ಕಾವ್ಯ ಸಂಗಾತಿ
ಸುಜಾತಾ ಪಾಟೀಲ ಸಂಖ
ಮುಗುಳು ನಗೆ ಮಲ್ಲಿಗೆ
ಸಕಲ ಜೀವಿಗಳೆಲ್ಲಾ ಒಂದು ಎಂಬ ಭಾವ ನಮ್ಮಲ್ಲಿ ಮೂಡಲಿ.
ನಮ್ಮಲ್ಲಿಯ ಭೇಧ ಭಾವ
ಮುಗುಳು ನಗೆ ಮಲ್ಲಿಗೆಯಿಂದ ದೂರ ಆಗಲಿ.
ಒಂದೇ ತೊಟದ ಹಲವು ಬಣ್ಣ ಬಣ್ಣದ ನಗುವ ಹೂವುಗಳು ನಾವು.
ಇದರಂತೆ ನಮ್ಮಲ್ಲಿರುವ ಜಾತಿ ಮತ ಪಂಥಗಳ ಹೆಸರು ಹಲವು.
ಭೇದ ಅಳಿದು ಮಲ್ಲಿಗೆ ಮುಗುಳು ನಗೆ ಬಿರಲಿ ಎಲ್ಲರಲ್ಲಿಯೂ.
ಯಾರೇ ಮನೆಯು ಕಟ್ಟಲಿ ಭೂಮಿ ಜಾತಿ ಕೇಳಿತೇ.
ಕ್ಷಣ ಕ್ಷಣವೂ ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೇ.
ಈ ಸೃಷ್ಟಿಯೆಲ್ಲವೂ ಸಮವಾಗಿ ಬಾಳಲಿ ಮುಗುಳು ನಗೆ ಮಲ್ಲಿಗೆಯಂತೆ.
ಮಣ್ಣಿನಿಂದ ಆದ ಈ ಕಾಯ ಮಣ್ಣಿನಿಂದ ಬಿನ್ನವೇ?
ಹೊನ್ನಿನಿಂದ ಆದ ಅಭರಣ ಹೊನ್ನು ಅಲ್ಲವೇ?
ಓ…ದೇವ ನಿನ್ನಿಂದ ಆದ ಈ ಜೀವಿಗಳೆಲ್ಲಾ ನಿನ್ನಂತೆ ಸತ್ಯವಲ್ಲವೇ?
ಶರಣರಂತೆ ಮಾತು ಕ್ರತಿ ಒಂದಾಗಲಿ ನನ್ನ ಪ್ರತಿ ಹೆಜ್ಜೆಯ ಬಾಳು.
ಸಂತ ಮಹಾಂತರ ಸಂಗ ಕರುಣಿಸು, ಈ ನನ್ನ ಪ್ರಾರ್ಥನೆ ಕೇಳು.
ಸಕಲರ ಮುಗುಳು ನಗೆ ಮಲ್ಲಿಗೆಯಾಗಲು ಓ..ದೇವಾ ನನಗೆ ಬುದ್ಧಿ ಹೇಳು.
ಜ್ಞಾನದ ಜ್ಯೋತಿಯಂತೆ ಜಗ ಬೆಳಗುತ್ತಿವೆ ನಮ್ಮ ಶರಣ ಸಂದೇಶಗಳು.
ವರುಣನಂತೆ ಜ್ಞಾನ ಸುಧೆಯನ್ನು ಸುರಿಸುತ್ತಿವೆ ನಿಜ ಆಚಾರಗಳು.
ಬಾಡಿಸಲು ಸಾದ್ಯವಿಲ್ಲ ಯಾರಿಂದಲೂ ಮುಗುಳು ನಗೆಯ ಮಲ್ಲಿಗೆಗಳು.
————————————
ಸುಜಾತಾ ಪಾಟೀಲ ಸಂಖ
ಸೂಪರ್ ಮೇಡಂ ಮುಗುಳುನಗೆ
ಅಕ್ಕಮಹಾದೇವಿ