ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಾಬರಿ ಖುಷಿಗಳು
ಸಹಜ ಬಾಳಿಗೆಲ್ಲ
ತಿಳಿಸಲು ಬಂದಿದೆ
ಯುಗಾದಿ, ಬೇವು ಬೆಲ್ಲ.

ಸಿಹಿಯ ಸಂಭ್ರಮಿಸು
ಕಹಿಯ ಸ್ವೀಕರಿಸು
ನಿರ್ಲಿಪ್ತತೆಯೇ ನೀತಿ
ಬೇವು- ಬೆಲ್ಲದ ರೀತಿ.

ಅನುಭವದ ಮಾತು
ಸುಖ ದುಃಖ ಸಮವು
ಯುಗಾದಿ ಹೇಳುತಿದೆ
ಬೆಲ್ಲದೊಡನೆ ಬೇವು.

ಬೇವಿನಲಿ ಬೆಲ್ಲವು
ಬರಲೇಳು ಬಾಳಿಗೆ,
ಸಹಜ ಆನಂದವ
ಬೇಡುವೆ ದೇವರಿಗೆ.
————————————

About The Author

Leave a Reply

You cannot copy content of this page

Scroll to Top