ಕವಿತಾ ವಿರೂಪಾಕ್ಷ ಅವರ ಕವಿತೆ-ಬದುಕಿನ ನಿಯಮಗಳು…

ಈ ಬದುಕಿನ
ನಿಯಮಗಳೇನೋ
ನನಗೆ ಇಂದಿಗೂ ಅರ್ಥವಾಗುತ್ತಿಲ್ಲ…!

ಪಾಲಿಸ ಹೊರಟಾಗಲೆಲ್ಲಾ
ಬರೀ ಅನರ್ಥಗಳೇ…
ಇದರ ರೀತಿಗೆ ಬೆರಗಾಗಿ
ಕಣ್ಣರಳಿಸಿ ನೋಡಿದರೆ,
ಇವರೆಲ್ಲಾ
ಎಂದು ತಾಲೀಮು
ನಡೆಸಿದರು ಎಂಬುದನ್ನು
ಅರಿಯದೆ ಕಕ್ಕಾಬಿಕ್ಕಿಯಾಗುತ್ತೇನೆ..!!

ನಿಯಮಗಳರಿಯದ ಆಟ
ನೋಡುವವರ ರಂಜಿಸಿ
ಕೊನೆಯಾಗುವುದರಲ್ಲೇ ಮುಗಿಯುತ್ತದೆ ಎನಿಸಿ..,
ನಿಯಮ ಅರಿಯುವ
ಜಿದ್ದಿಗೆ ಬೀಳುತ್ತೇನೆ..!
ಬಹುಶಃ..,
ಇದೇ ಬದುಕಿರಬೇಕೇನೋ….?!!!!

—————————————-

One thought on “ಕವಿತಾ ವಿರೂಪಾಕ್ಷ ಅವರ ಕವಿತೆ-ಬದುಕಿನ ನಿಯಮಗಳು…

Leave a Reply

Back To Top