ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್
ಕಟ್ಟಿಬಿಡು ಸುಸ್ಥಿರ ಸಮಾಜವನು ಮತ್ತೆಂದು ಬೀಳದಂತೆ ನೀನು
ಅಟ್ಟಿಬಿಡು ದುರುಳರ ಹಾವಳಿಯು ಇನ್ನೆಂದು ಬರದಂತೆ ನೀನು
ಮೆಟ್ಟಿಬಿಡು ಮಹಾತ್ಮರು ತೋರಿದ ದಾರಿಯನೆಂದು ಬಿಡದಂತೆ ತುಳಿದುಬಿಡು
ತಟ್ಟಿಬಿಡು ಸ್ವರ್ಗದ ಬಾಗಿಲನು ಬೇರೆಯವರೆಂದು ನೋಡದಂತೆ ನೀನು
ಜಟ್ಟಿಯಂತೆ ಹೋರಾಟ ಮಾಡುತ ನಡೆವೆಯೆಂದು ತೋರಿಸದಂತೆ ಬೆನ್ನು
ಗಟ್ಟಿಮನದಿ ಟೊಂಕಕಟ್ಟಿ ಧೈರ್ಯದಿ ಸಾಗುವೆಯಿಂದು ನಿಲ್ಲದಂತೆ ನೀನು
ಇಟ್ಟಿರುವ ನಂಬಿಕೆಯನು ಉಳಿಸಿ ಕಳೆಯಲೆಂದು ಇದ್ದವನು ನೀನಲ್ಲ
ಕೊಟ್ಟಿರುವ ವಚನಕೆ ಬದ್ದನಾಗುತ ಕೂಡುವೆಯಿಂದು ಏಳದಂತೆ ನೀನು
ಹುಟ್ಟಿಬಂದ ಲೋಕಕೆ ಕಾಣಿಕೆಯನು ಕೊಡಲಿಲ್ಲೆಂದು ಮರುಗೀತು ಮನ
ಗುಟ್ಟಿನ ವಿಷಯವಲ್ಲ ಅಭಿನವನ ಬೇಡುವೆಯಿಂದು ಕಾಣದಂತೆ ನೀನು
———————————————-
ಶಂಕರಾನಂದ ಹೆಬ್ಬಾಳ