ಡಾ, ಅನ್ನಪೂರ್ಣ ಹಿರೇಮಠ ಅವರ ಕವಿತೆ-ಬಿಡು ಆತಂಕ

ಕವಿದ ಮೋಡ ಕರಗಲೆಬೇಕ
ಬಿತ್ತಿದ ಬೆಳೆಯ ಕೊಯ್ಯಲೆಬೇಕ
ಉರಿದ ಕಟ್ಟಿಗೆ ಬೂದಿ ಆಗಲೇಬೇಕ
ಹುಟ್ಟಿದ ಮನುಷ್ಯ ಸಾಯಲೇಬೇಕ
ಆತಂಕಪಟ್ಟರ ಏನಿಲ್ಲ ಬಂದಂಗ ಬಾಳಿ
ಬದುಕಿ ತೋರಿಸಬೇಕಲ್ಲ//

ಹಗಲು ಕಳೆದು ರಾತ್ರಿ ಆಗಲೇಬೇಕ
ಒದ್ದ ಚಂಡು ಪುಟಿದೇಳಲೆಬೇಕ
ಕಷ್ಟಪಟ್ಟವಗ ಸುಖವು ಸಿಗಲೇಬೇಕ
ಆತಂಕಗೊಳ್ಳದೆ ಇಷ್ಟಪಟ್ಟು ಬದುಕಿ
ಬಾಳಲೇಬೇಕ ಎಲ್ಲ ಎದುರಿಸುವ
ದಿಟ್ಟತನ ಇರಲೇಬೇಕ//

ನೋವು-ನಲಿವು ಅನುಭವಿಸಬೇಕ
ಪ್ರೀತಿ ಪ್ರೇಮ ಮನದಲಿ ಹಸನಾಗಿರಬೇಕ
ಒಲವು ಗೆಲುವಲಿ ಮನವಿರಬೇಕ
ಸತತ ಪ್ರಯತ್ನದ ನಡೆಯಿರಬೇಕ
ದರ್ಪ ದೌರ್ಜನ್ಯಗಳ ಕಂಡಿಸಬೇಕ
ಆತಂಕ ದೂರ ತಳ್ಳಲೆಬೇಕ//

ತನು-ಮನದಿ ಶುದ್ಧವಾಗಿರಬೇಕ
ಮೋಸ ವಂಚನೆ ಸುಳ್ಳು ಕಪಟ ಬಿಡಬೇಕ
ನಡೆ-ನುಡಿಯಲ್ಲೊಂದಾದ ಬದುಕು ಬಾಳಬೇಕ
ಅಂಜಿಕೆ ಗಿಂಜಿಕೆ ಬೇಸರ ದೂರವಿಡಬೇಕ
ಆತಂಕ ಪಡೆದೆ ಬಂದಂಗ ಬದುಕಬೇಕ
ನಗುನಗುತ ಜೈಸಿ ಸಂತೃಪ್ತಿ ಹೊಂದಬೇಕ/

One thought on “ಡಾ, ಅನ್ನಪೂರ್ಣ ಹಿರೇಮಠ ಅವರ ಕವಿತೆ-ಬಿಡು ಆತಂಕ

Leave a Reply

Back To Top