ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ತಿಪ್ಪೆ ನಕ್ಕಿತು
ಜಾತಿ ಎಂಬ ಜಂಬದ ಕೋಳಿ
ರಾತ್ರಿಯೆಲ್ಲ ತಿಪ್ಪೆ ಕೆದರಿತು
ಆಚರಣೆ ಮತ ಪಂಥಗಳ
ವ್ಯರ್ಥ ಹುಡುಕಾಟ
ಬೆಳಿಗ್ಗೆ ಮಂಪರು ನಿದ್ದೆ
ಕೋಳಿ ಕೂಗಲೇ ಇಲ್ಲ
ಸೂರ್ಯ ಉದಯಿಸಿ ಬಿಟ್ಟ
ಜನರು ಹೊಲಕೆ ಹೋದರು
ಕೋಳಿಗೆ ಕೋಪ ಬಂತು
ತಾನು ಕೂಗದೆ
ಸೂರ್ಯ ಹೇಗೆ ಉದಯಿಸಿದ
ಜನರು ಹೇಗೆ ಎದ್ದರು
ಧರ್ಮ ಮಂತ್ರ ಜಪತಪ
ಕೆದರುವದನ್ನು ಬಿಡಲಿಲ್ಲ
ಹಬ್ಬಕ್ಕೆ ಬಲಿ ಪೂಜೆ
ಕೋಳಿಗೆ ಆಹ್ವಾನ
ಕೋಳಿ ಸತ್ತಿತು
ಸೂರ್ಯ ಹುಟ್ಟಿದ
ಜನರೂ ಎದ್ದರು
ಕೆದರಿದ ತಿಪ್ಪೆ ನಕ್ಕಿತು
—————————–
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಇಂಥ ವಿಡಂಬನೆಯ ಕವನದ ಮೂಲಕ ಸಮಾಜ ಸುಧಾರಿಸುವ ಕಾರ್ಯವನ್ನು ಸುತ್ತಮುತ್ತಲಿನ ಆಗು -ಹೋಗುಗಳ ಬಗೆಗೆ ಕಾಳಜಿ ಇರುವ… ಒಬ್ಬ ಹೃದಯವಂತ ಕವಿಗೆ ಮಾತ್ರ ಬರೆಯಲು ಸಾಧ್ಯ… ಸರ್
ಸುಶಿ ( ಸುಧಾ ಶಿವಾನಂದ )
Excellent poem
ವ್ಯಂಗ್ಯ, ವಿಡಂಬನೆಯ ಕವನದ ಸಾಲುಗಳು ಚಿಂತನೆಗೆ ಹಚ್ಚುತ್ತವೆ. ಹೃದಯಸ್ಪರ್ಶಿಯಾಗಿವೆ
Very nice
ವ್ಯಂಗ್ಯ, ವಿಡಂಬನೆಯ ಕವನದ ಸಾಲುಗಳು ಚಿಂತನೆಗೆ ಹಚ್ಚುತ್ತವೆ. ಹೃದಯಸ್ಪರ್ಶಿಯಾಗಿದೆ
ಸರ್ ತಮ್ಮ ಕವನ