ಕಾವ್ಯಸಂಗಾತಿ
ಬಾಗೇಪಲ್ಲಿ
ಅರುಣೋದಯವಿಲ್ಲದ ಸೂರ್ಯೋದಯ
ಎಲೆಲೆಲೈ!
ಸೂರ್ಯ ಮಾವ
ಇದೆಂಥ ಸೋಜಿಗ.!
ಪ್ರತ್ಯಕ್ಷ ದೇವತೆ
ಚೈತನ್ಯದಾಯಿ
ನಮಮಸ್ಕಾರ ಪ್ರಿಯ
ನಿನೆಗೆ ರಾಕ್ಷಸ ಗುಣಮೆಂತ ಬಂತು.!
ಉಷಃ ಕಾಲಕೆ ಎದ್ದು
ನಿನ್ನುದಯ ನೋಡ ಬಂದೆ
ಯುಗಾದಿಯ ಉದಯ ದಕ್ಕಲೆಂದು
ಅದು ಕ್ರೋಧಿ ಆದರೇನು ಗೋದ್ರವಾದರೇನು
ನೀನೇಕೆ ಅದನು ಸ್ವಾದಿಸಬೇಕು?
ಅರುಣ ಬಾರದೆಯೇ ನೀ ಬರುವುದೇ!
ಅಗ್ನಿ ಕುಂಡದಿಂದೆದ್ದ ಬೆಳ್ಳಿ ರೂಪಾಯಿಯಂತಿದ್ದೆ!
ತಕ್ಷಣಕೆ ಬಯವಾಯ್ತು ನಂತರ ಬೇಸರವಾಯ್ತು
ಬೇಡ ತಂದೆ,
ತಾಯಿ ವಿಷ ಉಣಿಸೆ ಮಗುವಿಗ್ಯಾರು ಗತಿ?
ಶಾಂತನಾಗುದೇವ!
ನಮಸ್ಕಾರ ಪ್ರಿಯನೀನು
ಅದನೆನ್ನೆರಡು ಹೆಚ್ಚು ಬಯಸು ನಮ್ಮಿಂದ ಅಡ್ಡಿಯಿಲ್ಲ
ವಿಷ ಉಣಿಸಿದರೂ ತಾಯ್ತನ ನನದಾಯಿತೆಂದು ಹಿಗ್ಗಿದ ಪೂತನಿಯಂತ ರಾಕ್ಷಸಿಯಾಗು
ಅಡ್ಡಿಯಿಲ್ಲ.
ಬಾಗೇಪಲ್ಲಿ