ಕಾವ್ಯ ಸಂಗಾತಿ
ವಿಶಾಲಾ ಆರಾಧ್ಯ
‘ಕ್ಷಮಿಸಿ ಮಳೆ ಸುರಿಸು’
ಎಂತ ಮುನಿಸು ಮಳೆಯೇ
ಮರೆತೆಯೇ ಹಾದಿ ಇಳೆಗೇ
ಉದುರು ಹನಿಯಾಗಿ ಕರುಣಿಸಿ
ಕಾದಿರುವ ಭೂಮಿಯ ತಣಿಸಿ
ಸುಡುವ ಸೂರ್ಯನ ಬಿಸಿಗೆ
ತಾಳದೆ ಕಾದಿಹೆವು ಹನಿಗೆ
ಈ ಕೋಪವೇತಕೋ ನಿನಗೆ
ತಂಪಾಗಿ ಒಮ್ಮೆ ನೀ ಸುರಿಯೇ
ಮುನಿಸೇನು ನೀತಿ ಮರೆತವರಲಿ
ರೋಷವೇನು ನ್ಯಾಯ ತಪ್ಪಿದವರಲಿ
ತೂಗದಿರೆಲ್ಲಾ ಒಂದೇ ತಕ್ಕಡಿಯಲಿ
ಸಲಹೆಮ್ಮ ನಿನ್ನ ಕರುಣದಲಿ
ಗುಡುಗಿ ಗುಡುಗಿ ಒಮ್ಮೆ ಬಾಬಾ
ಕಾದ ಧರೆಗೆ ತಂಪನು ತಾ ತಾ
ಹಸಿರಾಗಲೆಲ್ಲಾ ಭುವಿಯು
ನಸುನಗೆಯು ಮೂಡಿ ಇಳೆಯು
——————–
ವಿಶಾಲಾ ಆರಾಧ್ಯ
ಚೆನ್ನಾಗಿದೆ
ಚೆನ್ನಾಗಿದೆ, ಕವಿ/ಕವಯಿತ್ರಿ ಆ ಕ್ಷಣದಲ್ಲಿ ಜೀವಿಸುವುದು ಇದರಲ್ಲಿದೆ