ಅಂದ್ಲು. ಅಕಡಿಂದ ಮಾತ ನಾನ .ನೀವ ಅಂದ್ರೆ ಅಂದ್ಲು ?ಗೌತಮಿ ಆಗ ಆ ಕಡೆಯಿಂದ ಅದ ಮುಂಜಾನೆ ನಿಮ್ ಸಾಲ್ಗೆ ಬಂದಿದ್ನಲ್ಲ ,ಅಂತ ಅಂದ್ರು. ಆಗ ಗೌತಮಿ ಸ್ವಲ್ಪ ತಡವರಿಸಿ ಹೌದ್ರೀ ನೀವ ಸಾಹೇಬ್ರೆನ್ರಿ ? ಅಂದ್ಲು. ಹಾ ನಾನ ಅಂದ್ರು. ಹಂಗ ಮಾತ ಕಥಿ ನಡಿತು. ಅಕಿ ಕತಿಯೆಲ್ಲ ನಡೀತು ನಡದದ್ದ ಹೇಳಿದ್ಲು. ಹಿಂಗ ಆತು ?ಇರಲಿ ಬಿಡು ಏನು ಮಾಡೋದು? ಬಂದಂಗ ಬದುಕಬೇಕಲಾಪಾ ಅಂತ ಬಾಳ ಆತ್ಮೀಯತೆಯಿಂದ ಮಾತಾಡಿದ್ರು.ಅವಳಾ ಹಂಗರಿ ?ಹಾರಿ, ನೋಡ್ರಿ, ಹೌದ್ರಿ, ಅಂತ ಅವರ ಪ್ರಶ್ನೆಗಳಿಗೆ ಭಯದಲ್ಲೇ ಉತ್ತರಿಸ್ತಾ ಇದ್ಲು. ಯಾಕ? ಅಂಜಬೇಡ ಆರಾಮ್ ಮಾತಾಡ ಒಳ್ಳೆ ಫ್ರೆಂಡ್ ಅಂತ ತಿಳ್ಕೋ. ಒಳ್ಳೆ ಫ್ರೆಂಡ್ ಆಗಿ ಇರೋನು .ಆರಾಮ್ ಮಾತಾಡ ಹೆದರುತ್ತೀ ಯಾಕ? ಏನ ಬೇಕ ಹೇಳ ಕೊಡ್ಲಿ ಅಂತಿದ್ರು.ಬೇಡ ಅಂದ್ರು ಅವಳನ್ನ ಬಿಡತಿರಲಿಲ್ಲ ಮಾತಿಗೆ ಎಳಿತಿದ್ರು.ಅವಳಿಗೆ ಇನ್ನೂ ಭಯ ಜಾಸ್ತಿ ಆತ. ಇರ್ಲಿ ಸರ್ ಹಂಗಲ್ಲ ಬಿಡ್ರಿ .ಅಂತ ಅಂತಿದ್ಲು .ಹಂಗ ಫ್ರೀ ಟೈಮ್ ಸಿಕ್ಕಾಗೆಲ್ಲಾ ಮಾತಾಡಕ ಶುರು ಮಾಡಿದ್ರು. ಗೌತಮಿ ಕಷ್ಷ ಸುಖ ಹಂಚಿಕೊಂತ ಫೋನ್ ರಿಸೀವ್ ಮಾಡ್ತಿದ್ಲು .ಮನಿ ಕೆಲಸ ,ಅಡುಗೆ ಸುದ್ದಿ, ಜೊತೆಗೆ ಆಕೆಗೆ ಬರಿಯೋ ಹವ್ಯಾಸ ಇತ್ತು ಅದನ್ನೆಲ್ಲ ಹೇಳ್ತಿದ್ಲು. ಅವರ ಫ್ರೆಂಡ್ಸ್ ಸರ್ಗಳ ಸುದ್ದಿ, ಆಫೀಸಾ, ಸಾಲಿ ಸುದ್ದಿ ಮಾತಾಡ್ಕೊಂಡ ಬಾಳ ಸಮೀಪಕ್ಕ ಬಂದ್ರು. ಸಾಹೇಬರು ಏನಲೇ ಮಾತಾಡ ಯಾಕ? ಏನಾತ? ಸಾಹೇಬ ಹೇಳಲೇ ಏನ ಬೇಕ? ಬರ್ಲಿ ?ಏನ್ ಹೇಳ? ಅನ್ನಾಕತ್ರು .ಇಕಿ ಇಲ್ರಿ ಸರ, ಒಳ್ಳೆ ಫ್ರೆಂಡ್ಸ್ ಆಗಿ, ಒಳ್ಳೆದ ಕೆಟ್ಟದ್ದ ಕಷ್ಟ ಸುಖ ಮಾತ ಹಂಚಿಕೊಂಡ ಇರೋಣರಿ ಅಂತಿದ್ಲು.ಎಲ್ಲಾ ಇರಲಿ ಮತ್ತೆ ಸಮಾಧಾನಕ ಎರಡ ಮಾತ ಸಾಕ್ರೀ. ಅಂದ್ಲು ಗೌತಮಿ. ಅದಕ್ಕ ಸಾಹೇಬ ಕೇಳಲಿಲ್ಲ ಅದಕ್ಕೆನಾತ ?ಏನ ಮಾತಾಡ ಏನಾಯ್ತು? ಅಂತಿದ್ದ ಗೌತಮಿಗೆ ಹೊಸ ಪರಿಚಯ ಏನಲ್ಲ ಅಕಿ ನೌಕರಿ ಮಾಡುವಾಗಿಂದ ಈ ಸಾಯೇಬನ್ನ ನೋಡಿದ್ಲು, ಒಳ್ಳೆ ವ್ಯಕ್ತಿತ್ವ, ಜಾಣ ,ಬುದ್ಧಿವಂತ ಹೇಳಿಕೊಳ್ಳುವಷ್ಟು ಸುಂದರ ಅಲದಿದ್ರೂ ಯಾವುದರಾಗೂ ಕಡಿಮೆ ಇರಲಿಲ್ಲ. ಅವನ ಆಗ ನೋಡಿ ಭಾರೀ ಅಂತ ಗೌತಮಿ ಅದ್ದದ್ಲು. ಅವಾಗ ಅಕಿಗೂ ಅವರ ಜೊತೆ ಮಾತಾಡಿದ್ರ ಅದೇನೊ ಸಮಾಧಾನ? ಅಕಿ ಮೊಬೈಲ್ ಸಂಗದಿಂದ ಟೈಮ್ ಸಿಕ್ಕಾಗೆಲ್ಲಾ ವಿಡಿಯೋ ಕಾಲ್, ಆಡಿಯೋ ಕಾಲ್, ಶುರು ಆತು ಹಂಗ ಇಬ್ಬರೂ ಬಾಳ್ ಹತ್ರ ಆದ್ರು., ಆಗಾಗ ಸ್ವಲ್ಪ ಭೇಟಿ ಏನೊ ಒಂದೆರಡ ಮಾತ, ನಗು ನಡಿತು. ಜೀವನದಾಗ ಏನು ಸುಖ ಕಾಣದ ಗೌತಮಿಗೆ ಅದೇನೋ ಹಿತ, ಅವನ ನೋಡಿರ ಅದೇನೋ ಖುಷಿ, ಅಂವಾ ಮುಂದ ಬಂದ್ರ ನಡುಕ .ಹಿಂಗ ಸ್ಟಾರ್ಟ್ ಆತು .ಒಮ್ಮೆ ಅಕಿ ಹತ್ತಿರ ಬಂದ ಕೈ ಗಟ್ಟಿಯಾಗಿ ಹಿಡಿದ ಅವಳನ್ನು ಹಿಡಿದ ಎತ್ತಿದ ಅವಳು ನಿಂತಲ್ಲೇ ಕುಸಿದು ಬಿದ್ದಿದ್ಳು ಮೈಯೆಲ್ಲಾ ಬೆವರಿತ್ತು .ಇಂಥ ಹಿತವಾದ ನೋವ ಅಕಿ ಜೀವನದಾಗ ಎಂದೂ ಕಂಡಿರಲಿಲ್ಲ. ಉಂಡುದ್ದ ಇದ ಮೊದಲ ಆಗಿತ್ತ.ಬರ್ಲಿ ಅಂತ ಅಂವ ಕೇಳ್ದಾಗ್ಲೆಲ್ಲಾ, ಹೋಗೋ ಹೋಗು ಯಾದಕ್ ಬರ್ತಿ? ಅಂತಿದ್ಲು ಗೌತಮಿ. ಊಟ ಅಷ್ಟ? ಮುಂದೇನಿಲ್ಲ ಅಂತಿದ್ದ ಸಾಹೇಬ .ಆದರ ಗೌತಮಿಗೆ ಏನೂ ಆಸೆ ಇರಲಿಲ್ಲ .ಅವನ ಎರಡ ಚೆಂದ ಮಾತ, ಜೊತೆ ಸ್ವಲ್ಪ ಇರೋದು ಆಗಿತ್ತು. ನನ್ನ ಜೀವನದಾಗ ವಸಂತ ಬಂದಂಗ ಬಂದಾನ ಅಂದ್ಕೊಂಡಿದ್ಲು ಗೌತಮಿ. ಇವನಿಂದ ಹಿತ ಗಾಳಿ ಬೀಸಿದಂಗ ಆಗಿತ್ತ ಅಕಿಗೆ.ಇವ ಜೀವ ಅಂತ ತಿಳಿದಿದ್ಲು ಗೌತಮಿ. ಹಂಗ ಮರುಳಾಗ್ಬಿಟ್ಟಿದ್ಲು ಏನೇನೋ ಆಸೆ ಅವ್ನ್ ಜೊತೆ ನಾ ಸಂತೋಷದಿಂದ ಮಾತಾಡೆಕೊಂತ ಜೀವನದ ಎಲ್ಲಾ ಕಷ್ಟ ಮರೀಬಹುದು ಅನ್ಕೊಂಡಿದ್ಲು ಗೌತಮಿ. ಆದ್ರ !ವಸಂತನ ಈ ಹಾಡೊ ಕೋಗಿಲೆ ಕಂಠ ಕಟ್ಟಿಹಾಕಿ ಆರು ತಿಂಗಳ ಹೋದಂಗ ಹೋಗಿಬಿಟ್ಟ. ಆಕಿಗೆ ಮತ್ತೆ ಬರುವನೆ ವಸಂತ? ನನ್ನ ಪ್ರೀತಿಯ ಸಂತ ?ಎಂಬ ಹಾಡಿನ ಸಾಲೊಂದನ್ನ ಬಿಟ್ಟ ವಿರಹವೇದನೆಗೆ ದೂಡೆ ಮರೆಯಾಗಿದ್ದ. ಗಾಯದ ಮ್ಯಾಲ ಬರಿ ಎಳದಂಗ ಆಗಿತ್ತು ಗೌತಮಿಗೆ. ಮರಳಗಾಡಿನ್ಯಾಗ ಸಿಕ್ಕ ನೀರ ಝರಿ ಬತ್ತಿ ಹೋದಂಗ ಆಗಿತ್ತು ದಂಗಾಗಿ ಮೂಕಾಗಿ ಹೋಗಿದ್ಲು ಗೌತಮಿ..
ಡಾ ಅನ್ನಪೂರ್ಣ ಹಿರೇಮಠ
Nice … meaningful man