ಮರುಳಸಿದ್ದಪ್ಪ ದೊಡ್ಡಮನಿ ಅವರ ಕವಿತೆ-ಮತ್ತೇಕೆ ಕಾಡುವೆ

ಮತ್ತೇಕೆ ಕಾಡುವೆ ನೆನಪೆ ಹಳೆಯ ಹಳ ಹಳಿಕೆ ತಂದು
ಮನದ ಭಾರವನು ಹೆಚ್ಚಿಸಿ
ಮಧುರ ನೆನಪನು ಮರೆಸಿ॥೧॥

ಬರಡು ಎದೆಯ ತುಂಬಾ ನಿನ್ನ
ಬಿಂಬವ ತಂದು ಕಾಡುವೆ ಏಕೆ
ಗತಿಸಿದ ಮಾತಿನ ಹೂರಣ ಹಂಚಿ ಮರೆಸುವೆ ಏಕೆ ಅರಸಿ॥೨॥
ಕೆಂದುಟಿ ಕಚ್ಚಿ ಹುಚ್ಚು ಹಿಡಿಸಿ
ಭವದ ಹಂಗನೆಲ್ಲ ತೊರೆದು
ಭೂವಿಯ ತುಂಬ ಕನವರಿಕೆ
ಗರಿಯ ಬಿಚ್ಚಿ ಕುಣಿಸಿ॥೩॥

ಮೌನದಿ ಮಾತನು ಮರೆಸಿ
ಹೃದಯದ ಕದವ ತೆರೆಸಿ
ಬಿಡದೆ ಸುಳಿವ ಗಾಳಿ ತೆರದಿ
ಅಂತರಂಗದ ಆಲಿಂಗನಕೆ॥೪॥

ಸೂಸುವ ಹುಸಿ ಮಾತಿಗೆ
ಹಗಲು ಇರುಳಿನ ನಡುವೆ
ಮತ್ತೆ ಮತ್ತೆ ತೂರಿ ಬಂದು
ಕಾಡಿ ಬೇಡುವೆ ನನ್ನರಸಿ॥೫॥


Leave a Reply

Back To Top