ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಿರುವ ಯುವ ಸಮುದಾಯ-ಸಿದ್ಧಾರ್ಥ ಟಿ ಮಿತ್ರಾ

ವಿಶ್ವಮಾನ್ಯತೆ ಪಡೆದ ನಮ್ಮ ಸಂವಿಧಾನವು ಆಧುನಿಕ ಭಾರತದಲ್ಲಿ ಸಮಾನತೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ.ಸಮಾನತೆ ಸೋದರತೆ ಮತ್ತು ಮಾನವೀಯ ಸಂಬಂಧಗಳನ್ನೊಳಗೊಂಡ ಒಂದು ಬೆಚ್ಚಗಿನ ಬದುಕನ್ನು ಹಲವು ಶತಮಾನಗಳ ಕಾಲ ಹಂಬಲಿಸಿದ,ಒತ್ತಾಯಿಸಿದ ಜನ ಸಮುದಾಯದ ಕನಸುಗಳು, ಆಶಯಗಳು ಸ್ವಾತಂತ್ರ್ಯಾನಂತರ ಸಂವಿಧಾನ ರೂಪ ಪಡೆದವು.ಸಮನಾತೆಯ ಕನಸುಗಾರ,ಹರಿಕಾರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮರ್ಥ ನಾಯಕತ್ವದಲ್ಲಿ ಸ್ವಾತಂತ್ರ್ಯ ಚಳುವಳಿಗಾರರು, ಹುತಾತ್ಮರು ಕಂಡ ಕನಸಿನ ಭಾರತವನ್ನು ನನಸು ಮಾಡುವ ನೆಲೆಯಲ್ಲಿ ನಮ್ಮ ಸಂವಿಧಾನ ಹೆಚ್ಚು ಸಶಕ್ತವಾಗಿದೆ. ಯುವ ಪೀಳಿಗೆಯನ್ನು ದಿಕ್ಕುಗೆಡಿಸುವ ಪ್ರಯತ್ನ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ.ನಮ್ಮನ್ನು ಮುನ್ನಡೆಸಬೇಕಾದ ಸಂವಿಧಾನವನ್ನು ನಾವು ಕಾಪಡಿಕೊಳ್ಳಬೇಕಾದ ಸಮಯ ಇದು . ಸ್ವಾತಂತ್ರ್ಯ, ಸಮಾನತೆ ಭ್ರಾತೃತ್ವ ಸಮಾಜವಾದಿ ಮತ್ತು ಜಾತ್ಯತೀತ ಭಾವನೆಗಳನ್ನು ಮೂಡಿಸುವ ಧೃಢ ಸಂಕಲ್ಪ ಆಶಯಗಳನ್ನು ಜನ ಸಾಮಾನ್ಯರಿಗೆ, ಅದರಲ್ಲಿಯೂ ಭಾರತದ ಭವಿಷ್ಯವನ್ನು ನಿರ್ಮಾಣ ಮಾಡುವ ಶಿಕ್ಷಕ ವೃಂದ ಮತ್ತು ಯವ ವಿದ್ಯಾರ್ಥಿ ಯುವ ಜನರಿಗೆ ಸರಳವಾಗಿ ತಮ್ಮ ಮತದನಾದ ಜವಾಬ್ದಾರಿ ತಿಳಿಸುವ ಅಗತ್ಯವಿದೆ.
ನಮ್ಮ ಸಂವಿಧಾನ ಜಾರಿಗೆ ಬಂದಾಗ ಸಂವಿಧಾನದ ನಿರ್ಮಾಪಕರು ಕೈಗೊಂಡ ದಿಟ್ಟ ಹೆಜ್ಜೆ ಎಂದರೆ ದೇಶದ 21 ವರ್ಷ ತುಂಬಿದ ಯುವ ಸಮುದಾಯಕ್ಕೆ ಜಾತಿ ಮತ,ಲಿಂಗ ಎನ್ನದೆ ಸಾಮಾಜಿಕ ಸ್ಥಾನಮಾನ ಮುಂತಾದವುಗಳ ಆಧಾರದ ಮೇಲೆ ತಾರತಮ್ಯವಿಲ್ಲದೆ ಮತದಾನದ ಹಕ್ಕನ್ನು ನೀಡಲಾಗಿದೆ.ಇದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಸಂವಿಧಾನವು 326 ನೇ ವಿಧಿಗೆ ತಿದ್ದುಪಡಿಯನ್ನು ತಂದು 1989 ರಿಂದ ಜಾರಿಗೆ ತರುವ ಮೂಲಕ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು.  ಮತದಾನ ಮಾಡುವುದು ನಮ್ಮ ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿದೆ.ಅದು ನಮ್ಮ ಸಂಪೂರ್ಣವಾದ ಹಕ್ಕು ಕೂಡ. ಸದ್ಯ ನಮ್ಮ ಪ್ರಜಾಪ್ರಭುತ್ವ ಆತಂಕಕಾರಿ ಸ್ಥಿತಿಯಲ್ಲಿದೆ.ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತದ ಹಕ್ಕನ್ನು ನಾವು ಸ್ಥಾಪನೆಗೊಳಿಸಲೇಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಆಶಯಗಳ ಮೇಲೆಯೇ ಗದಾಪ್ರಹಾರ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯ ವಿಷಯವಾಗಿದೆ.ಸಂವಿಧಾನವನ್ನು ಆದರ ಹಿಂದಿರುವ ಆಶಯದೊಂದಿಗೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸದ ಸಂದರ್ಭದಲ್ಲಿ ಹುಟ್ಟಿಕೊಂಡ ಅತೃಪ್ತಿಗಳನ್ನು ಬಳಸಿ ಹುಸಿ ಕೆಟ್ಟ ಸಂಸ್ಕೃತಿಯ ಪ್ರಚಾರದ ಮೂಲಕ ಸಂವಿಧಾನದ ಮೂಲ ಆಶಯಗಳ ಮೇಲೆ ದಾಳಿ ಮಾಡುತ್ತಾ ನಮ್ಮ ಯುವ ಪೀಳಿಗೆಯನ್ನು ದಿಕ್ಕುಗೆಡಿಸುವ ಪ್ರಯತ್ನ ಇಂದು ವ್ಯವಸ್ಥಿತವಾಗಿ ನಡೆಯುತ್ತಿದೆ.ನಮ್ಮನ್ನು ಮುನ್ನೆಡೆಸಬೇಕಾದ  ಸಂವಿಧಾನವನ್ನು ನಾವು ಕಾಪಡಿಕೊಳ್ಳುವ ಗಳಿಗೆಯಿದು .ಆದರೆ ಈ ದಿಕ್ಕಿನಲ್ಲಿ ನಾವು ಸರಿಯಾಗಿ ಸಾಗುತ್ತಿದ್ದೇಯೆ ? ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಿದೆ.ಹೀಗಾಗಿಯೇಸಂವಿಧಾನದ ಆಶಯಗಳನ್ನು ಪ್ರಜ್ಞಾಪೂರ್ವಕವಾಗಿ ಪ್ರಶ್ನಿಸುವರ ಧೈರ್ಯ ಮುನ್ನೆಲೆಗೆ ಬರುವ ಮುನ್ನವೆ ಅವರಿಗೆ ಸೊಲಿಸಲಾಗುತ್ತಿದೆ.ಹಿಂದೊಮ್ಮೆ ಕೇಂದ್ರ ಸರ್ಕಾರದ ಸಚಿವರೊಬ್ಬರು, ಹಾಗೂ ರಾಜ್ಯದ ಆಡಳಿತ ಪಕ್ಷದ ಶಾಸಕನೊಬ್ಬ ‘ಸಂವಿಧಾನವನ್ನು ಬದಲಾಯಿಸಬೇಕು ಬದಲಾಯಿಸಲು ಅಧಿಕಾರಕ್ಕೆ ಬಂದಿರೋದು ಎಂದು ಭಾಷಣ ಮಾಡಿ ವಿವಾದವನ್ನೇಬ್ಬಿಸಿದರು.ಸಂವಿಧಾನವನ್ನು ಬದಲಾಯಿಸುವುದು ಬೇರೆ , ತಿದ್ದುಪಡಿ ಮಾಡುವುದು ಬೇರೆ 368ನೇ ವಿಧಿಯಲ್ಲಿ ತಿದ್ದುಪಡಿ ಮಾಡುವ ಅವಕಾಶವನ್ನು ಸಂವಿಧಾನ ನೀಡಿದೆ .ಆದರೆ ಸಂವಿಧಾನ ಬದಲಾವಣೆಗಾಗಿ ಬಂದಿದ್ದಿವೇ  ಎಂಬ ಮಾತಿನಲ್ಲಿ ತಿದ್ದುಪಡಿಯ ಆಪೇಕ್ಷೆಯಿಲ್ಲ.ಈ ಮಾದರಿಯ ಮಾತುಗಳು ಅಸಹನೆಯು ಸ್ಫೋಟಗೊಳ್ಳುವ ಕ್ರಿಯೆಯೂ ಆಗಬಲ್ಲದು ಎಂಬುದಕ್ಕೆ ಸಾಕ್ಷಿ 12-8-2018 ರಂದು ರಾಷ್ಟ್ರದ ಶಕ್ತಿ ಕೇಂದ್ರದ ಪಕ್ಕದಲ್ಲಿಯೇ ದೆಹಲಿಯ ಜಂತರ ಮಂತರ ಬಳಿ ಸಂವಿಧಾನದ ಪ್ರತಿಯನ್ನು ಸುಟ್ಟ ಘಟನೆ ಈ ದೇಶದಲ್ಲಿ ಸಾಕ್ಷಿಯಾಯಿತು.ಈಗ ದೇಶದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಜಾತಿವಾದ,ಕೋಮುವಾದ, ಮತ್ತು ಸಾಮಾಜಿಕ ಅಸಹನೆಗಳಲ್ಲಿ ಸಂವಿಧಾನ  ವಿರೋಧಿ ಚಟುವಟಿಕೆ ಜಾಸ್ತಿಯಾಗುತ್ತಿವೆ. ಸರ್ವ ,ಧರ್ಮ ಸಹಿಷ್ಣುತೆ ಮತ್ತು ಸಮತೆಯ ಆಶಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.ಈ ಆಶಯವನ್ನೇ ಒಪ್ಪದಿರುವವರು ನೈಜ ಭಾರತೀಯರಾಗಲು ಅರ್ಹರಲ್ಲ.ಆದಕ್ಕಾಗಿಯೇ ಸಂವಿಧಾನದ ವಿರೋಧಿಗಳಿಗೆ ಪಾಠ ಕಲಿಸಲು


ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದ ಮಹತ್ವ, ಶ್ರೇಷ್ಠತೆ ಹಾಗೂ ಘನತೆಯನ್ನು  ಮನವರಿಕೆ ಮಾಡಿಕೊಡಬೇಕು ಹಾಗೂ ಅದರ ಅವಶ್ಯಕತೆಯೂ ಇದೆ.ಅಂತೆಯೇ ಎಲ್ಲರೂ ಸಂವಿಧಾನವನ್ನು ತಿಳಿದುಕೊಳ್ಳಬೇಕು ತಿಳಿದು ಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು.ನಾಡಿನ ಹಿತಕಾಯುವ ಬಯಸುವ ಉತ್ತಮ ಸರ್ಕಾರ ರಚಿಸಲು ಕಡ್ಡಾಯವಾಗಿ ನಾಡಿನ ಯುವ ಸಮುದಾಯವು ಯೋಚಿಸಿ ಮತದಾನ ಮಾಡಬೇಕು.


Leave a Reply

Back To Top