ಯುಗಾದಿ ವಿಶೇಷ

ಯುಗ ಉರುಳಿ ಮರಳಿ ಬರುತಿದೆ ಯುಗ ಯುಗಾದಿ
ನವ ನಾವಿನ್ಯತೆಗೆ ಹಾಡಿದೆ
ನಾಂದಿ ಮತ್ತೆ ಬಂದಿದೆ ಯುಗಾದಿ॥೧॥

ಬೇವು ಬೆಲ್ಲದ ಸಿಹಿ ಕಹಿಯ
ಉಣಿಸಿ ಸಂತಸ ಸಂಭ್ರಮ
ಬೆರೆಸಿ ಕತ್ತಲೆಯ ಕಳೆಯುತ
ಬಂಧಗಳ ಬೆಳೆಸಿ ಕಾರುಣ್ಯದ
ಯುಗಾದಿ॥೨॥

ಸಿಂಗಾರ ಮಾಡಿ ಬಂಡಿ ಎತ್ತು ಹೂಡಿ ನೆಲವ ಉಳೂಲು ಎತ್ತುಗಳ ಜೋಡಿ
ವಸುಧೆ ಒಡಲನು ಹಸನು
ಮಾಡಿ ಕಳೆ ತಂತು ಯುಗಾದಿ॥೩॥

ನವ ಮಾಸದ ನಾವಿನ್ಯತೆ
ನೋಡಿ ಧರಣಿ ತುಂಬಾ
ಹನಿಗರೆವ ಆಸೆ ಮೂಡಿ
ಧಣಿದ ಧರಣಿ ಉಡಿ ತುಂಬಲು ಬಂದಿದೆ ಯುಗಾದಿ॥೪॥

ಹೊಸ ಚಿಗುರಿನ ವಸಂತನೂ
ನಗುವಿನ ಲಾಸ್ಯದಿ ಮೊಗದಿ
ಸವಿಸ್ಮೃತಿ ತಂದು ಹಳೆಯ
ಕೊಳೆಯ ಕಳೆಯುತ ಮತ್ತೆ
ಬಂದಿದೆ ಯುಗಾದಿ॥೫॥

Leave a Reply

Back To Top