ಮಳೆಯೂ……. ಮನುಷ್ಯನೂ……!!?.ಮಲಯಾಳಂ ಕವಿತೆಯ ಅನುವಾದ ಐಗೂರು ಮೋಹನ್ ದಾಸ್ ಜಿ.

ನಾವು ಆಸೆ ಕಣ್ಣುಗಳಿಂದ
ಎಷ್ಟೇ ಸಮಯ ಕಾದು
ಕುಳಿತರೂ ‘ಮಳೆ’ಯೂ ಕಾಣುವುದಿಲ್ಲ……
ಆಗ ನಾವು
ಯೋಚಿಸುತ್ತೇವೆ….
ಅದಕ್ಕೆ’ ಇಷ್ಟ’ವಾಗುವಾಗ
ಬರಲಿ ಎಂದು….!!

ಆಗ ಯೋಚಿಸದ
ಸಮಯದಲ್ಲಿ ಓಡಿ ಬಂದು
ಸುರಿದು ಮನಸ್ಸುನ್ನು
ತುಂಬಿಸುತ್ತದೆ……
ಈ ವೇಳೆ
ನಾವು ಕೆಟ್ಟದಾಗಿ
ಯೋಚಿಸಿದ್ದರೂ….
ಮಳೆಯ ಮೇಲೆ ಇರುವ
ಪ್ರೀತಿ ಹೋಗುವುದಿಲ್ಲ….!!

ಮಳೆಗಾಲದ ಪ್ರಳಯದಲ್ಲಿ
ನೋವು-ಸಂಕಟಗಳು
ಸೃಷ್ಟಿಸಿದ್ದರೂ…..
ಬೇಸಿಗೆ ಕಾಲದಲ್ಲಿ
ಒಮ್ಮೆ ಸುರಿಯಲ್ಲಿ ಸಾಕು
ಎಂದು ಪ್ರಾಥಿ೯ಸುತ್ತಾ
ಕುಳಿತುಕೊಳ್ಳುತ್ತೇವೆ….!!

ಕೆಲ ಮಂದಿಯನ್ನು
ಮನದಿಂದ ‘ಮರೆತು’ಕೊಳ್ಳುವ
ಎಷ್ಟೇ ಪ್ರಯತ್ನ ಪಟ್ಟರೂ…..
ಮನಸ್ಸಿನಿಂದ ಅವರನ್ನು
ದೂರ ಮಾಡಲು
ಸಾಧ್ಯವಾಗುವುದಿಲ್ಲ….!!

ಇಷ್ಟ… ಸ್ನೇಹ….ಪ್ರೀತಿ… ಪ್ರೇಮ….
ಎಲ್ಲಾವು ‘ ಮನಸ್ಸು’ಗೆ
ಮಾತ್ರ ಸ್ವತಃ ವಾಗಿರುತ್ತದೆ…
ಮನುಷ್ಯ…. ಮಳೆ…..
ಎಲ್ಲಾವು ಕೇವಲ

ಲೆಕ್ಕಚಾರ ಮಾತ್ರ….!!!


Leave a Reply

Back To Top