ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಲದ ತಿಜೋರಿಯಲ್ಲಿ ಹೃದಯವಿಟ್ಟು
ಕೀಲಿ ಹಾಕಿ ಬಿಟ್ಟನಾ ಒಲವಿನ ಮಾತಿಟ್ಟು
ಸನಿಹ ಬಂದು ಉಸಿರಲ್ಲಿ ಬೆರೆಯುತ್ತಾ ಮುತ್ತಿಟ್ಟು
ನಾ ಉಣಿಸುವೇ ನನ್ನ ಜೀವಿತದವರೆಗೆ ಪ್ರೀತಿಯಿಟ್ಟು

ಮನದ ಬಾನಂಗಳದಲ್ಲಿ ರಂಗಿನ ಕಾಮನಬಿಲ್ಲಿಟ್ಟು
ರಂಗೇರಿಸಿ ಹೃದಯವಾ ಮನವಾ ನನ್ನಲ್ಲಿ ಅಡವಿಟ್ಟು
ಕೈ ಹಿಡಿದು ನಡೆಸುವೆ ಎನ್ನುದೆ ಮೆರೆಸಿದ ಹೃದಯದ ಪಲಕ್ಕಿಯಟ್ಟು
ಬಿಳುವುದೆಲ್ಲಿ ನಡೆಯುದೆ ಮರೆತು ಬಿಟ್ಟು

ನಾ ಸಹಚರಿಯಾಗಿ ಸಂಚಿಸಿದೆ ಒಲವಿನ ಮಡಿ ಉಟ್ಟು
ಅಂತರವಾ ಅಳಿಸಿದ ಅರವಿಂದ ನಗುವಿನಲ್ಲಿ ಮನವಿಟ್ಟು
ಮೌನ ಮುರಿಯುತ್ತಾ ಒಲವಿನ ಕವನ ಬರೆದಿಟ್ಟು
ಇಂದಿಗೂ ಕಾಯುತ್ತಿರುವೇ ನಾನು ನನ್ನನ್ನೇ ಮೀಸಲಿಟ್ಟು

ನಿರೀಕ್ಷೆಯ ಕಕ್ಷೆಯಲ್ಲಿ ಮೀರಿ ನಿಂತು ಪ್ರೇಮವಿಟ್ಟು
ಕಾಣದೆ ದೃಷ್ಟಿಯು ಮರೆತಿದೆ ಸೃಷ್ಟಿಯ ಗುಟ್ಟು
ಉಸಿರು ಉಸಿರಾಗಿ ಕಣ ಕಣದಲ್ಲಿ ನಿಮ್ಮನಿಟ್ಟು
ಬೆರೆತೆ ಭಾವ ತೊರೆದು ಆರಾಧನೆಯ ಮಾರ್ಗದಲ್ಲಿ ಮನವಿಟ್ಟು

ಬಂದುಬಿಡು ನಲ್ಲವೇ ಕಾಯುವಿಕೆಯ ಸುಟ್ಟು
ನನ್ನ ಅಪ್ಪಲೂ ನೀವೂ ಒಲವಿನಂಗಿಯ ಉಟ್ಟು
ಕಾಣದೆನು ಈ ಜೀವಕ್ಕೆ ನಿಮ್ಮನ್ನು ಬಿಟ್ಟು
ಉಟ್ಟು ಬಿಟ್ಟು ಗುಟ್ಟು ಇಟ್ಟು ಎಲ್ಲವೂ ನಿನ್ನಲ್ಲಿ ಒಟ್ಟು


About The Author

4 thoughts on “ಸುವರ್ಣ ಕುಂಬಾರ ಕವಿತೆ-ಕಾಲ ತಿಜೋರಿ”

  1. ಅದ್ಬುತ ಸೃಷ್ಟಿ ಮೇಡಮ್
    ಎರಡೆರಡು ಬಾರಿ ಓದಿದೆ… ಪ್ರೀತಿಯ ಆರಾಧನೆ

Leave a Reply

You cannot copy content of this page

Scroll to Top