ಶಿವಮ್ಮ ಎಸ್ ಜಿ ಕೊಪ್ಪಳ ಅವರ ಕವಿತೆ-ಸ್ವಭಾವ

ಗುಣ ಸ್ವಭಾವ ಹೇಗಾದರೂ ಇರಲಿ,
ಕನಿಕರವೆಂಬ ಒರತೆ  ಬತ್ತದಿರಲಿ.

ಆಸ್ತಿ ಐಶ್ವರ್ಯ ಹೇಗಾದರೂ ಇರಲಿ, ನಡೆದು ಬಂದ ದಾರಿ ನಿನಗೆ ನೆನಪಿರಲಿ.

ವಿದ್ಯೆ -ಬುದ್ಧಿ ಹೇಗಾದರೂ ಇರಲಿ,
ಕಲಿಸಿ ಹೋದ ಗುರು ಚಿತ್ತದಲ್ಲಿರಲಿ.

ಇಂದು ನಾಳೆ ಏನೇ ಆಗಲಿ,
ಎದುರಿಸುವ ದೃಢಸಂಕಲ್ಪವಿರಲಿ.

ಕಷ್ಟ ಸುಖ ಏನೇ ಇರಲಿ,
ಅನುಭವಿಸುವ ತಾಳ್ಮೆ ಇರಲಿ.

ದೇಶ ಭಾಷೆ ಯಾವುದೇ ಆಗಿರಲಿ,
ಮಾತೃಭೂಮಿಯ ಅಭಿಮಾನ ಇರಲಿ.

ಒಳಿತು ಕೆಡುಕು ಏನೇ ಆಗಲಿ,
ಬಂದಂತೆ ಸ್ವೀಕರಿಸುವ ಗುಣವಿರಲಿ.

ಹಗಲು ಇರುಳು ನಿತ್ಯಸಾಗಲಿ,
ನಿತ್ಯ ಕಾಯಕ ನಿನ್ನದಾಗಿರಲಿ.

ಮಳೆ ಗಾಳಿ ಸದಾ ಬರಲಿ,
ರೈತನ ಬಾಳು ಹಸನಾಗಿರಲಿ.

ಕಪ್ಪು- ಬಿಳುಪಾಗಲಿ, ಬಿಳುಪು- ಕಪ್ಪಾಗಲಿ
ಒಳ್ಳೆಯದನ್ನೇ ಆರಿಸುವ ಸ್ವಭಾವ ಎಂದೂ ಬದಲಾಗದಿರಲಿ.

————————–

One thought on “ಶಿವಮ್ಮ ಎಸ್ ಜಿ ಕೊಪ್ಪಳ ಅವರ ಕವಿತೆ-ಸ್ವಭಾವ

Leave a Reply

Back To Top