ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಮತ್ತೇರುವ ಮುತ್ತಿಲ್ಲ
ಮುಪ್ಪಿನ ದಂಪತಿಗೆ.
ಮುತ್ತಿನಂಥ ಮಾತೊಂದೇ
ಸುಲಲಿತ ಬಾಳಿಗೆ.
ವೃದ್ಧಾಪ್ಯದಿ ಸಹಜ
ಪ್ರೀತಿ ಪ್ರೇಮ ಕೊರತೆ,
ಎಲ್ಲಾ ಮರೆಸುವುದು
ಮೊಮ್ಮಕ್ಕಳ ಮಮತೆ
.
ಯೌವನದಿ ಎಷ್ಟೆಷ್ಟೋ
ಮೃಷ್ಟಾನ್ನ ಕರಗಿಸುತ,
ಮುದಿತನದಿಗಂಜಿ
ಅಂಬಲಿಯೇ ಅಮೃತ.
ನಿವೃತ್ತಿಯಾದವನ
ಹೆಂಡತಿಯ ಖುಷಿಯು
ಮತ್ತೊಮ್ಮೆ ಹನಿಮೂನು
ಆಕೆಯ ಹಂಚಿಕೆಯು.
ಉಮೇದು ದಿನಗಳ
ಒನಪು ನೆನಪಾಗಿ,
ಸುಕ್ಕಾದ ವದನದಿ
ಕದಪು ಕೆಂಪಾಯಿತು.
ಇಂದ್ರಿಯಗಳ ಸುಖ
ಕೊನೆವರೆಗೂ ಸಲ್ಲ.
ವೈರಾಗ್ಯದಿ ಪ್ರೀತಿಯ
ಒರತೆ ಒಣಗಿಲ್ಲ.
——————
ವ್ಯಾಸ ಜೋಶಿ