ವ್ಯಾಸ ಜೋಶಿ ಅವರ ತನಗಗಳು

ಮರಕ್ಕೆ ಸುತ್ತಿಕೊಂಡು
ಮೈ ಮರೆತ ಲತೆಯು,
ಬಿಸಿಲಿನ ಬೇಗೆಗೆ
ಕಾಯುತಿದೆ ಹನಿಗೆ.
**
ಚಿತ್ರದಿ ಬರೆದಂತೆ
ಅಲುಗಾಡದ ಮರ
ನೋಡಿ ನಗುತಿರುವ
ದಹಿಸುವ ಸಮೀರ.
*
ಬೆವೆತು ಬಾಯಾರಿದ
ಬಸವಳಿದ ಜೀವ
ಕಾಡಿತ್ತು ನೀರಡಿಕೆ
ಕಂಡಿದ್ದು ಮರೀಚಿಕೆ
**
ಸಾಕಪ್ಪ ಸಾಕು ಸೂರ್ಯ
ಅತಿಯಾದ ತಾಪವು
ನೆರಳೇ ಸುಡುವಾಗ
ಬೆವರು ಮೈ ಸುಟ್ಟಾವು.

ಕಾಯಿದು ಕಾಯುತಿದೆ
ಬಿರುಕಿದ ಧರೆಯು
ಬೇಗ ಬರಬಾರದೇ
ತಡೆಯಾದ ಮಳೆಯು.
**
ನೀರಿನ ಬವಣೆಗೆ
ಮಳೆರಾಯನ ಧ್ಯಾನ
ಸೂರ್ಯನ ಶಾಖದಲಿ
ನಿತ್ಯ ಬೆವರ ಸ್ನಾನ.

Leave a Reply

Back To Top