ಮಹಾರಾಷ್ಟ್ರ ಘಟಕ ಮುಂಬಯಿ ಜಾನಪದ ಜಾತ್ರೆಯ ಸಿರಿ ಸಿಂಚನ, ಇಣುಕು ನೋಟ-ಲಲಿತಾ ಪ್ರಭು

[ನಮ್ಮ ಪಿತ್ರಾರ್ಜಿತ ಆಸ್ತಿ ಅಂದ್ರ ಜಾನಪದ ನೋಡ್ರಪ, ಆ ಕಲೆನ ಅಂತಹುದು ಹೌದಲ್ರಿ ಮತೆ,ಏನ್ ಹಾಡಿಲ್ಲಂತಿರಿ,ಯಾವುದ ಬಿಟ್ಟಾರಂತೀರಿ,ಕುಟ್ಟಾಗ ಕೇಳ್,ಬೀಸಾಗ ಕೇಳ್,ಹೊಲದಾಗ ಕೇಳ್ ಮನೆಗ ಕೇಳ್,ಮದುವೆಗ ಕೇಳ್, ಮಕ್ಕಳ ಮಲಸಾಗ ,ದೇವರನ ನೆನಕೊಂತ,ಹಾಡೋ ಅವರ ಪದಗಳನು ನೆಪ್ಮಾಡಕೊಂಡರ್ ಯವ್ವಾ ಅವ್ರಗೆ ಎಷ್ಟರ ಶಾಣೆತನ ಇದ್ದಿತು,ಇವಾಗಿನ ಕಾಲದಾಗ ಪುಸ್ತಕದಾಗ ಓದಿ,ಹಾ ಮತೆ ಅವೇನ್ ಗೂಗಲ್ಲು, ಎಂತಾ ಟೂಬು ಅಂತಾರಲ್ರಿ ಅವೆಲ್ಲ ನೊಡಕೊಂಡು ಕಲೀತರಂತ, ಆದ್ರ ನಮ್ಮ ಜನಪದರಿಗೆ ಇವೆಲ್ಲಗೊತೆಇರಲಿಲ್ಲ, ತಮಗಾದಆದ  ಅನುಭವ ದಿಂದ ಆಗಿಂದಗ್ಲೆ ಪದಕಟ್ಟಿ ಹಾಡೋ ಜಾಣರಿದ್ರಿ,ಅವರೇನು ಓದು ಬರ ಕಲಿತಿಲ್ಲ ಅಂದ್ರನು ಅವರ ಬುದ್ದಿಚಕ್ತಿ ಎಷ್ಟ್ ಚೊಲೋ ಇತ್ತ್ ನೋಡ್ರಿ, ಎಂತೆಂಥಾ ಗಾದೆ ಮಾತುಗಳು, ಒಗಟು,ಒಡಪು, ಬಯಲಾಟ, ಯಕ್ಷಗಾನ ,ಎಂತೆಂತಹ ಕಲಾಸಕ್ತಿಗೆ ಜೀವಕೊಟ್ಟೊರಿ, ಅವನು ಉಳಿಸಿ ,ಬಳಸಿ,ಬೆಳೆಸೋದು ನಮ್ ಜವಾಬುದಾರಿ ಹೌದಲ್ರ ಮತ್ತೆ, ನಾ ಹೇಳೋದು ವಾಜಮಿ ಐತೆಲ್ರಿ,

ಹಾಂ ಇವೆಲ್ಲ ಯಾಕ್ ಹೇಳಕತ್ತಿನಪ್ ಅಂದ್ರ,
ಮಾರಚು ಇಪ್ಪತ್ತು ನಾಕನೆ ತಾರೀಕು ನಮ್ಮ ಜಾನಪದ ಪರಿಷತ್ ಬೆಂಗಳೂರು(ರಿ)   ಮಹಾರಾಷ್ಟ್ರ ಘಟಕದ ಮುಂಬಯಿದವರು ಎರಡನೆ ವರುಷದ ಸಾಂಸ್ಕೃತಿಕ ಉತ್ಸವವನ್ನು  ಕುರಲಾದ  ಬಂಟ್ಸ್ ಭವನದ ಶ್ರೀಮತಿ ರಾಧಾಬಾಯಿ  ತಿಮ್ಮಪ್ಪ ಆಡಿಟೋರಿಯಂ ನಲ್ಲಿ ಜಾನಪದ ಸಿರಿ ಸಿಂಚನ ಅಂತ, ಗಾಯನ, ನರ್ತನ , ಚಿಂತನ,ಮಂಥನ , ಸಮಗ್ರ ಸಂಗಮ ಅಂತಾರಿ   ಅವೆಲ್ಲ ನನಗಂತೂ ಪ್ಯಾಟಿ ಬಾಸೆ  ಬರಲ್ರಿ ಯಪ್ಪಾ ,ನನಗ್ ಬಂದಂಗ  ಹೇಳ್ತಿನಿ ತಿಳಕೊಳ್ರೀ, ಏನ್ ಚೆಂದ್ ಮಾಡಿದ್ರ್ ಯಪ್ಪಾ  ಬಂದೋರು ಎಲ್ಲಾ , ಅಂದಿದ್ದ,ಅಂದಿದ್ದು ,ಏಟ್ ಸಿಸ್ತು,ಟೇಮಗ್ ಸರಿಯಾಗಿ, ಎಲ್ಲಾನು ಮುಗಿಸಿದ್ರುಂತ,
ಅದೇನ್ ಜಾನಪದ ಒಂದು ಹಾಡ ಐಯತಲ್ರಿ,
” ತಿಂಗಳು ಮುಳುಗಿದವೋ ರಂಗೋಲಿ ಬೆಳಗಿದವು”
ಅಂತ
ಅದರಂಗ ಎಟ್ ಚೆಂದ ರಂಗೋಲಿ ಹಾಕಿ ಅದರಾಗ ಟೇಜ್ ಮ್ಯಾಲೆ ಬರೋ ದೊಡ್ ದೊಡ್ಡರ್ ಹೆಸರು ಭಾಳಾನ ಚೆಂದ ಬರದಿದ್ರು,
ಮತ್ ದೇವಿಗೆ ಹೂವಿನ ಸೆಡಗರಂತು ಕಣ್ಣ್ಸಾಲಂಗಿಲ್ಲ ಅಂತ ಚೆಂದ ಬ್ಯಾರೆ ಬ್ಯಾರೆ ಹೂವಿನ ಹಾರ ಹಾಕಿ ಹಿಂಗ ಎದ್ದ್ಬರತಾಳ ದೇವಿ ಅನ್ನಂಗ ಚೆಂದ ಮಾಡಿದ್ರು,
ಇವೆಲ್ಲಾನು ಡಾ,ಆರ್,ಕೆ ಶೆಟ್ಟಿ ಅವರ ಅಧ್ಯಕ್ಷತೆಯಲಿ ಅವರ ಕಾರ್ಯಕರ್ತರು ಬಾಳ ಸಿಸ್ತಿನಿಂದ ನಿಷ್ಟೆ ಯಿಂದ ಒಗ್ಗಟ್ಟಿನಿಂದ ಮಾಡಿದ್ರು,

ಮತ್ತೆ ಇದಕ್ಕೆಲ್ಲಾ ಯಾರ್ಯಾರು ಬಂದಿದ್ರು ಅಂದ್ರ್.
ಬೆಂಗಳೂರಿಂದ
ಜಾನಪದ ಪರಿಷತ್ತಿನ ಅಧ್ಯಕ್ಷರಾದ. ಡಾ,ಹಿ,ಚಿ, ಬೋರಲಿಂಗಯ್ಯ ಅವರು ತಮ್ಮ ಜಾನಪದ ತಂಡದೊಂದಿಗೆ ಬಂದು ಬಾಳ ಬಾಳ ಕುಸಿ ಪಟ್ಟರು, ಮುಂಬಯಿದಾಗ ನೀವು ಜಾನಪದ ಕಲೆ ಬೆಳೆಸೋದು ಇಷ್ಟೆಲ್ಲಾ ಜನರನ್ನು ಒಟ್ಟಿಗೆ ಸೇರಿಸಿ ಕಲೆಗೆ ಪ್ರೋತ್ಸಾಹ ಕೊಡೊದು,ನನ್ಕರೆಸಿ ಸನ್ಮಾನಿಸಿದ್ದಕೆ ಧನ್ಯವಾದ ಅಂತ ಹೇಳಿ,ಜಾನಪದ ಕಲೆಯ ಅದರಲ್ಲೂ ಕರ್ನಾಟಕ ಜಾನಪದದ ವೈವಿಧ್ಯ ವೈಶಿಷ್ಟ್ಯತೆಯನ್ನು ಅದರ ಘನತೆ ಗೌರವ ಬಗ್ಗೆ ಭಾಳಂದ್ರ್ ಭಾಳ ಚೊಲೋತ್ನಾಗಿ ತಿಳಿಯಂಗ ಮಾತಾಡಿದ್ರು,
ಮತೆ ಅವರ ತಂಡದೋರು ಇಷ್ಟು ಚೆಂದ ಡೊಳ್ಳು ನಗಾರಿ ಬಾರಿಸೋಂಕುತ ಕುಣಿದ್ರು ಅಂದ್ರ್ ಅದಂತು ಶಬ್ಧ” ಝಡಿನಕ್ ಝಣ್ಣಕ್ ಝಡಿನಕ್ ಝಣ್ಣಕ್”ಅಂತ ಭಾರಿ ಮಸ್ತ್ ಮಜಾ ಬರತಿತ್ತ್ ನೋಡ್ರಿ,



 ಪ್ರಾರ್ಥನೆಯನ್ನು ಗಣಪತಿ ಹಾಡಿ
ನೊಂದಿಗೆ ಜಾನಪದ ಶೈಲಾಗ ಇಂಪಾಗಿ ಹಾಡಿದರು ಸುಶೀಲಾ ದೇವಾಡಿಗ ಮತ್ತು ಜೊತೆ ಗಾರತಿಯರು.

ಬಂದ ಅತಿಥಿಗಳಿಗೆ ಆಮಂತ್ರಿಸಿ ಅವರನ್ನು ವೇದಿಕೆ ಮ್ಯಾಲೆ ಕರ್ಕೊಂಡು ಹೋಗು ತನಕ ಅವರು ಬಾರಿಸಿದ್ದ್ ಬಾರಿಸಿದ್ದ್,ಮತೆ ಜತಿಗೆ ಎಲ್ಲಾ ಹೆಣ್ಮಕ್ಕಳು ಕಳಸ ಹಿಡ್ಕೊಂಡು ಅವರನ್ ಸ್ವಾಗತಿಸೋದು ಭಾಳ ಚೆಂದ ಕಾಣತಿತ್ತ್ ಸಭೆದಾಗ,.
ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ರಂತ್ರಿ
ಹರೀಶ್ ಐಕಳ ಶೆಟ್ಟಿ ಅವರು ಮತ್ತೆ,
ಭಂಟ್ಸಂಘದ ಅಧ್ಯಕ್ಷ ರಾದ ಪ್ರವೀಣ ಬೋಜಶೆಟ್ಟಿ ಅವರು ಉದ್ಘಾಟನೆ ಮಾಡಿ ಕರ್ನಾಟಕದ ಜಾನಪದ ಸೊಗಡನ್ನು ಉಳಿಸುವಲ್ಲಿ, ಇಂದಿನ ಪೀಳಿಗೆಗೆ ಪರಿಚಯಿಸುವ ಈ ಜಾನಪದ ಪರಿಷತ್ ಮಹಾರಾಷ್ಟ್ರ ಘಟಕದ ಕೆಲಸವನ್ನು ಕೊಂಡಾಡಿದರು,
ಐಕಳ ಶೆಟ್ಟಿಯವರಂತು ಕುವೆಂಪು ಅವರ ನುಡಿಗಳನ್ನು ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಅಂತಾ ಹೇಳಕೊತ ಇದು ನನ್ಭಾಗ್ಯ ನಿಮ್ಮೆಲ್ಲರ ಪ್ರೀತಿ ವಿಶ್ವಾಸವೇ ಸಂಪತ್ತು ಅಂತ ಭಾಳ ಚೆಂದ ಮಾತಾಡಿದ್ರು,
ಸ್ವಾಗತ ಭಾಷಣವನ್ನು ಸುರೆಂದ್ರ ಹೆಗಡೆ ಅವರು ಚಿಕ್ಕದಾಗಿ ಚೊಕ್ಕವಾಗಿ ಅಚ್ಚುಕಟ್ಟುತನದಿಂದ ಶೋಭೆತಂದು ಕೊಟ್ರು,


 
ಅತಿಥಿಗಳನ್ನು ಗೌರವಿಸೋಗಾ ತಂದನ್ ತಾನನ ತನನನ ತಾನನ
ತಂದನ್ ತಾನನ ತಾನನನೊ ತಾನನೊ ಮಸ್ತ್ ಮಸ್ತ್ ಮಜಾ ಮ್ಯುಜಿಕ ಸೊಂಡ್

ಮತೆ ಈ ಕಾರ್ಯಕ್ರಮಕೆ ಮಾತಿನ ಮಲ್ಲ ಪಕ್ಕಾ ಹುಶಾರ್ ಮತ್ತು ವಿಷಯದ ಬಗ್ಗೆ ಪಕ್ವತೆ ಇರುವ ಅಶೋಕ ಪಕ್ಕಳ ನಿರೂಪಣೆ ಮಾಡಿದರು ಜೊತೆಗೆ ಅಷ್ಟೆ ಅನುಭವಿ ಚತುರ ಕರ್ನೂರು ಮೋ‌ಹನ ರೈ ಅವರು ಸಹ.ಭಾಳ ಚೋಲೊ ನಿರೂಪಣೆ ಮಾಡಿ ನೆರೆದ ಜನರ ಮೆಚ್ಚುಗೆಗೆ ಪಾತ್ರರಾದರು,
 ಎನ್ ಕುಣಿತ,, ಏನ್ಕೋಲಾಟ, ವೀರಗಾಸೆ, ಶಿವನ ಪದ,ಎಲ್ಲಮ್ಮನ ಪದ, ಕಂಬಳಿ ಪದ, ಸುಗ್ಗಿಯ ಪದ,
,ಕೊರವಂಜಿ ಪದ, ಒಂದ್ ಎರಡ್ ಭಾಪರೆ ಭಾಪರೆ ಹದಿನಾಲ್ಕು ತಂಡದವರು ಹಾಡಿಗೆ ಕುಣಿ ಕುಣಿದು ಕುಪ್ಪಳಿಸಿ ಕುಂತ ನೋಡೊ ಜನರನ್ನು ಹುಚ್ಚೆಬ್ಬಿಸಿ ಸಿಳ್ಳೆ ಚಪ್ಪಾಳೆ ತಟ್ಟಿ ಅದೇನ್ ಅಂತಾರಲ್ಲ ಒನಸು ಮೋರು ಒನಸು ಮೋರು ಅಂತಾ ಜೋರಾಗಿ ಅನಕತ್ತಿದ್ರು ನೋಡ್ರಿ, ಅವರನ್ನು ಈ ತರಹ ತಯಾರಿ ಮಾಡಿದ ಆ ಡಾನ್ಸ ಕಲಿಸಿದ ವರಿಗೆ ಒಂದು ಸಲೂಟ ಹೇಳಬೇಕು ನೋಡ್ರಿ,ಮತೆ ಇವರಲ್ಲಿ ಪಸ್ಟು,ಸಕಂಡು,
ತರಡು ಅಂತಾ ಆರಸಾಕ ನಿರ್ನಯ ಮಾಡೊರಿಗೆ ಭಾಳ ಕಷ್ಟ ಆಗಿರಬೇಕು ಯಾರಿಗೆ ಕೊಡ್ಲಿ ಯಾರಿಗೆ ಬಿಡಲಿ ಅನ್ನಂಗಾಗಿತ್ತು ಅವರಿಗೆ,

ಮತೆ ಇನ್ನೊಂದು ವಿಸೇಸ್ ಅಂದ್ರ ಕಮಿಟಿಯ ಮಹಿಳಾ ಸದಸೆಯರು ಪದ್ಮನಾಭ ಸಸಿಹಿತ್ಲು ಅವರ  ನೆರವಿನಿಂದ ಒಂದು ಜಾನಪದ ಹಾಡು ಹಾಡಿದ್ರು” ಕೋಟೆಯ ಮನೆಯೋಳೆ,ಕೋಗಿಲೆ ದನಿಯೋಳೆ ಅಂತ ,,,, ವಾರೆವ್ಹಾ ಏನ್ ಮಸ್ತ್ಹಾಡಿದ್ರು,ಗುಲಾಬಿ ಸೀರಿ,ಹಸಿರು ಕುಬುಸ, ಕೈತುಂಬಾ ಬಳೆಗಳು,ಧರಿಸಿ       ಲಾಲ ಲಲಲ ಲಾಲಲಾಲ ಅಂತ ಭಾಪರೆ
ಮತೆ ಪುರುಷ ಸದಸ್ಯರು ನಾವೆನ್ ಕಡಿಮೆಇಲ್ಲಾಂತ ಅವರು ಸಹ ” ಮುಂಜಾನೆದ್ದು ಕುಂಬಾರಣ್ಣ ಹಾಲುಬಾನಂಡಾನ ” ಹಾರಿ ಹಾರಿ ಮಣ್ಣು ತುಳಿದಾನ ಅಂತ ಅವರು ಕುಣಕೊಂತ , ಜಬರ್ದಸ್ತ್ ಹಾಡಿದ್ರು ನೋಡ್ರಿ .

ಮತ್ತೆ ಇನ್ನೋಂದು ಹಾಸ್ಯ ಪ್ರಸಂಗ  ತಾಳದ ಮದ್ದಳೆ ಅಂತ ತುಳುವಿನಲ್ಲಿ ಮಾಡಿ ನೆರೆದ ಎಲ್ಲರಿಗೂ ನಗೆಕಡಲಿನಲಿ ತೇಲಿಸಿದರು,
ಶ್ರೀನಿವಾಸ ಸಾಫಲ್ಯ ಅವರ ಕಂಚಿನ ಕಂಠದ ಹಾಡಿಗೆ ಇಡೀ ಆಡಿಟೋರಿಯಂ ಸ್ತಬ್ಧವಾಯಿತು, ಎಲ್ಲರೂ ಹೊಗಳಿದ್ದೇ ಹೊಗಳಿದ್ದು,
 
ಸಭಾ ಕಾರ್ಯಕ್ರಮದಾಗ, ಮತ್ತೊಬ್ಬ ಅತಿಥಿ  ಬಾ ಅರುಣ್ ಉಳ್ಳಾಲ ಮಂಗಳೂರು ಇವರ ದಿಕ್ಸೂಚಿ ಭಾಷಣಂತ ಯಪ್ಪಾರೆ ಇಷ್ಟು ಚೆಂದ ಮನಮುಟ್ಟಂಗ ಜಾನಪದದ ಸೊಗಡನ್ನು ಅದರ ಸಿರಿಯನ್ನು ,ಮಗು ಮತೆ ತಾಯಿಯ ನಡುವಿನ ಕೊಂಡಿಗೆ ಹಾಡಿನ ಅವ್ಯಾಜ ಪ್ರೀತಿಯ ಸೆಲೆಯ ಸೆಳೆತವನ್ನು ಸುಂದರವಾಗಿ ಹೇಳುತ್ತಾ ಇಂದಿನ ಮಕ್ಕಳಿಗೆ ಸಂಸ್ಕಾರ,ರೀತಿ,ನೀತಿ ಕಲಿಸುವ ಅನಿವಾರ್ಯತೆಯನು ಆತ್ಮೀಯವಾಗಿ ಹೇಳಿದರು,

ಮತ್ತೊರ್ವ ಮುಖ್ಯ ಅತಿಥಿ ಮುಂಬಯಿ ಪ್ರಸಿದ್ಧ ಲೇಖಕಿ, ಕತೆಗಾರ್ತಿ,ಸೂಕ್ಷ್ಮ ಸಂವೇದನೆಯ ಬರಹಗಾರ್ತಿ,ಮಿತ್ರಾವೆಂಕಟ್ರಾಜ್ ಅವರು ಮಾತನಾಡಿ ಕರಾವಳಿಯ ಜಾನಪದ ಸೊಗಡನ್ನು ಹೇಳುವುದರ ಮುಖಾಂತರ ಅವರ ಕೌಟುಂಬಿಕ ಉದಾಹರಣೆಯನ್ನು ಅತ್ಯಂತ ಮನೋಜ್ಞವಾಗಿ ಹೇಳಿ ದಿನ ನಿತ್ಯ ಬಳಸುವ ಮಾತನಾಡುವ ಕಲೆಯನ್ನೇ ಬಳಸಿಕೊಂಡು ಹಾಡುವ ಹಾಡುಗಳ ಉದಾಹರಣೆಗಳನ್ನು ಹೇಳಿದ್ರು,

ಈ ಕಾರ್ಯಕ್ರಮಕೆ ಶೋಭೆ ಕೊಟ್ಟ ಮುಖ್ಯ ಅಂಶ ಅಂದ್ರೆ, ಈ ಸಲ ಮಹಾರಾಷ್ಟ್ರ ಘಟಕದ ಮುಂಬಯಿ ಇವರು ಜಾನಪದ ವಿಭೂಷಣ ಪ್ರಶಸ್ತಿಯನ್ನು,ರಂಗ ಕಲಾವಿದ, ನಾಟಕಕಾರ, ನಿರ್ದೇಶಕ
ಡಾ,ಕೆ.ಕರುಣಾಕರಕಾಪು ಅವರಿಗೆ ಮೊದಲ ಬಾರಿ ನೀಡಿ ಸನ್ಮಾನಿಸಿ ಕಲೆಗೆ ಗೌರವ ಕೊಟ್ಟು ಕಲಾಕಾರನಿಗೆ ಪ್ರೋತ್ಸಾಹ ಕೊಟ್ಟಿದ್ದು ಬಾಳ ಹೆಮ್ಮೆ ವಿಷಯ ನೋಡ್ರಿ,
ಇವೆಲ್ಲವೂ , ಸಮಯಪ್ರಜ್ಞೆ, ಶಿಸ್ತಿನ ಸಿಪಾಯಿ, ಜಾನಪದ ಘಟಕ ಮುಂಬಯಿ ಅಧ್ಯಕ್ಷರಾದ ಡಾ. ಆರ್,ಕೆ, ಶೆಟ್ಟಿ ಅವರಿಂದಾಗಿ ಎಂದು ಹೇಳಲು ಹೆಮ್ಮೆ , ಅವರಅಧ್ಯಕ್ಷತೆಯ  ನಲುಮೆಯ ನುಡಿಗಳನು ಕೇಳಿ ಸಮಿತಿಯ ಎಲ್ಲರೂ ಸಹಕಾರ ನೀಡಿ ‌ಸಾಂಗೋಪಾಂಗವಾಗಿ ನಡೆಯಲು ಕಾರಣ ನೋಡ್ರಿ,ಅಂತ
ಅಧ್ಯಕ್ಷೀಯ ಭಾಷಣದಲ್ಲಿ ಅವರು ತಮ್ಮ ಬಗ್ಗೆ ಹೇಳಿಕೊಳ್ಳದೆ ನಿಮ್ಮೆಲ್ಲರ ಪ್ರೀತಿಯ ಸಹಕಾರ ಅಂತ ಹೇಳ್ತಾ,ಭಾಗವಹಿಸಿದ ಎಲ್ಲಾ ತಂಡದವರಿಗೆ ನಾನಾಗಿದ್ರೆ ಪಸ್ಟ ಪ್ರೈಜ್ ಕೊಡುತ್ತಿದ್ದೆ ಅಂತಾ ಹೇಳ್ತಾ ಭಾಗವಹಿಸಿದ ಎಲ್ಲರಿಗೂ ಅಭಿನಂದಿಸುತ್ತ,ನೋಡಲು ಬಂದ ಎಲ್ಲಾ  ಅಭಿಮಾನಿಗಳಿಗೂ ಧನ್ಯವಾದ ಹೇಳುತ್ತಾ ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರವನ್ನು ಎತ್ತಿಹಿಡಿದರು ನೋಡ್ರಿ, ಇಂದು ನೋಡ್ರಿ ನಾಯಕರಲ್ಲಿಯ ವಿಶಾಲ ಮನೋಭಾವ ,ಒಟ್ಟಾರೆ ಊಟ ಚಾ ಕಾಫಿ, ಎಲ್ಲವೂ ಮಸ್ತ್ ಮಜಾ ಹೊರಗಡೆ ಕಾಫಿ ತಿಂಡಿ ತಿನ್ನುವಾಗ ಅಲ್ಲಿಕೂಡಾನು ಅದೇನ್ ಅಂತಾರಲ್ಲ ಎಲ್ಇಡಿ ಇಸ್ಕಿರುನುಂತ ಅದರಾಗ ಸಮ ಕಾರ್ಯಕ್ರಮನೇರವಾಗಿ ನೋಡೋ ವ್ಯವಸ್ಥೆ ಮಾಡಿದ್ದನ್ನು, ನೋಡಿ ನಾನಂತು ಬಾಯಿ ತಕ್ಕೊಂಡು ನೋಡ್ತಾ ಇದ್ದೆ ನೋಡ್ರಿ,
ಒಟ್ಟಾರೆ ಅದ್ಧೂರಿಯಾಗಿ ಯಶಸ್ವಿಯಾಗಿ ಕರ್ಮಭೂಮಿ ಯಲಿ ತಾಯಿ ನಾಡಿನ ಜಾನಪದ ಕಲೆಯ ಬೆಳೆಸುವ ಮುಂಬಯಿ ಕನ್ನಡಿಗರ ಅಭಿಮಾನಕೆ ಶರಣು ಶರಣಾರ್ಥಿ.

—————————–

3 thoughts on “ಮಹಾರಾಷ್ಟ್ರ ಘಟಕ ಮುಂಬಯಿ ಜಾನಪದ ಜಾತ್ರೆಯ ಸಿರಿ ಸಿಂಚನ, ಇಣುಕು ನೋಟ-ಲಲಿತಾ ಪ್ರಭು

  1. ತುಂಬಾ ಚೆನ್ನಾಗಿ ಬರೆದಿದ್ದೀರಿ. ಅಭಿನಂದನೆಗಳು.

  2. ಸುಂದರವಾದ ಕಾರ್ಯಕ್ರಮದ ಪಯಣ
    ಕಟ್ಟಿಕೊಟ್ಟಿದ್ದೀರಿ

    ಸುಶಿ

Leave a Reply

Back To Top