ಅಮರೇಶ.ಗೊರಚಿಕನವರ ಕವಿತೆ-ಭಾರತದ ಭಾಗ್ಯವಿದಾತ ಬಾಬಾಸಾಹೇಬ

ಉದಯಿಸಿದನೋರ್ವ ಅಂಬೇಡ್ಕರ್ ಎಂಬ ಸಂತ
ದಮನಿತ, ಶೋಷಿತರ ಸಮಾನತೆಗೆ ಎದ್ದುನಿಂತ
ಗ್ರಂಥ ಗ್ರಂಥಗಳಲ್ಲೇ ಶ್ರೇಷ್ಠವಾದ ಗ್ರಂಥ
ರಚಿಸಿ ಅರ್ಪಿಸಿದರು ಸಂವಿಧಾನವೆಂಬ ಮಹಾಗ್ರಂಥ

ನವ ಭವ್ಯ ಭಾರತದ ಭವಿಷ್ಯದ ಏಳಿಗೆಗೆ
1950 ಭಾರತೀಯರ ಹೊಸ ಪರ್ವಕೆ ಸುಘಳಿಗೆ
ವಿಶ್ವದ ಬೃಹತ್ ಲಿಖಿತ ಸಂವಿಧಾನವೆಂಬ ಹೆಗ್ಗಳಿಕೆಗೆ
ಸಾಕ್ಷಿಯಾಗಿ,ಧ್ವನಿಯಾಯಿತು ಭಾರತೀಯ ಪ್ರಜೆಗಳಿಗೆ

ಉತ್ಕೃಷ್ಟ ಆಡಳಿತದ ಹೊಣೆಯನ್ನು ಹೊತ್ತಿವೆ
ಕಾರ್ಯಾಂಗ, ಶಾಸಕಾಂಗ,ನ್ಯಾಯಂಗವೆಂಬ ಸ್ಥಂಭಗಳು
ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಬದುಕಲು ರಚಿತವಾಗಿವೆ
395 ವಿಧಿಗಳು,465 ಅನುಚ್ಛೇದಗಳು, ಸಂವಿಧಾನದ ಒಟ್ಟು 24 ಭಾಗಗಳು

ಸಾರ್ವಭೌಮ, ಸಮಾಜವಾದಿ ಸರ್ವಧರ್ಮ ಪ್ರತಿಬಿಂಬಿಸಿ
ಸಮಭಾವದ ಪ್ರಜಾಸತ್ತಾತ್ಮಕತೆ ಬೆಳೆಸಲು
ರಾಷ್ಟ್ರದ ಅಖಂಡತೆ, ಏಕತೆಯನ್ನು ರೂಪಿಸಿ
ಗಣರಾಜ್ಯ ರಚಿಸಲು ಸಂವಿಧಾನದ ಪೀಠಿಕೆಯೇ ಅಡಿಗಲ್ಲು

ಸಮಾನತೆಯ ಹರಿಕಾರ ಪ್ರತಿಪಾದಿಸಿದಂತೆ
ಭ್ರಾತೃತ್ವದ ಧ್ಯೇಯದೊಂದಿಗೆ ಬದುಕೋಣ
ಸಂವಿಧಾನ ಶಿಲ್ಪಿಯ ಆಶಯದಂತೆ
ಅವರ ಮಾರ್ಗದಲ್ಲಿಯೇ ನಡೆಯೋಣ

ಹಲವು ಮಹನೀಯರ ಅವಿರತ ಶ್ರಮದ ಫಲವಾಗಿ
ಲಭಿಸಿದೆ ನಮಗೆ ಗ್ರಂಥದ ಫಲವಾಗಿ
ಸಂವಿಧಾನದ ಪೀಠಿಕೆಯನ್ನು ಓದುವದರ ಮುಖಾಂತರವಾಗಿ
ಗೌರವ ನಮನ ಸಮರ್ಪಿಸೋಣ “ನಮ್ಮ ಸಂವಿಧಾನ”ಕ್ಕಾಗಿ


Leave a Reply

Back To Top