ಸವಿತಾ ದೇಶಮುಖ ಅವರ ಕವಿತೆ “ಪಂಜರದ ಗಿಣಿ”

ನಾನೊಂದು
ಪಂಜರದ ಗಿಣಿ
ಯಜಮಾನನ ಆಜ್ಞೆ
ಎತ್ತಿ ಕೊಡುವ
ಅವನ ಸೊನ್ನೆ ಮಾಡಿದ
ಹೊರಗೆ ಹರುವಿದ ಚೀಟಿ
ಆದರದಕೆ ಯಾವ ಭವಿಷ್ಯವಿಲ್ಲ
ಪಂಜರದ ಮಾಲೀಕನು
ನಡೆಸಿಕೊಂಡತೆ
ನಡೆಯುವುದು ಬಂದಂತೆ
ನಡೆದುಕೊಂಡು
ಹೋಗುವುದೇ ಸಹಜವಾದ
ಪ್ರಕ್ರಿಯೆ ಅದರಲ್ಲಿ
ಗಾಢವಾದ ನಂಬಿಕೆ
ಬದುಕುವುದೇ ಜೀವನ
ಸಂಸ್ಕಾರ ಪರಂಪರೆಗಳ
ಬೇಡಿಯಲ್ಲಿ
ಸಿಲುಕಿದ ಪಕ್ಷಿ ಹಾರದಾಗಿದೆ
ನೀರವ ಮೌನ
ಪಂಜರದಲ್ಲಿ ಬದುಕು
ಅದು ಅವನ ಸೊತ್ತು
ಬದುಕುತ್ತಿರುವೆ ನಿಟ್ಟುಸಿರು
ಆಗಾಗ ಹಿಂಡುಗಳ ನೆನಪು
ಹಲವು ಕನಸು ಹೊತ್ತು
ಸುಳ್ಳು ಶಾಸ್ತ್ರ ಅವನ ಕಸಬು
ನಿತ್ಯ ಎಲ್ಲರ ಭವಿಷ್ಯದ
ಚೀಟಿಗಳ ಕಿತ್ತು
ಮಾಲೀಕನ ಕೈಗೆ ಇತ್ತು
ಬದುಕುವೆ ಇರದ ಭರವಸೆ
ಅವನಿತ್ತ ಕಾಳು ಹಣ್ಣು ತಿಂದು


5 thoughts on “ಸವಿತಾ ದೇಶಮುಖ ಅವರ ಕವಿತೆ “ಪಂಜರದ ಗಿಣಿ”

Leave a Reply

Back To Top