“ಮನುಷ್ಯನ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ವಿಶ್ರಾಂತಿ ಬೇಕು.”ಮಾಧುರಿ ದೇಶಪಾಂಡೆ, ಅವರ ಲೇಖನ

ಮನುಷ್ಯನ ದೇಹ ಒಂದು ಯಂತ್ರವಿದ್ದಂತೆ ಮನಸ್ಸು ಅದನ್ನು ಚಲಿಸಲು ಸಹಾಯವಾಗುವ ಪ್ರೋಗ್ರಾಮ್‌ ಇದ್ದಂತೆ ಯಂತ್ರಗಳಿಗೆ ವಿಶ್ರಾಂತಿ ಬೇಕಾಗುವ ಹಾಗೆ  ದೇಹ ಮತ್ತು ಮನಸ್ಸಿಗೂ ವಿಶ್ರಾಂತಿಯ ಅವಶ್ಯಕತೆ ಇದ್ದೇ ಇರುತ್ತದೆ.  ಮನುಷ್ಯರು ದೕೕಹಕ್ಕೆ ಅನಿವಾರ್ಯ ವಿಶ್ರಾಂತಿಯನ್ನು ಕೊಟ್ಟೆ ಕೊಡುತ್ತಾರೆ.  ಕನಿಷ್ಟ ಪಕ್ಷ ದಿನದಲ್ಲಿ 4-6 ತಾಸುಗಳ ವಿಶ್ರಾಂತಿಯನ್ನು ಅನಿವಾರ್ಯವಾಗಿ ಪಡೆದೆ ಪಡೆಯುತ್ತಾರೆ. ಆದರೆ ಮನನಸ್ಸಿಗೆ ವಿಶ್ರಾಂತಿ ಅಷ್ಟಾಗಿ ಸಿಗುವುದಿಲ್ಲ.

ದೇಹ ಕೆಲವು ತಾಸುಗಳ ನಿದ್ರೆಗೆ ಆಯಾಸ ಕಳೆದುಕೊಂಡು ಮುಂದಿನ ಕೆಲಸಕ್ಕೆ ತಯಾರಾಗುತ್ತದೆ ಆದರೆ ಮನಸ್ಸು ಹಾಗಲ್ಲ. ಹೀಗಾಗಿ ದೇಹಕ್ಕಿಂತ ಸ್ವಲ್ಪ ಹೆಚ್ಚಿನ ಆರೈಕೆ ಮನಸ್ಸಿಗೆ ಮಾಡಬೇಕಾಗುತ್ತದೆ.  ಮನಸ್ಸು ದೇಹಕ್ಕಿಂತ ಹೆಚ್ಚು ಶ್ರಮ ವಹಿಸುತ್ತದೆ. ಅದಕ್ಕೆ ಒತ್ತಡವೂ ಹೆಚ್ಚು. ದೇಹಕ್ಕಿಂತ ಮನಸ್ಸು ಸೂಕ್ಷ್ಮವಾಗಿರುವುದರಿಂದ ಮಾನಸಿಕವಾಗಿ ಸದೃಢವಾಗಿ ಮತ್ತು ಆನಂದದಿಂದ ಇರುವುದು ಬಹಳ ಮಹತ್ವದ ವಿಷಯವಾಗಿರುತತದೆ.

ಮನುಷ್ಯನ ಮೆದುಳು ಮತ್ತು ಮನಸ್ಸು ದೇಹವು ವಿಶ್ರಾಂತಿ ಪಡೆಯುವಾಗ ಕೂಡ ಕೆಲಸ ಮಾಡುತ್ತಿರುತ್ತದೆ.  ಹೀಗಾಗಿ ಮನಸ್ಸಿಗೆ ವಿಶ್ರಾಂತಿ ಎಂದು ಸಿಗುವ ಅವಕಾಶ ಬಹಳ ಕಡಿಮೆಯೇ ಅನ್ನಬಹುದು.  ಧ್ಯಾನ ಅಥವಾ ಯೋಗ ಅಥವಾ ಧಾರ್ಮಿಕ ಚಟುವಟಿಕೆಗಳು ಮನಸ್ಸಿಗೆ ಒಂದು ತರಹದಲ್ಲಿ ಏಕಾಗ್ರತೆ ಹಾಗೂ ಪ್ರಶಾಂತತೆ ನೀಡುವುದರಿಂದ ಮನಸ್ಸಿಗೆ ವಿಶ್ರಾಂತಿ ದೊರೆತಂತೆ ಆಗುತ್ತದೆ.  ದೇಹಕ್ಕೆ ನಿದ್ರೆಯ ಕಾಲದಲ್ಲಿ ಚಟುವಟಿಕೆ ಇರುವುದಿಲ್ಲ ಆದರೆ ಮನಸ್ಸು ಮತ್ತು ಮೆದುಳಿಗೆ ಆ ಕಾಲದಲ್ಲೂ ಚಟುವಟಿಕೆ ಇರುವುದರಿಂದ ಮನಸಿನ ಮತ್ತು ಮೆದುಳಿನ ವಿಶ್ರಾಂತಿ ಹಾಗೂ ಆರೋಗ್ಯ ಬಹಳ ಮುಖ್ಯವಾದುದು.

ಮನಸ್ಸಿನ ಸುಪ್ತ ಭಾವನೆಗಳು ಮತ್ತು ವಿಚಾರಗಳು ಮೆದುಳಿಗೆ ಕೆಲಸ ಕೊಡುತ್ತಲೇ ಇರುವುದರಿಂದ ಮನಸಿಕವಾಗಿ ಸದೃಢವಾಗಿರುವುದು ಜೀವನಕ್ಕೆ ಬಹಳ ಮುಖ್ಯವಾಗುತ್ತದೆ.  ಸಣ್ಣ ವಯಸ್ಸಿನ ಭಯ, ಹೆದರಿಕೆ ಅಥವಾ ಡೋಲಾಯಮಾನ ವಿಚಾರಗಳು ಇದ್ದರೆ ಸ್ಥಿರವಾದ ವಿಚಾರಗಳು ನಿರ್ಧಾರಗಳು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮನಸ್ಸು ಕೆಲವು ಸಮಯ ಸುಮ್ಮನೆ ಇರಲು ಬಯಸಲು ಪ್ರಾರಂಭಿಸುತ್ತದೆ.  ಮನಸ್ಸು ಈ ರೀತಿಯಲ್ಲಿ ಮುಷ್ಕರವನ್ನು ಮಾಡಲು ಆರಂಭಿಸಿದಾಗ ನಮಗೆ ಒತ್ತಡ ಅಥವಾ ಅಸಮಾಧಾನ ಹೆಚ್ಚಿದೆ ಎಂಬುದನ್ನು ನಾವು ಅರಿಯಬೇಕು.

ನಮ್ಮ ಮನಸ್ಸಿಗೆ ಹಿತವೆನಿಸುವ ಕಾರ್ಯಗಳನ್ನು ಕೆಲಸಗಳನ್ನು ಮಾಡುತ್ತ ಇರುವಾಗ ಮನಸ್ಸು ಸುಮ್ಮನೇ ಕುಳಿತು ಕೊಳ್ಳುವುದಿಲ್ಲ ಸಕಾರಾತ್ಮಕ ಚಿಂತನೆ ಉತ್ತಮ ಹಾಗೂ ಒಳ್ಳೆಯ ವಿಚಾರಗಳನ್ನೇ ಮಾಡುತ್ತ ಇರುತ್ತದೆ.  ಆದರೆ ಅಸಮಾಧಾನ  ಬೇಸರ ಖಿನ್ನತೆ ಇದ್ದಾಗ ಕೆಟ್ಟ ವಿಚಾರ ಅಥವಾ ಏನೂ ಮಾಡದೇ ಸುಮ್ಮನೆ ಕುಳಿತು ಕೊಳ್ಳುವ ಜಡತ್ವ ಬಂದು ಬಿಡುತ್ತದೆ.

 ಈ ರೀತಿಯ ಪರಿಸ್ಥಿತಿ ಇಂತದ್ದೇ ವಯಸ್ಸಿನವರಿಗೆ ಸೀಮಿತ ಇರುವುದಿಲ್ಲ ಯಾವುದೇ ವಯಸ್ಸಿವರಿಗೆ ಬರಬಹುದು. ಮನಸ್ಸು ಮುಷ್ಕರ ಮಾಡಿದಾಗ ಮೊದಲು ನಾವು ನಮ್ಮ ಅನವಶ್ಯಕ ವಿಚಾರಗಳು ಹಾಗೂ ನಕಾರಾತ್ಮಕತೆಯಿಂದ ಹೊರಗೆ ಬರಬೇಕು. ಒಂಟಿಯಾಗಿ ಕೂಡುವುದು , ಬೇಡದ ವಿಚಾರಗಳನ್ನು ಪದೇ ಪದೇ ಮಾಡುವುದು. ಎಲ್ಲರೂ ತಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ ಅಥವಾ ನೋವು ಕೊಡುತ್ತಾರೆ  ಎಂಬ ಭಾವನೆಯಿಂದ ಹೊರಬರಬೇಕು.  ಆರೋಗ್ಯಕರವಾದ ಆಹಾರ ತಿನ್ನುವುದು. ಸಮಯವನ್ನು ಸರಿಯಾಗಿ ವಿನಿಯೋಗಿಸುವುದು.  ದೇಹಕ್ಕೆ ಬರುವಂತೆ ಮನಸ್ಸಿಗೆ ಬಂದ ಜಡತ್ವದಿಂದ ಹೊರ ಬರುವ ಪ್ರಯತ್ನ ಸ್ವತಃ ನಮ್ಮದೇ ಆಗಿರಬೇಕು.  ನಮ್ಮ ಸಹಾಯಕ್ಕೆ ನಮ್ಮವರ ಸಮಾಜದ ಸಹೃದಯಿಗಳ ಸಹಾಯ ಪಡೆದರೆ ತಪ್ಪಿಲ್ಲ. ಯಾರಾದರೂ ಮನಸ್ಸಿನಿಂದ ಚಟುವಟಿಕೆಗಳಿಂದ ಜಡರಾಗಿ ಇರುವುದು ಕಂಡರೆ ಅವರ ಸುತ್ತಮುತ್ತಲಿನವರ ಕರ್ತವ್ಯ ಅವರ ಮನಸ್ಸಿನ ನೋವು, ಕಳವಳ, ಆತಂಕ ಅಥವಾ ಚಿಂತೆಯನ್ನು ದೂರ ಮಾಡಿ ಅವರು ನಿರಾಳವಾಗುವಂತೆ ಮಾಡುವುದು ಇದಕ್ಕೆ ಅವರ ರಕ್ತ ಸಂಬಂಧಿ ಆಗಿರಬೇಕು ಸ್ನೇಹಿತರೇ ಆಗಿರಬೇಕು ಎಂಬ ನಿಯಮವಿಲ್ಲ ಸಾಮಾನ್ಯವಾದ ಮಾನವೀಯತೆಯ ಸಂಬಮಧಗಳಲ್ಲಿ ಕೂಡ ಇಂತಹ ಸಮಸ್ಯೆ ಇರುವವರ ಕಷ್ಟಕ್ಕೆ ಸ್ಪಂದಿಸಬಹುದು.  ಮುಖ್ಯವಾಗಿ ಮಾನವೀಯತೆ ಇರುವ ಜನರಿಗೆ ಸ್ಪಂದಿಸುವ ಗುಣವಿರಬೇಕು ಅಷ್ಟೆ.

ನಮ್ಮ ಮನಸ್ಸಿನ ಅಥವಾ ಆತ್ಮೀಯರ ಮನಸ್ಸಿನ ಪರಿಸ್ಥಿತಿ ತಿಳಿಯುತ್ತದೆ. ಆದರೆ ನಮ್ಮ ಆಸುಪಾಸಿನಲ್ಲಿರುವವರ ಬಗೆಗೆಗೂ ಕೂಡ ಒಮ್ಮೊಮ್ಮೆ ಗಮನಿಸುವ ಸ್ವಭಾವ ಬೆಳಸಿಕೊಳ್ಳಬೇಕು.  ಇಂದಿನ ಸಾಮಾಜಿಕ ವಾತಾವರಣದಲ್ಲಿ ಅಕ್ಕ ಪಕ್ಕದ ಮನೆಯವರನ್ನು ಮಾತನಾಡಿಸುವುದೇ ಕಷ್ಟದ ವಿಯವಾಗಿರುವಾಗ ಇಂತಹ ಕೆಲಸ ಎಲ್ಲಿ ಮಾಡುವುದು ಎನ್ನುವುದು ಹಲವರ ಅಭಿಪ್ರಾಯವಾಗಿರಬಹುದು.  ನಮ್ಮ ಸ್ವಭಾವಕ್ಕೆ ತಕ್ಕಂತೆ ನಮ್ಮ ಸುತ್ತಮುತ್ತ ಜನರ ಜೊತೆಗೆ ಸಂಪರ್ಕ ಬಂದಿರುತ್ತದೆ.  ನಮ್ಮ ವಲಯದಲ್ಲಿ ಎಲ್ಲರೂ ಆನಂದದಿಂದ ಇರುವಂತೆ ನೋಡಿಕೊಳ್ಳುವುದು ಪ್ರತಿಯೊಂದು ಮನುಷ್ಯರ ಕರ್ತವ್ಯವಾಗಿದೆ.

ನಮ್ಮ ಕುಟುಂಬ ಹಾಗೂ ಸ್ನೇಹಿತರ ಕರ್ತವ್ಯದ ಜೊತೆಗೆ ಸಾಮಾಜಿಕವಾಗಿಯೂ ಸ್ವಲ್ಪ ನಮಗೆ ಸಾಧ್ಯವಾಗುವ ಹಾಗೆ ಸಹಾಯ ಮಾಡಬೇಕು.  ಆರ್ಥಿಕ ಸಹಾಯವನ್ನು ಹಣ ಇರುವವರು ಮಾಡುತ್ತಾರೆ ಆದರೆ ಸಾಮಾಜಿಕವಾಗಿ ಕೂಡ ಜನರಿಗೆ ಸಹಾಯದ ಅವಶ್ಯಕತೆ ಇರುತ್ತದೆ.  ಹಿಂದಿನ ಕಾಲದ ಜನರಂತೆ ಪರೋಪಕಾರಾರ್ಥಮ್‌ ಇದಂ ಶರೀರಂ ಎಂದು ಸದಾ ಪರೋಪಕಾರ ಮಾಡದೇ ಹೋದರೂ ನಮ್ಮ ಸುತ್ತಮುತ್ತಲಿನ ಕೆಲವರಿಗಾದರೂ ಸಹಾಯ ಮಾಡಬೇಕು. ಮನಸ್ಸು ಮುಷ್ಕರ ಮಾಡುವುದಕ್ಕೂ ಪರೋಪಕಾರಕ್ಕೂ ಏನು ಸಂಬಂಧ ಮಾನವೀಯತೆ ಇಲ್ಲಿ ಹೇಗೆ ಉಪಯೋಗಕ್ಕೆ ಬರುತ್ತದೆ ಎಂಬ ಪ್ರಶ್ನೆ ಬರುತ್ತದೆ.  ದೇಹದ ಕಾಯಿಲೆಗೆ ಮನೆಯ ಜನ ವೈದ್ಯರು ಸಹಾಯ ಮಾಡುತ್ತಾರೆ.  ಈ ರೀತಿಯ ಮನಸ್ಸಿನ ಜಡತ್ವಕ್ಕೆ ಪರಿಸರ ಸಮಾಜ ಸ್ನೇಹಿತರು ಎಲ್ಲರದ್ದೂ ಸಹಾಯ ಬೇಕಾಗುತ್ತದೆ.   ಆನಂದವಾಗಿರುವ ಕೆಲಸ ಮಾಡಿಕೊಳ್ಳಬೇಕಾದರೆ ನಮ್ಮವರ ಸಾಂಗತ್ಯ , ಕಲೆಗಳು ಸಾಹಿತ್ಯದ ಪ್ರತಿಭೆ ಇರುವವರಿಗೆ ಕೇಳುಗರ ನೋಡುಗರ ಅವಶ್ಯಕತೆ ಇರುತ್ತದೆ.  ನಾಲ್ಕು ಜನರೊಂದಿಗೆ ಬೆರೆತಾಗ ಜಡತ್ವ ಹೋಗಿ ಚಟುವಟಿಕೆ ಆರಂಭವಾಗುವುದರಿಂದ ಮಾನಸಿಕ ಜಡತ್ವ ಹೋಗಲಾಡಿಸುವಲ್ಲಿ ಸಮಾಜ ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ.  ನಮ್ಮ ಸಂತೋಷಕ್ಕಾಗಿ ನಾವು ಕಲೆಯನ್ನು ಅಭ್ಯಾಸ ಮಾಡಿಕೊಂಡರು ಅದನ್ನು ಪ್ರೋತ್ಸಾಹಿಸುವವರು ಸ್ಪಂದಿಸುವವರ ಅಗತ್ಯವಿರುತ್ತದೆ.  ಹೀಗಾಗಿ ನಮ್ಮವರ ನಮ್ಮ ಸುತ್ತಮುತ್ತಲಿನವರ ಮನಸ್ಸು ಜಡವಾದಾಗ ನಾವು ಕೂಡ ಸಹಾಯ ಮಾಡಬೇಕಾಗುತ್ತದೆ.

ಹೀಗಾಗಿ ಮನೆಯ ಜನರ ಸಮಾಜದ ಸಮುದಾಯದ ಜನರೊಂದಿಗೆ ಬೆರೆತು ಮನಸು ಮಾಡುವ ಮುಷ್ಕರದಿಂದ ಹೊರ ಬರಬಹುದಾಗಿದೆ.


One thought on ““ಮನುಷ್ಯನ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ವಿಶ್ರಾಂತಿ ಬೇಕು.”ಮಾಧುರಿ ದೇಶಪಾಂಡೆ, ಅವರ ಲೇಖನ

Leave a Reply

Back To Top